Government Employee: ಸರ್ಕಾರಿ ನೌಕರರ ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ

ಬೆಂಗಳೂರು, ನವೆಂಬರ್ 05: ಸರ್ಕಾರಿ ನೌಕರರ ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕೇಂದ್ರ ಸರ್ಕಾರದ ಪಿಂಚಣಿ ಮತ್ತು ಇತರ ನಿವೃತ್ತಿ ಪ್ರಯೋಜನಗಳಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ನೋಡಲ್ ಎಜೆನ್ಸಿಯಾದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಈ ಕುರಿತು ಹೊಸ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಪಿಂಚಣಿ ಯೋಜನೆಗಳಲ್ಲಿ ಹೆಣ್ಣು ಮಕ್ಕಳ ಮಹತ್ವವನ್ನು ಗುರುತಿಸಲು ನಿಯಮಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಹೊರಡಿಸಿರುವ ಹೊಸ ನಿರ್ದೇಶನದ ಅನ್ವಯ ಸರ್ಕಾರಿ ನೌಕರರು ನಿವೃತ್ತಿಯಾದ ನಂತರ ಕುಟುಂಬ ದಾಖಲೆಗಳಲ್ಲಿ ಪುತ್ರಿಯರ ಹೆಸರುಗಳನ್ನು ಉಳಿಸಬೇಕು, ಅವರು ಕುಟುಂಬ ಪಿಂಚಣಿಗೆ ಅರ್ಹರಾಗಿದ್ದರೂ ಅಥವಾ ಇಲ್ಲದಿದ್ದರೂ ಅವರ ಹೆಸರನ್ನು ಉಳಿಸಬೇಕು ಎಂದು ಹೇಳಿದೆ.

Family Pension Rules For Govt Employee Daughter Names To Be Retained

ಪುತ್ರಿಯನ್ನು ಕುಟುಂಬದ ಸದಸ್ಯರು ಎಂದು ಪರಿಗಣಿಸಬೇಕು. ಸರ್ಕಾರಿ ನೌಕರರು ಅರ್ಜಿ 4ರಲ್ಲಿ ಪುತ್ರಿಯ ಹೆಸರನ್ನು ಸಲ್ಲಿಸಿದಾಗಲೇ ಆಕೆಯನ್ನು ಅಧಿಕೃತವಾಗಿ ಕುಟುಂಬದ ಸದಸ್ಯೆ ಎಂದು ಪರಿಗಣಿಸಲಾಗುತ್ತದೆ. ಪುತ್ರಿಯು ಕುಟುಂಬ ಪಿಂಚಣಿಗೆ ಅರ್ಹಳಾಗಿದ್ದರೂ ಅಥವಾ ಇಲ್ಲದಿದ್ದರೂ ಈ ನಿಯಮ ಅನ್ವಯಿಸುತ್ತದೆ ಎಂದು ತಿಳಿಸಿದೆ.

ಈ ಹೊಸ ನಿರ್ದೇಶನದ ಅನ್ವಯ ಸರ್ಕಾರಿ ನೌಕರರಿಂದ ಸಲ್ಲಿಸಲಾದ ಕುಟುಂಬದ ವಿವರಗಳಲ್ಲಿ ಪುತ್ರಿಯರ ಹೆಸರುಗಳನ್ನು ಉಳಿಸುವಂತೆ ನೋಡಿಕೊಳ್ಳಲಾಗುತ್ತದೆ. ಇದರಿಂದ ಅವರ ಕುಟುಂಬ ಸದಸ್ಯರ ಸ್ಥಾನವನ್ನು ಬಲಪಡಿಸುತ್ತದೆ ಎಂದು ಹೇಳಿದೆ.

ಯಾವುದೇ ವ್ಯಕ್ತಿ ಸರ್ಕಾರಿ ಸೇವೆಗೆ ಸೇರುವಾಗ ಎಲ್ಲಾ ಮಕ್ಕಳನ್ನು ಒಳಗೊಂಡಂತೆ ಸಂಪೂರ್ಣ ಕುಟುಂಬದ ವಿವರಗಳನ್ನು ಅರ್ಜಿ 4ರಲ್ಲಿ ನೀಡಬೇಕಾಗುತ್ತದೆ. ನಿವೃತ್ತಿಗೆ ಮುನ್ನ ಈ ಮಾಹಿತಿಯನ್ನು ನವೀಕರಿಸಬೇಕು. ನಿವೃತ್ತಿ ನಂತರ ಕುಟುಂಬ ದಾಖಲೆಗಳಿಂದ ಪುತ್ರಿಯರ ಹೆಸರುಗಳನ್ನು ತೆಗೆದುಹಾಕುವ ಬಗ್ಗೆ ಈ ಹಿಂದೆ ಇದ್ದ ಹಲವು ಗೊಂದಲಗಳನ್ನು ಬಗೆಹರಿಸಲಾಗಿದೆ.

