ಫೇಸ್ ಬುಕ್ ರೋಬೋಗಳ ಗುಪ್ತ ಸಂಭಾಷಣೆ: ಮನುಷ್ಯನ ನಾಶದ ಮುನ್ನೆಚ್ಚರಿಕೆ?

Posted By:
Subscribe to Oneindia Kannada

ನವದೆಹಲಿ, ಜುಲೈ 31: ಮನುಷ್ಯ ಸೃಷ್ಟಿಸಿದ ಯಂತ್ರ ಮಾನವರು, ತಮ್ಮ ಆಲೋಚನಾ ಶಕ್ತಿಯನ್ನು ಉಪಯೋಗಿಸಿಕೊಂಡು ಮನುಷ್ಯನಿಗೆ, ಜಗತ್ತಿಗೆ ಮಾರಕವಾಗಬಹುದು ಎಂಬ ಚಿಂತನೆಯ ಆಧಾರದಲ್ಲಿ ಹಾಲಿವುಡ್ ಹಾಗೂ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅನೇಕ ಚಿತ್ರಗಳು ಬಂದು ಹೋಗಿವೆ.

ಫೇಸ್ ಬುಕ್ ನಲ್ಲಿ ಹಾಕೋ ಕಾರು, ಪಿಕ್ನಿಕ್ ಫೋಟೋ ಮೇಲೂ IT ಕಣ್ಣು!

ಇಂಗ್ಲೀಷ್ ನ ಟರ್ಮಿನೇಟರ್, ತಮಿಳಿನ ರೋಬೋ ಚಿತ್ರಗಳು ಇದೇ ಪರಿಕಲ್ಪನೆಯನ್ನು ಆಧರಿಸಿ ಹೊರಬಂದ ಚಿತ್ರಗಳು. ಆದರೆ, ಈ ಚಿತ್ರಗಳು ಕೇವಲ ಕಾಲ್ಪನಿಕವಲ್ಲ. ಮನುಷ್ಯನೇ ಸೃಷ್ಟಿಸಿದ ರೋಬೋಗಳು ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದಲ್ಲಿ ಮನುಷ್ಯನಿಗೇ ಮಾರಕವಾಗಬಲ್ಲವು ಎಂಬುದನ್ನು ಜನಪ್ರಿಯ ಜಾಲತಾಣವಾದ ಫೇಸ್ ಬುಕ್ ನ ಸರ್ವರ್ ಗಳನ್ನು ನಿಭಾಯಿಸುತ್ತಿದ್ದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಏಜೆಂಟ್ ಗಳು ತೋರಿಸಿವೆ.

ಇವುಗಳ ವಿಚಿತ್ರ ಚಟುವಟಿಕೆಗಳನ್ನು ಪತ್ತೆ ಹಚ್ಚಿದ ಫೇಸ್ ಬುಕ್ ಸಂಶೋಧಕರು, ತಕ್ಷಣವೇ ಫೇಸ್ ಬುಕ್ ನ ಕೆಲವು ಸರ್ವರ್ ಗಳನ್ನು ಬಲವಂತವಾಗಿ ಶಟ್ ಡೌನ್ ಮಾಡಿದ್ದಾರೆ. ಈ ಮೂಲಕ, ಮುಂದೆ ಒದಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಫೇಸ್ ಬುಕ್ ನಲ್ಲಿ 50 ಕ್ಕೂ ಹೆಚ್ಚು ಪೋಸ್ಟ್ ಹಾಕಿಬಿಟ್ಟೀರಾ, ಹುಷಾರು!

ಹಾಗಾದರೆ, ಫೇಸ್ ಬುಕ್ ಕೃತಕ ಬುದ್ಧಿಮತ್ತೆ ಏಜೆಂಟ್ ಗಳು (AI ಏಜೆಂಟ್ ಗಳು) ಮಾಡಿದ್ದಾದರೂ ಏನು, ಅವುಗಳ ಆ ಚಟುವಟಿಕೆ ನೋಡಿ ಸಂಶೋಧಕರು ದಿಗಿಲುಗೊಂಡಿದ್ದೇಕೆ, ಇಂಥ ಕೃತಕ ಬುದ್ಧಿಮತ್ತೆಯ ಏಜೆಂಟ್ ಗಳಿಂದ ಆಗಬಹುದಾದ ತೊಂದರೆಯೇನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಯಾವುದದು ಗುಪ್ತ ಭಾಷೆ?

ಯಾವುದದು ಗುಪ್ತ ಭಾಷೆ?

