Fact Check: ತರಕಾರಿ ಮಾರಾಟಗಾರರಿಂದ ಕೊರೊನಾ ಸೋಂಕು?

ನವದೆಹಲಿ, ಏಪ್ರಿಲ್ 9: ತರಕಾರಿ ಮಾರಟಗಾರರಿಂದ ಕೊರೊನಾ ಸೋಂಕು ಹರಡುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ತರಕಾರಿ ಮಾರಾಟಗಾರರಿಂದ ಕೊರೊನಾ ವೈರಸ್ ಹರಡುತ್ತೆ ಎಂದು ಹೇಳುವ ವಿಡಿಯೋ ಒಂದು ಹರಿದಾಡುತ್ತಿದ್ದು ಅದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.

ತರಕಾರಿ ವ್ಯಾಪಾರಿಗಳು ತರಕಾರಿ, ಹಣ್ಣುಗಳ ಮೇಲೆ ಎಂಜಲು ತುಪ್ಪುತ್ತಿದ್ದಾರೆ. ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎನ್ನುವ ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

fact-check-vegetable-vendors-are-spreading-covid-19-is-this-True

ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೊರೊನಾ ವೈರಸ್‌ಗೆ ತುತ್ತಾಗಿರುವ ಜನರು, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಸಿಬ್ಬಂದಿ, ಪೊಲೀಸರ ಮೇಲೆ ತಾರತಮ್ಯ ತೋರಲಾಗುತ್ತಿದೆ. ಅವರನ್ನು ದೂರ ಇರಿಸಲಾಗುತ್ತಿದೆ. ಆದರೆ ಅವರಿಂದಲೇ ಎಲ್ಲರು ಬದುಕುತ್ತಿರುವುದು ಎಂದು ಜನರು ಮರೆತಿದ್ದಾರೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಪ್ರಾರಂಭವಾದ ದಿನದಿಂದಲೂ ಕೊರೊನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ಸುದ್ದಿ ಹರಿದಾಡುತ್ತಿದೆ. ಶೀಘ್ರವೇ ಇಂತಹ ಸುಳ್ಳುಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.

ಆರೋಗ್ಯ ಕಾರ್ಯಕರ್ತರು, ನರ್ಸ್, ವೈದ್ಯರು, ಸ್ವಚ್ಛತಾ ಸಿಬ್ಬಂದಿ ಎಲ್ಲರೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜೊತೆ ಜನರು ಕೈಜೋಡಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅವರ ಕುಟುಂಬವನ್ನು ಮರೆತು ನಮಗಾಗಿ ದಿನದ 24 ಗಂಟೆಯೂ ಕೊವಿಡ್ 19 ವಿರುದ್ಧ ಹೋರಾಟುತ್ತಿರುವವರನ್ನು ಗೌರವಿಸಿ ಎಂದು ತಿಳಿಸಿದೆ. ಕೆಲವು ದಿನಗಳ ಹಿಂದೆ ಏಪ್ರಿಲ್12 ರಂದು ಸಂಜೆ 5 ಗಂಟೆ ಎದ್ದು ನಿಂತು ಮೋದಿಗೆ ಗೌರವ ಸೂಚಿಸಿ ಎನ್ನುವ ಸುಳ್ಳುಸುದ್ದಿ ಹರಿದಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+