Farmers' protest: ಪ್ರತಿಭಟನಾ ಸ್ಥಳದಿಂದ ಜೆಸಿಬಿ ತೆಗೆಯಿರಿ ಇಲ್ಲದಿದ್ದರೇ ಕಠಿಣ ಕ್ರಮ ಎಂದು ರೈತರಿಗೆ ಪೊಲೀಸರ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ.21: ದೇಶದ ರೈತರು ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಮತ್ತೆ ಆರಂಭಿಸಲು ಸಜ್ಜಾಗಿದ್ದಾರೆ. ಈ ವೇಳೆ ರೈತರ ಪ್ರತಿಭಟನಾ ಸ್ಥಳದಿಂದ ತಮ್ಮ ಜೆಸಿಬಿ, ಇಟಾಚಿ ಯಂತ್ರಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ವಾಹನ ಮಾಲೀಕರಿಗೆ ಹರಿಯಾಣ ಪೊಲೀಸರು ಬುಧವಾರ ಎಚ್ಚರಿಕೆ ನೀಡಿದ್ದಾರೆ.
ರೈತರು ತಮ್ಮ ಆದೇಶ ಪಾಲಿಸದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ, ಈ ಅಗೆಯುವ ಯಂತ್ರಗಳನ್ನು ಪ್ರತಿಭಟನಾಕಾರ ರೈತರು ಬಳಸಿದರೆ ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಬಿಂದುಗಳಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಹಾನಿಯಾಗುತ್ತದೆ ಎಂದಿದ್ದಾರೆ.

"ಪೋಕ್ಲೇನ್‌ಗಳು, ಜೆಸಿಬಿಗಳ ಮಾಲೀಕರು ಮತ್ತು ನಿರ್ವಾಹಕರಿಗೆ: ದಯವಿಟ್ಟು ಪ್ರತಿಭಟನಾಕಾರರಿಗೆ ನಿಮ್ಮ ವಾಹನಗಳನ್ನು ನೀಡಬೇಡಿ ಮತ್ತು ಈಗಾಗಲೇ ಹಾಗೇ ಮಾಡಿದ್ದರೆ ಪ್ರತಿಭಟನಾ ಸ್ಥಳದಿಂದ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ. ಏಕೆಂದರೆ ಅವುಗಳನ್ನು ಭದ್ರತಾ ಪಡೆಗಳಿಗೆ ಹಾನಿ ಉಂಟುಮಾಡಬಹುದು. ಇದು ಜಾಮೀನು ರಹಿತ ಅಪರಾಧ ಮತ್ತು ನಿಮ್ಮನ್ನು ಕ್ರಿಮಿನಲ್ ಆರೋಪಿಯನ್ನಾಗಿಸಬಹುದು" ಎಂದು ಹರಿಯಾಣ ಪೊಲೀಸರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಂಎಸ್‌ಪಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗೆ ಎಂಎಸ್‌ಪಿ ದರದಲ್ಲಿ ಐದು ವರ್ಷಗಳ ಕಾಲ ಸರ್ಕಾರಿ ಸಂಸ್ಥೆಗಳಿಂದ ಖರೀದಿಸುವ ಬಿಜೆಪಿ ನೇತೃತ್ವದ ಕೇಂದ್ರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ. ಇದಾದ ನಂತರ ಪಂಜಾಬ್ ಮತ್ತು ಹರಿಯಾಣದ ಎರಡು ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬುಧವಾರ ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಪುನರಾರಂಭಿಸಲಿದ್ದಾರೆ.

ಪ್ರತಿಭಟನಾ ನಿರತ ರೈತರು ಸರ್ಕಾರ ಹಾಕಿರುವ ಬ್ಯಾರಿಕೇಡ್‌ಗಳನ್ನು ಮುರಿಯಲು ಈ ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ಬಳಸುತ್ತಾರೆ. ಹೀಗಾಗಿ ಅಂತರರಾಜ್ಯ ಗಡಿಗಳಿಂದ ಬುಲ್ಡೋಜರ್‌ಗಳು ಮತ್ತು ಇತರ ಮಣ್ಣು ಕೆದಕುವ ಉಪಕರಣಗಳನ್ನು ವಶಪಡಿಸಿಕೊಳ್ಳುವಂತೆ ಹರಿಯಾಣ ಪೊಲೀಸರು ಮಂಗಳವಾರ ಪಂಜಾಬ್ ಪೊಲೀಸರು ಒತ್ತಾಯಿಸಿದ್ದಾರೆ.
ಈ ಯಂತ್ರಗಳು ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳಿಗೆ ಅಪಾಯ ಉಂಟುಮಾಡಬಹುದು ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ತಮ್ಮ ಪಂಜಾಬ್ ಅಧಿಕಾರಿಗಳಿಗೆ ಗೌರವ್ ಯಾದವ್‌ಗೆ ತುರ್ತು ಸಂವಹನದಲ್ಲಿ ತಿಳಿಸಿದ್ದಾರೆ. ನಂತರ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಂವಹನದಲ್ಲಿ, ಪಂಜಾಬ್ ಡಿಜಿಪಿ ಯಾವುದೇ ಜೆಸಿಬಿಗಳು ಮತ್ತು ಇತರ ಭಾರೀ ಮಣ್ಣು ಚಲಿಸುವ ವಾಹನಗಳನ್ನು ಖಾನೌರಿ ಮತ್ತು ಶಂಬು ಗಡಿ ಬಿಂದುಗಳಿಗೆ ತಲುಪಲು ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಹರಿಯಾಣಕ್ಕೆ ಪ್ರವೇಶಿಸಲು ಯೋಜಿಸುತ್ತಿದ್ದಾರೆ. ಡಿಗ್ಗರ್, ಜೆಸಿಬಿ ಸೇರಿದಂತೆ ಭಾರೀ ಮಣ್ಣು ತೆಗೆಯುವ ವಾಹನಗಳನ್ನು ಮತ್ತಷ್ಟು ಮಾರ್ಪಡಿಸಿ ರೈತರು ಪಡೆದುಕೊಂಡಿದ್ದಾರೆ. ಅವುಗಳನ್ನು ಪ್ರತಿಭಟನಾಕಾರರು ಬೀಡುಬಿಟ್ಟಿರುವ ಗಡಿ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ವಿಶ್ವಾಸಾರ್ಹವಾಗಿ ತಿಳಿದುಬಂದಿದೆ ಎಂದು ಹರಿಯಾಣ ಡಿಜಿಪಿ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಫೆಬ್ರವರಿ 13 ರಂದು ದೆಹಲಿಗೆ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರನ್ನು ಹರಿಯಾಣ ಗಡಿಯಲ್ಲಿಯೇ ತಡೆಹಿಡಿಯಲಾಗಿದೆ. ಅಲ್ಲಿ ಅವರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದಾರೆ. ಅಂದಿನಿಂದ ಹರಿಯಾಣ ಮತ್ತು ಪಂಜಾಬ್‌ನ ಗಡಿಯಲ್ಲಿರುವ ಶಂಭು ಮತ್ತು ಖಾನೌರಿ ಪಾಯಿಂಟ್‌ಗಳಲ್ಲಿ ರೈತರು ಬಿಡಾರ ಹೂಡಿದ್ದಾರೆ.ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾವು ದೇಶದ ಇನ್ನೂರಕ್ಕೂ ಹೆಚ್ಚು ಸಂಘಟನೆಗಳ ಜೊತೆಗೆ ಪ್ರತಿಭಟನೆಗೆ ಕರೆ ನೀಡಿದೆ.












Click it and Unblock the Notifications