ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಸೆ ಮಹಿಳೆ, ಮಗು, ಸೈಕಲ್ ಸವಾರಿ ಚಿತ್ರದ ಅಸಲಿಯತ್ತೇನು?

|
Google Oneindia Kannada News

ನವದೆಹಲಿ, ಮೇ 19: ಮಗುವೊಂದನ್ನು ಬೆನ್ನಿಗೆ ಕಟ್ಟಿಕೊಂಡ ಮಹಿಳೆಯೊಬ್ಬರು ಸೈಕಲ್ ಸವಾರಿ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿದೆ. ಇದು ಲಾಕ್ಡೌನ್ ಪರಿಣಾಮವಾಗಿ ಭಾರತದಲ್ಲಿ ಉಂಟಾದ ವಲಸೆ ಕಾರ್ಮಿಕ ಸಮಸ್ಯೆಯ ಫಲ ಎಂದು ಹೇಳಲಾಗುತ್ತಿದೆ.

Recommended Video

ಕೇಂದ್ರ ಸರ್ಕಾರ ಬೋಗಸ್‌ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ | Oneindia Kannada

ಲಾಕ್ಡೌನ್ ಸಂದರ್ಭದಲ್ಲಿ ತನ್ನ ಊರು ಸೇರಲಿ ವಲಸೆ ಕಾರ್ಮಿಕ ಮಹಿಳೆಯೊಬ್ಬರು ತನ್ನ ಮಗುವನ್ನು ಕರೆದೊಂಡು ಸೈಕಲ್ ಏರಿ ಈ ರೀತಿ ಊರಿನ ಕಡೆಗೆ ಹೊರಟ್ಟಿದ್ದಾರೆ ಎಂದು ಸಂದೇಶ ಹಾಕಲಾಗಿದೆ.

Fake: ಲಾಕ್‌ಡೌನ್‌ನಿಂದ ರೈಲು ಬೋಗಿ ನಡುವೆ ಕುಳಿತು ಮಹಿಳೆ ಪ್ರಯಾಣFake: ಲಾಕ್‌ಡೌನ್‌ನಿಂದ ರೈಲು ಬೋಗಿ ನಡುವೆ ಕುಳಿತು ಮಹಿಳೆ ಪ್ರಯಾಣ

ಸತ್ಯಾಸತ್ಯತೆ: ಮೊದಲಿಗೆ ಇದು ಈ ಕಾಲದ ಚಿತ್ರವಲ್ಲ. ಇದೊಂದು ಹಳೆ ಚಿತ್ರವಾಗಿದೆ. ಇದು ಅಸಲಿಗೆ ಭಾರತಕ್ಕೆ ಸೇರಿದ ಚಿತ್ರವೂ ಅಲ್ಲ. ಗೂಗಲ್ ರಿವರ್ಸ್ ಸರ್ಚ್ ಮೂಲಕ ಪತ್ತೆ ಹಚ್ಚಿದಾಗ ಇದು ನೇಪಾಳದ ಚಿತ್ರ ಎಂದು ತಿಳಿದು ಬಂದಿದೆ.

Fake: Image of lady on bi-cycle being passed of as Indian migrant is from Nepal

Pinterest ನಲ್ಲಿ ಆಕ್ಟಿವ್ ಲೈಫ್ ಎಂಬ ಖಾತೆಯಿಂದ ಮೊದಲಿಗೆ ಹಂಚಲ್ಪಟ್ಟ ಈ ಚಿತ್ರವು ನೇಪಾಳದ ನೇಪಾಳ್ ಗಂಜ್ ನ ಗ್ರಾಮೀಣ ಮಹಿಳೆಯೊಬ್ಬರದ್ದು, ಆ ಭಾಗದಲ್ಲಿ ಸೈಕಲ್ ಸವಾರಿ ಹಾಗೂ ಮಗುವನ್ನು ಈ ರೀತಿ ಬೆನ್ನಿಗೆ ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ.

Fake: ಈ ಉದ್ಯೋಗಿಗಳಿಗೆ ಸರ್ಕಾರದಿಂದ 1.2 ಲಕ್ಷ ಸಿಗುತ್ತಂತೆ!Fake: ಈ ಉದ್ಯೋಗಿಗಳಿಗೆ ಸರ್ಕಾರದಿಂದ 1.2 ಲಕ್ಷ ಸಿಗುತ್ತಂತೆ!

ಆದರೆ, ಈ ಹಳೆ ಚಿತ್ರವೊಂದನ್ನು ಹಲವಾರು ಮಂದಿ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಹಲವು ರೀತಿಯ ಇಲ್ಲಸಲ್ಲದ ಸಂದೇಶಗಳನ್ನು ಹರಡುತ್ತಿದ್ದಾರೆ. ಈ ರೀತಿ ಸಂಗತಿಗಳನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ.

English summary
An image of a lady riding a bi-cycle along with her child has been attributed to the migrant issue in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X