Fake News: ಗುವಾಹಟಿಯನ್ನು ರೆಡ್ ಜೋನ್ ಎಂದು ಘೋಷಿಸಿಲ್ಲ!
ನವದೆಹಲಿ, ಮೇ 12: ಕೊರೊನಾವೈರಸ್ ಹರಡದಂತೆ ಹೊಸದಾಗಿ ರೆಡ್, ಗ್ರೀನ್, ಆರೆಂಜ್ ಜೋನ್ ಗಳನ್ನು ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದ್ದು, ಗುವಾಹಟಿ ಕೆಂಪು ವಲಯಕ್ಕೆ ಸೇರಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲ ತಾಣದಲ್ಲಿ ಹರಡುತ್ತಿದೆ.
ಟ್ವಿಟ್ಟರಲ್ಲಿ ಹರಡಿರುವ ಸುದ್ದಿಯಂತೆ ಗುವಾಹಟಿಯನ್ನು ರೆಡ್ ಜೋನ್ ಎಂದು ಕೇಂದ್ರ ಗೃಹ ಸಚಿವಾಲಯವು ಘೋಷಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಅಧಿಕೃತ ಆದೇಶ ನೀಡಿಲ್ಲ ಎಂದು ಹೇಳಲಾಗಿದೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ಸತ್ಯಾಸತ್ಯತೆ: ಆದರೆ, ಸತ್ಯ ಸಂಗತಿ ಎಂದರೆ ಗುವಾಹಟಿ ಕೆಂಪುವಲಯದಲ್ಲಿಲ್ಲ. ಅಸ್ಸಾಂ ರಾಜ್ಯದಲ್ಲೇ ಕೆಂಪು ವಲಯಗಳಿಲ್ಲ. ವಲಯಗಳನ್ನು ವಿಂಗಡಿಸುವ ಹೊಣೆ ಆರೋಗ್ಯ ಇಲಾಖೆ ನೋಡಿಕೊಳ್ಳುತ್ತಿದೆಯೇ ಹೊರತೂ ಗೃಹ ಇಲಾಖೆಯಲ್ಲ.

ಆಯಾ ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಿ ಆರೋಗ್ಯ ಇಲಾಖೆ ಜೋನ್ ಗಳನ್ನು ಪುನರ್ ವಿಂಗಡಣೆ ಮಾಡಿ ಪ್ರಕಟಿಸುತ್ತಾ ಬಂದಿದೆ. ವಲಯಗಳ ವಿಂಗಡಣೆಯನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಸುಪರ್ದಿಗೆ ನೀಡುವಂತೆ ಹಲವು ರಾಜ್ಯಗಳ ಸಿಎಂಗಳು ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications