Fact Check: ಜಮ್ಮು ಮತ್ತು ಕಾಶ್ಮೀರದಲ್ಲಿ ಸೈಟ್ ಮಾರಾಟಕ್ಕಿದೆ, ಎಚ್ಚರ!

ನವದೆಹಲಿ, ಆಗಸ್ಟ್ 06: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡನೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ ಹೆಚ್ಚಾಗಿದೆ. ಜೊತೆಗೆ ಕೆಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.

ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ 2019 ಅನುಮೋದನೆ ಪಡೆದುಕೊಂಡಿರುವ ಮೋದಿ ಸರ್ಕಾರ, ಕಣಿವೆ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಿದೆ.

ಜಮ್ಮು ಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಕ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪುದುಚೇರಿಯಂತೆ ಚುನಾವಣೆ ಎದುರಿಸಿ ಜನಾದೇಶ ಪಡೆದ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಹೊಂದಬಹುದು. ಆದರೆ, ಲಡಾಕ್ ಮಾತ್ರ ಅಂಡಮಾನ್ ಮತ್ತು ನಿಕೋಬಾರ್ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಂತೆ ಉಳಿಯಲಿದೆ.

Fact Check: Dont believe these FAKE messages on sale of property in Kashmir

ಈ ನಡುವೆ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಹೊರತಾಗಿ ಬೇರೆ ಯಾರೂ ಅಲ್ಲಿ ಆಸ್ತಿಯನ್ನು ಹೊಂದಿರುವಂತಿಲ್ಲ ಎಂಬ ನಿಯಮ ಈಗ ಅಸ್ತಿತ್ವ ಕಳೆದುಕೊಂಡಿದ್ದು, ಬೇರೆ ರಾಜ್ಯದವರು ಕಾಶ್ಮೀರದಲ್ಲಿ ನಿವೇಶನ ಖರೀದಿಸಬಹುದಾಗಿದೆ. ' 30 X 40 ಸೈಟ್ ಜಮ್ಮು, ಕಾಶ್ಮೀರದಲ್ಲಿ ಮಾರಾಟಕ್ಕಿದೆ!' ಎಂಬ ಮೀಮ್ಸ್ ಗಳ ನಡುವೆ, ಸೈಟ್ ಮಾರಾಟಕ್ಕಿದೆ ಎಂದು ಫೋನ್ ನಂಬರ್ ವುಳ್ಳ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶದ ಸತ್ಯಾಸತ್ಯತೆ ಇಲ್ಲಿದೆ.

ಏನೆಂದು ಎಸ್ಎಂಎಸ್: "Book your land at Kashmir Laal Chowk Rd from 11.25 lakh starting with GST. KASHMIR 370 removed. Limited stock! For more details call on 9019292918," ಎಂಬ ಸಂದೇಶ ಹಬ್ಬುತ್ತಿದ್ದು, ಶ್ರೀನಗರದ ಲಾಲ್ ಚೌಕ್ ರಸ್ತೆಯಲ್ಲಿ ಆಸ್ತಿ ಹೊಂದಿರಿ ಎಂದು ಕರೆ ನೀಡಲಾಗುತ್ತಿದೆ.

ಸುದ್ದಿ ಮೂಲ ಹುಡುಕುತ್ತಾ...

ಈ ಸಂದೇಶದ ನಿಖರತೆ ಬಗ್ಗೆ ಪರಿಶೀಲಿಸಿದ ಇಂಡಿಯಾ ಟುಡೇ, ಈ ಸಂದೇಶ ಸುಳ್ಳು ಮಾಹಿತಿಯಲ್ಲ ಎಂದಿದೆ. ಇಲ್ಲಿ ಕೊಟ್ಟಿರುವ ಸಂಖ್ಯೆಗೆ ಕರೆ ಮಾಡಿದರೆ ಪಶ್ಚಿಮ ಬಂಗಾಳದ ರಿಯಲ್ ಎಸ್ಟೇಟ್ ಕಂಪನಿ ಈಡೆನ್ ರಿಯಲ್ಟಿಗೆ ಕನೆಕ್ಟ್ ಆಗುತ್ತಿದೆ. ಬೆಂಗಾಳದಲ್ಲಿ ಅನೇಕ ಸರ್ಕಾರಿ ಸ್ವಾಮ್ಯದ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಈ ಸಂಸ್ಥೆ ಅಸ್ತಿತ್ವದ ಬಗ್ಗೆ ಶಂಕೆ ಇಲ್ಲ.

ಆದರೆ, ಇದೇ ಸಂಸ್ಥೆ ಈ ಸಂದೇಶವನ್ನು ಹರಡುತ್ತಿದೆಯೆ? ಎಂದು ಪ್ರಶ್ನಿಸಿದಾಗ, ಸಂಸ್ಥೆಯ ವಕ್ತಾರರು ಪ್ರತಿಕ್ರಿಯಿಸಿ, "ಈ ಸಂದೇಶದಲ್ಲಿರುವ ಮೊಬೈಲ್ ಸಂಖ್ಯೆ ನಮ್ಮ ಸಂಸ್ಥೆಗೆ ಸೇರಿದ್ದಾಗಿದೆ, ಆದರೆ, ಮಿಕ್ಕ ಸಂದೇಶ ಸುಳ್ಳು, ಕಾಶ್ಮೀರದಲ್ಲಿ ನಾವು ವಹಿವಾಟು ನಡೆಸುತ್ತಿಲ್ಲ, ಹಾಗೂ ಅಲ್ಲಿ ಆ ರೇಟಿಗೆ ಸೈಟ್ ಕೊಡಿಸುವ ಬಗ್ಗೆ ನಮಗೆ ಮಾಹಿತಿ ಇಲ್ಲ" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+