ಯೂಟ್ಯೂಬ್ ನೋಡಿ 30 ಸಾವಿರದಲ್ಲಿ ಶುರು ಮಾಡಿದ ಸ್ಯಾಂಡ್‌ವಿಚ್ ವ್ಯಾಪಾರ ತರ್ತಿದೆ ಯುವಕನಿಗೆ ತಿಂಗಳಿಗೆ 25 ಲಕ್ಷ

ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿದರೆ, ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳದೇ ಹೊಸದನ್ನಾ ಎನ್ನನ್ನಾದರೂ ಪ್ರಯತ್ನಿಸಿದರೆ ಅವಕಾಶದ ಮತ್ತೊಂದು ಬಾಗಿಲು ತೆರೆಯುತ್ತದೆ ಎನ್ನುವುದಕ್ಕೆ ಭೋಪಾಲ್‌ನ ಅಭಿಷೇಕ್ ಸಾಹು ಅವರೇ ಒಂದೊಳ್ಳೆ ಉದಾಹರಣೆ. ವ್ಯಾಪಾರದಲ್ಲಿ ಎದುರಾದ ಒಂದು ಸೋಲು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಬಹುದು ಎಂಬುದನ್ನ ಇವರು ಸಾಬೀತು ಮಾಡಿದ್ದಾರೆ.

ಕೇವಲ 30 ಸಾವಿರ ರೂಪಾಯಿ ಬಂಡವಾಳದಲ್ಲಿ ಆರಂಭಿಸಿದ ಇವರ ಸ್ಯಾಂಡ್‌ವಿಚ್ ವ್ಯಾಪಾರ ಇಂದು ತಿಂಗಳಿಗೆ ಬರೋಬ್ಬರಿ 25 ಲಕ್ಷ ರೂಪಾಯಿ ಆದಾಯ ತಂದುಕೊಡುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಇವರ ಯಶೋಗಾಥೆ ಈಗ ಭಾರಿ ವೈರಲ್ ಆಗಿದ್ದು, ಹೊಸ ಕನಸು ಹೊತ್ತು ಬರುವ ಯುವ ಉದ್ಯಮಿಗಳಿಗೆ ದೊಡ್ಡ ಮಟ್ಟದ ಸ್ಫೂರ್ತಿಯಾಗಿದೆ.

Failed Cafe Owner Learns on YouTube Takes 30K Loan amp amp Now Earns Rs 25 Lakh Month Selling Sandwiches

ಇಂಟರ್ನೆಟ್ ಕೆಫೆ ವಿಫಲ: ಹೊಸ ಹೆಜ್ಜೆಗೆ 30 ಸಾವಿರ ರೂ. ಸಾಲ

ಸುಮಾರು 15 ವರ್ಷಗಳ ಹಿಂದೆ ಭೋಪಾಲ್‌ಗೆ ಬಂದಿದ್ದ ಅಭಿಷೇಕ್ ಸಾಹು, ಮೊದಲಿಗೆ ಒಂದು ಇಂಟರ್ನೆಟ್ ಕೆಫೆ ಆರಂಭಿಸಿದ್ದರು. ಆದರೆ, ಏಕೋ ಆ ವ್ಯಾಪಾರ ಅವರ ಕೈಹಿಡಿಯಲಿಲ್ಲ. ಕೇವಲ ಒಂದು ವರ್ಷದೊಳಗೆ ಅನಿವಾರ್ಯವಾಗಿ ಕೆಫೆಯನ್ನ ಮುಚ್ಚಬೇಕಾಯಿತು. ಈ ಮೊದಲ ಸೋಲಿನಿಂದ ಅವರು ಸುಮ್ಮನೆ ಕೂರಲಿಲ್ಲ. ಬದಲಿಗೆ ವಿಭಿನ್ನವಾದ ಮತ್ತೊಂದು ಪ್ರಯತ್ನಕ್ಕೆ ಕೈಹಾಕಲು ನಿರ್ಧರಿಸಿದರು.

ಈ ಬಾರಿ ಅವರು ಆರಿಸಿಕೊಂಡಿದ್ದು ಆಹಾರೋದ್ಯಮವನ್ನ. ಆದರೆ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ಹೀಗಾಗಿ ಕೇವಲ 30,000 ರೂಪಾಯಿ ಸಾಲ ಪಡೆದು, ಒಂದು ಸಣ್ಣ ತಳ್ಳುಗಾಡಿಯಲ್ಲಿ ವ್ಯಾಪಾರ ಶುರು ಮಾಡಲು ಮುಂದಾದರು. ಅಂದು ಇಟ್ಟ ಆ ಸಣ್ಣ ಹೆಜ್ಜೆಯೇ ಇಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ.

