Fake: ಕೇಂದ್ರ ಸರ್ಕಾರಿ ನೌಕರರ LTC ಭತ್ಯೆ ಕಡಿತವಾಗುತ್ತಿಲ್ಲ
ನವದೆಹಲಿ, ಏಪ್ರಿಲ್ 28: ಕೊರೊನಾ ವೈರಸ್ ವಿರುದ್ಧ ಹೋರಾಟ ಜೊತೆಗೆ ಕೇಂದ್ರ ಸರ್ಕಾರಕ್ಕೆ ಸುಳ್ಳುಸುದ್ದಿ ಹಬ್ಬುವುದನ್ನು ತಡೆಗಟ್ಟುವುದು ಕೂಡಾ ಪ್ರಮುಖ ಕೆಲಸವಾಗಿ ಬಿಟ್ಟಿದೆ. ಸರ್ಕಾರಿ ನೌಕರರು, ಸಂಬಳ, ಪಿಂಚಣಿ, ನಿವೃತ್ತಿ, ಬ್ಯಾಂಕಿಂಗ್ ವ್ಯವಹಾರ, ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರಿಯನ್ನಾಗಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
ಹಿಂದಿ ವಾಹಿನಿಯೊಂದರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಎಲ್ ಟಿಸಿ ಕಡಿತಗೊಳ್ಳಲಿದೆ ಎಂಬ ಸುದ್ದಿ ಬಂದಿದ್ದೆ ತಡ ನೌಕರರಲ್ಲಿ ಆತಂಕ ಶುರುವಾಗಿತ್ತು. ರಜೆ ದಿನದ ಭತ್ಯೆ, ಒಟಿಎ, ಮೆಡಿಕಲ್ ಭತ್ಯೆ ಸೇರಿದಂತೆ ಹಲವು ಭತ್ಯೆಗಳಲ್ಲಿ ಕಡಿತ ಆರಂಭವಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಸತ್ಯಾಸತ್ಯತೆ: ಏಪ್ರಿಲ್ 8, 2020ರಂದು ಖರ್ಚು ವೆಚ್ಚಗಳ ಕುರಿತಂತೆ ವಿತ್ತ ಇಲಾಖೆ ನೀಡಿದ್ದ ಆದೇಶ ಮಾಹಿತಿಯನ್ನು ಆಧಾರಿಸಿ ತಪ್ಪಾಗಿ ವರದಿ ಮಾಡಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವಾಲಯ ಸ್ಪಷ್ಟನೆ ನೀಡಿ, ಈ ರೀತಿ ಯಾವುದೇ ಆದೇಶವನ್ನು ಇಲಾಖೆ ಹೊರಡಿಸಿಲ್ಲ ಎಂದಿದೆ.

ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!
ವೇತನ ಆಯೋಗ ಶಿಫಾರಸ್ಸಿನಂತೆ ಸಂಬಳ, ಭತ್ಯೆ ಎಲ್ಲವೂ ಸಿಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನಿವೃತ್ತಿ ವಯಸ್ಸು 50 ವರ್ಷಕ್ಕೆ ತಗ್ಗಿಸಲಾಗುತ್ತದೆ, ಪಿಂಚಣಿ ಮೊತ್ತ ಕಡಿತ, ಸಂಬಳ ಅಥವಾ ಭತ್ಯೆ ಕಡಿತ ಎಲ್ಲವೂ ಸುಳ್ಳು ಸುದ್ದಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಲಾಕ್ಡೌನ್ ಆರಂಭವಾದಾಗಿನಿಂದಲೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೇ 50ರಷ್ಟು ಮಾತ್ರ ಸರ್ಕಾರಿ ಸಿಬ್ಬಂದಿಗಳು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಗತ್ಯ ಸೇವೆಗೆ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗಿದೆ.












Click it and Unblock the Notifications