ಕುಟುಂಬ ಪಿಂಚಣಿ ಅರ್ಹತೆ: ಪಿಂಚಣಿದಾರರ ಅಥವಾ ಕುಟುಂಬ ಪಿಂಚಣಿದಾರರ ಮರಣಾನಂತರ ಮಾತ್ರ ಕುಟುಂಬ ಪಿಂಚಣಿಯ ಅರ್ಹತೆಗೆ ಇರುವ ನಿಯಮಾವಳಿಗಳನ್ನು ನೋಡಬೇಕಾಗುತ್ತದೆ. ಸರ್ಕಾರಿ ನೌಕರ ಪುತ್ರಿಯ ಹೆಸರನ್ನು ಸೇರಿಸಿದ ಬಳಿಕ ಆಕೆ ವಿವಾಹಿತಳಾಗಿರಲಿ, ಅವಿವಾಹಿತಳಾಗಿರಲಿ, ವಿಧವೆಯಾಗಿರಲಿ ಸೂಚಿಸಿದ ನಮೂನೆಯಲ್ಲಿ ಆಕೆಯ ಹೆಸರು ಸೇರಿಸಿದ ಬಳಿಕ ಆಕೆಯೂ ಅರ್ಹಳಾಗುತ್ತಾಳೆ. ಪಿಂಚಣಿದಾರನ ಮರಣದ ನಂತರ ಕುಟುಂಬ ಪಿಂಚಣಿಗೆ ಅರ್ಹತೆಯನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಸರ್ಕಾರಿ ನೌಕರ ನಿವೃತ್ತನಾಗುವ ಮೊದಲು ಕುಟುಂಬ ಪಿಂಚಣಿಗಾಗಿ ಕುಟುಂಬವ ವಿವರಗಳನ್ನು ಸಲ್ಲಿಸಬೇಕು, ಇದರಲ್ಲಿ ಪುತ್ರಿಯ ಹೆಸರು ಇರಬೇಕು ಎಂದು ಹೊಸ ನಿಯಮ ಸ್ಪಷ್ಟಪಡಿಸಿದೆ. ಪುತ್ರಿ ಅವಿವಾಹಿತಳಾಗಿದ್ದರೆ, ವಿಧವೆಯಾಗಿದ್ದರೆ ಅಥವ ವಿಚ್ಛೇದಿತಳಾಗಿದ್ದರೆ ಆಕೆ 25 ವರ್ಷದ ನಂತರವೂ ಕುಟಂಬ ಪಿಂಚಣಿಯನ್ನು ಪಡೆಯಬಹುದು. ಪುತ್ರಿ ವಿವಾಹವಾದರೆ ಅಥವ ಸಂಪಾದಿಸಲು ಪ್ರಾರಂಭಿಸಿದರೆ ಕುಟುಂಬವು ಪಿಂಚಣಿ ಅರ್ಹತೆಯನ್ನು ಕಳೆದುಕೊಳ್ಳುತ್ತದೆ. ಅಂಗವೈಕಲ್ಯದಂತಹ ವಿನಾಯಿತಿಗಳು ಇದ್ದರೆ ಪಿಂಚಣಿ ಲಭ್ಯವಿರುತ್ತದೆ ಎಂದು ಹೇಳಿದೆ.

ಒಂದು ವೇಳೆ ಕುಟುಂಬದಲ್ಲಿ ಅಂಗವೈಕಲ್ಯ ಹೊಂದಿರುವ ಮಗುವಿದ್ದರೆ ಕುಟುಂಬದ ಎಲ್ಲರಿಗಿಂತ ಆತ/ ಆಕೆಗೆ ಪಿಂಚಣಿ ಪಡೆಯುವ ಮೊದಲ ಹಕ್ಕಿದೆ. ಉದ್ಯೋಗಿ ಕೊನೆಯದಾಗಿ ತೆಗೆದುಕೊಂಡ ವೇತನದ ಆಧಾರದ ಮೇಲೆ ಎನ್‌ಪಿಎಸ್ ಮತ್ತು ಒಪಿಎಸ್ ಅಡಿ ಕುಟುಂಬ ಪಿಂಚಣಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+