ಯೂಟ್ಯೂಬ್ ಮೂಲಕ ಕಲಿಕೆ: 'ಹರಿಹರ್ ಸ್ಯಾಂಡ್‌ವಿಚ್' ಆರಂಭ

ಹೊಸ ವ್ಯಾಪಾರ ಆರಂಭಿಸುವ ಮುನ್ನ ಅಭಿಷೇಕ್ ಸಾಹು ಅವರಿಗೆ ಸ್ಯಾಂಡ್‌ವಿಚ್ ಮಾಡಲು ಬರುತ್ತಿರಲಿಲ್ಲ. ಇದಕ್ಕಾಗಿ ಅವರು ತಂತ್ರಜ್ಞಾನದ ಮೊರೆ ಹೋದರು. ಅಂದರೆ, ಯೂಟ್ಯೂಬ್ ಮೂಲಕ ಕಲಿಕೆ ಆರಂಭಿಸಿದರು. ಬಗೆಬಗೆಯ ರುಚಿಕರ ಸ್ಯಾಂಡ್‌ವಿಚ್ ಮಾಡುವುದನ್ನ ವಿಡಿಯೋಗಳ ಮೂಲಕವೇ ನೋಡಿ ಕಲಿತುಕೊಂಡರು. ಬಳಿಕ 30 ಸಾವಿರ ರೂಪಾಯಿ ಬಂಡವಾಳದಲ್ಲಿ 'ಹರಿಹರ್ ಸ್ಯಾಂಡ್‌ವಿಚ್' ಎಂಬ ಹೆಸರಿನಲ್ಲಿ ಒಂದು ಸಣ್ಣ ಗಾಡಿಯನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಆರಂಭಿಸಿದರು. ಅವರ ಸ್ಯಾಂಡ್‌ವಿಚ್‌ಗಳ ರುಚಿ, ಸ್ವಚ್ಛತೆ ಮತ್ತು ಗುಣಮಟ್ಟ ಗ್ರಾಹಕರನ್ನ ಬಹುಬೇಗ ಸೆಳೆಯಿತು.

ಸೋಷಿಯಲ್ ಮೀಡಿಯಾ ಪವರ್: ಮಾಸಿಕ 25 ಲಕ್ಷ ಆದಾಯ

ಅಭಿಷೇಕ್ ಅವರ ವ್ಯಾಪಾರ ಬೆಳವಣಿಗೆಗೆ ಸೋಷಿಯಲ್ ಮೀಡಿಯಾ ಕೂಡ ದೊಡ್ಡ ಮಟ್ಟದಲ್ಲಿ ನೆರವಾಯಿತು. ಇನ್‌ಸ್ಟಾಗ್ರಾಮ್‌ನಲ್ಲಿ ಇವರ ಸ್ಯಾಂಡ್‌ವಿಚ್ ತಯಾರಿಸುವ ವಿಡಿಯೋವೊಂದು ಭಾರಿ ವೈರಲ್ ಆದ ಬಳಿಕ ಭೋಪಾಲ್‌ನ ಮೂಲೆ ಮೂಲೆಗಳಿಂದ ಗ್ರಾಹಕರು ಹರಿದು ಬರಲಾರಂಭಿಸಿದರು.

ಗ್ರಾಹಕರು ಇವರ ರುಚಿಕರ ಸ್ಯಾಂಡ್‌ವಿಚ್ ಸವಿಯಲು 30 ರಿಂದ 50 ನಿಮಿಷಗಳ ಕಾಲ ಕಾದು ನಿಲ್ಲುತ್ತಾರೆ. ಎಕ್ಸ್ ಖಾತೆಯಲ್ಲಿ ಪ್ರಥಮ್ ಎಂಬುವವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, 'ಹರಿಹರ್ ಸ್ಯಾಂಡ್‌ವಿಚ್' ವಾರದ ದಿನಗಳಲ್ಲಿ 600ಕ್ಕೂ ಹೆಚ್ಚು ಹಾಗೂ ವಾರಾಂತ್ಯದಲ್ಲಿ 1,000ಕ್ಕೂ ಹೆಚ್ಚು ಸ್ಯಾಂಡ್‌ವಿಚ್‌ಗಳನ್ನ ಮಾರಾಟ ಮಾಡುತ್ತದೆ. ಈ ಮೂಲಕ ಮಾಸಿಕ 25 ಲಕ್ಷ ಆದಾಯ ಗಳಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

ಗ್ರಾಹಕರ ಮೆಚ್ಚುಗೆಯ ಮಹಾಪೂರ

ಅಭಿಷೇಕ್ ಅವರ ಈ ಕಠಿಣ ಪರಿಶ್ರಮ ಮತ್ತು ಯಶಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸುತ್ತಾ, "ಇಲ್ಲಿ 25 ಲಕ್ಷ ರೂಪಾಯಿ ವಹಿವಾಟು ಎಂಬುದು ಅಷ್ಟು ಮುಖ್ಯವಲ್ಲ, ಬದಲಾಗಿ ಮೊದಲ ವ್ಯಾಪಾರ ಸೋತಾಗ ಕೇವಲ 30 ಸಾವಿರದಲ್ಲಿ ಮತ್ತೆ ಎದ್ದು ನಿಂತು ಹೋರಾಡಿದ ಅವರ ಆತ್ಮವಿಶ್ವಾಸ ಮೆಚ್ಚುವಂತದ್ದು. ಸಣ್ಣ ಪ್ರಯತ್ನಗಳು ಮತ್ತು ನಿರಂತರ ಶ್ರಮ ಖಂಡಿತ ದೊಡ್ಡ ಯಶಸ್ಸಿಗೆ ಕಾರಣವಾಗುತ್ತದೆ," ಎಂದು ಕೊಂಡಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+