• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಬಿಸಿ ನೀರಿನ ಹಬೆಗೆ ವೈರಾಣು ಬೆದರಿ ಹೋಗುತ್ತಾ?

|

ಬೆಂಗಳೂರು, ಮಾರ್ಚ್ 31: ಕೊರೊನಾವೈರಸ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಕೆಲವು ಆರೋಗ್ಯ ಸಲಹೆ ಮಾದರಿಯಲ್ಲಿ ಕೊವಿಡ್19 ಕುರಿತಂತೆ ಕೆಲವು ತಪ್ಪು ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿವೆ.

ಕೊವಿಡ್19 ಕುರಿತ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸೂಚನೆ ಕೊಟ್ಟಿದ್ದಾರೆ.

Fact Check: ಕೊರೊನಾ ಚಿಕಿತ್ಸೆಗೆ ನಿಂಬೆಹಣ್ಣು, ಅರಿಶಿನ ರಾಮಬಾಣವೇ?

ಸುಳ್ಳು ಸುದ್ದಿ: ಬಿಸಿ ನೀರಿನ ಹಬೆಯನ್ನು ತೆಗೆದುಕೊಂಡು ಉಸಿರಾಡಿದರೆ ಕೊರೊನಾ ವೈರಾಣು ತೊಲಗುತ್ತದೆ.

ಚೀನಾದ ತಜ್ಞ ವೈದ್ಯರು ಬಿಸಿ ನೀರಿನ ಹಬೆಯಲ್ಲಿ ಉಸಿರು ಎಳೆದುಕೊಂಡರೆ ಕೊರೊನಾವೈರಸ್ ಸಾಯುತ್ತದೆ. ವೈರಾಣು ನಿಮ್ಮ ಮೂಗು, ಗಂಟಲು ಅಥವಾ ಶ್ವಾಸಕೋಶ ಸೇರಿದ್ದರೂ ಈ ರೀತಿ ಮಾಡುವುದರಿಂದ ಮುಕ್ತಿ ಸಿಗಲಿದೆ. ಬಿಸಿ ನೀರಿನ ಹಬೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕೊರೊನಾವೈರಾಣು ಹೊಂದಿಲ್ಲ ಈ ಸುದ್ದಿಯನ್ನು ನಿಮ್ಮ ಸ್ನೇಹಿತರು ಹಾಗೂ ಆಪ್ತರಿಗೆ ಈ ಕೂಡಲೇ ಹಂಚಿ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಕೋವಿಡ್19 ಚಿಕಿತ್ಸೆಗೆ ಪ್ಯಾರಸಿಟಮಾಲ್ ಸಾಕು ಎಂದ್ರೆ ನಂಬಬೇಡಿ!

ಸತ್ಯಾಸತ್ಯತೆ: ಕೊರೊನಾವೈರಸ್ ವಿರುದ್ಧ ಹೋರಾಡಲು ಯಾವುದೇ ಲಸಿಕೆ ಕಂಡು ಹಿಡಿದಿಲ್ಲ, ಯಾವುದೇ ಆಹಾರ ಸೇವನೆ, ಬಿಸಿ ನೀರು ಸೇವನೆ, ಹಬೆಯಲ್ಲಿ ಉಸಿರಾಟ ಇದರಿಂದ ಪರಿಹಾರ ಸಾಧ್ಯ ಎಂದು ಯಾವ ವೈದ್ಯರು ದೃಢಪಡಿಸಿಲ್ಲ. ಹೀಗಾಗಿ ಇಂಥ ಸುಳ್ಳುಸುದ್ದಿಯನ್ನು ನಂಬಬೇಡಿ. ಹಬೆಯಿಂದ ಕೊರೊನಾವೈರಾಣು ಸಾಯುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷಿಯಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು ವೈರಾಣು ತಡೆಗಟ್ಟಬಹುದು.

English summary
Fact Check: A message is doing the rounds on the social media that inhaling hot steam from hot water will kill coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X