Fake: ಸರ್ಕಾರಿ ನೌಕರರ ಕಚೇರಿ ಅವಧಿ ವಿಸ್ತರಣೆಯಾಗಿಲ್ಲ

ನವದೆಹಲಿ, ಮೇ 6: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಇತ್ಯಾದಿ ಯಾವಾಗ ಸಿಗುವುದೋ ಗೊತ್ತಿಲ್ಲ, ಆದರೆ, ನಕಲಿ ಸುದ್ದಿಗಳಿಂದ ಮುಕ್ತಿಯಂತೂ ಸಿಗುತ್ತಿಲ್ಲ ಕೊರೊನಾವೈರಸ್ ಲಾಕ್ಡೌನ್ ಆರಂಭದಿಂದಲೂ ಸರ್ಕಾರಿ ನೌಕರರ ಸಂಬಳ, ಕಚೇರಿ ಅವಧಿ, ಪಿಂಚಣಿ ಸೇರಿದಂತೆ ಹಲವು ವಿಷಯಗಳ ಮೇಲೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿದೆ. ಇತ್ತೀಚಿನ ಸುಳ್ಳು ಸುದ್ದಿಯೆಂದರೆ ಕೇಂದ್ರ ಸರ್ಕಾರಿ ನೌಕರರ ದಿನನಿತ್ಯದ ಕೆಲಸದ ಅವಧಿ.

ಕೇಂದ್ರ ಸರ್ಕಾರಿ ನೌಕರರ ಡೈಲಿ ಶಿಫ್ಟ್ 10 ಗಂಟೆಗೆ ವಿಸ್ತರಣೆಯಾಗಿದೆ. ಇದು ರಾಜ್ಯ ಸರ್ಕಾರಿ ನೌಕರರಿಗೂ ಅನ್ವವಾಗಬಹುದು ಎಂಬರ್ಥದ ಸಂದೇಶವೊಂದು ಹರಿದಾಡುತ್ತಿದೆ. ಈ ಸುಳ್ಳು ಸುದ್ದಿ ಪ್ರಕಾರ ಸರ್ಕಾರಿ ನೌಕರರ ಕಚೇರಿ ಸಮಯದ ಅವಧಿ ಬೆಳಗ್ಗೆ 9 ರಿಂದ ರಾತ್ರಿ 7 ಗಂಟೆ ತನಕ ಇರಲಿದೆ. ಇದು ಎಲ್ಲಾ ಕಚೇರಿ ಸಿಬ್ಬಂದಿಗೂ ಅನ್ವಯವಾಗಲಿದೆ ಎಂದು ಸುದ್ದಿ ಹಬ್ಬಿದೆ.

ಸತ್ಯಾಸತ್ಯತೆ: ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ), ಈ ರೀತಿ ಯಾವುದೇ ನಿರ್ಣಯವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ, ಕಚೇರಿ ಸಮಯದ ಅವಧಿ ಬದಲಾಗಿಲ್ಲ ಎಂದು ಹೇಳಿದೆ.

Fake: Government is not increasing shift timings of Central Govt employees to 10 hours

7ನೇ ವೇತನ ಆಯೋಗದ ಅನ್ವಯ ಸಿಗಬೇಕಿರುವ ವೇತನದ ಬಗ್ಗೆ , ತುಟ್ಟಿಭತ್ಯೆಯನ್ನು ಜೂನ್ 2021 ತನಕ ತಡೆ ಹಿಡಿಯಲು ಸರ್ಕಾರ ನಿರ್ಧರಿಸಿದೆ. ಇದಾದ ಬಳಿಕ ಈ ಕುರಿತಂತೆ ಸುಳ್ಳು ಸುದ್ದಿಗಳು ಹಬ್ಬಿ ಸರ್ಕಾರಿ ನೌಕರರಿಗೆ ಆತಂಕ ಮೂಡಿತ್ತು. ಆದರೆ, ಪಿಐಬಿ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಕಾಲಕಾಲಕ್ಕೆ ಸ್ಪಷ್ಟನೆ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+