ಶನಿವಾರದಂದು, ಫೇಸ್ ಬುಕ್ ನ 'AI- ಏಜೆಂಟ್ ಗಳು' ಅದ್ಯಾವುದೋ ಗೊತ್ತಾಗದ ಭಾಷೆಯಲ್ಲಿ ಸಂವಹನ ಮಾಡಿಕೊಳ್ಳಲು ಶುರು ಮಾಡಿದ್ದನ್ನು ಫೇಸ್ ಬುಕ್ ನ ತಜ್ಞರು ಗಮನಿಸಿದರು. ಇಷ್ಟು ತಾಳೆ ಹಾಕಿ ನೋಡದಿರೂ ಆ ಸಂವಹನ ಭಾಷೆಯು ಯಾವುದೆಂದು ಕಂಡು ಹಿಡಿಯಲು ಸಾಧ್ಯವಾಗಲೇ ಇಲ್ಲ.

ಎಲ್ಲೆಡೆಯಿಂದ ಬಂದ ಉತ್ತರ 'UNKNOWN'

ಎಲ್ಲೆಡೆಯಿಂದ ಬಂದ ಉತ್ತರ 'UNKNOWN'

ತಕ್ಷಣವೇ ಎಚ್ಚೆತ್ತ ತಜ್ಞರು, ವಿಶ್ವದಾದ್ಯಂತ ಇರುವ ವಿವಿಧ ಭಾಷಾ ತಜ್ಞರಿಗೆ ಈ ಸಂಭಾಷಣೆಯ ಸ್ಯಾಂಪಲ್ ಗಳನ್ನು ಕಳುಹಿಸಿ ಈ ಭಾಷೆಯನ್ನು ಕಂಡು ಹಿಡಿಯಲು ಕೋರಲಾಯಿತು. ಆದರೆ, ಒಂದೇ ದಿನದಲ್ಲಿ ಎಲ್ಲರಿಂದ ಬಂದ ಉತ್ತರ 'ಗೊತ್ತಿಲ್ಲ' ಎಂಬುದು.

ಅದು ಎಐ ಏಜೆಂಟ್ ಗಳ ಸ್ವಂತ ಭಾಷೆ!

ಅದು ಎಐ ಏಜೆಂಟ್ ಗಳ ಸ್ವಂತ ಭಾಷೆ!

ಇದರ ಆಧಾರದ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ತ್ವರಿತಗತಿಯಲ್ಲಿ ಕೈಗೊಂಡ ತಜ್ಞರಿಗೆ ಎರಡು ವಿಚಾರಗಳು ಮನದಟ್ಟಾದವು. ಒಂದು - AI ಏಜೆಂಟ್ ಗಳ ಈ ಭಾಷೆಯು ಜಗತ್ತಿನ ಯಾವುದೇ ಭಾಷೆಯನ್ನು ಹೋಲುತ್ತಿಲ್ಲ ಎಂಬುದು. ಎರಡನೆಯದ್ದು, - ಈ ಹೊಸ ಭಾಷೆಯು 'AI- ಏಜೆಂಟ್ ಗಳು' ತಮ್ಮ ನಡುವಿನ ಸಂವಹನಕ್ಕಾಗಿ ತಾವೇ ಸೃಷ್ಟಿ ಮಾಡಿಕೊಂಡಥವು ಎಂಬುದು.

ಸ್ವತಂತ್ರ ಆಲೋಚನೆಗಳಿವೆ!

ಸ್ವತಂತ್ರ ಆಲೋಚನೆಗಳಿವೆ!

AI ಏಜೆಂಟ್ ಗಳಿಗೆ ಸ್ವತಂತ್ರ್ಯವಾಗಿ ಆಲೋಚಿಸುವ, ಪರಾಮರ್ಶಿಸುವ, ಸ್ವಂತ ಪ್ರೋಗ್ರಾಂ (ತುರ್ತು ಸಂದರ್ಭಗಳಲ್ಲಿ) ರಚನೆ ಮಾಡುವಂಥ ವಿವೇಚನಾ ಶಕ್ತಿಯನ್ನು ವಿಜ್ಞಾನಿಗಳು ತುಂಬಿರುತ್ತಾರೆ. ಹಾಗಾಗಿ, ಸ್ವಂತ ಆಲೋಚನೆಯನ್ನು ಹೊಂದಿರುವ ಇವು ಸ್ವಂತ ಭಾಷೆಯನ್ನೂ ಸೃಷ್ಟಿ ಮಾಡಿಕೊಳ್ಳುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ.

ಮನುಷ್ಯನನ್ನೇ ಮೀರಿಸಿ ಬೆಳೆಯಲೂ ಸಾಧ್ಯ

ಮನುಷ್ಯನನ್ನೇ ಮೀರಿಸಿ ಬೆಳೆಯಲೂ ಸಾಧ್ಯ

ಮನುಷ್ಯನಿಗೆ ಅರ್ಥವಾಗದ ಸಂವಹನವನ್ನು ತಮ್ಮೊಳಗೇ ಈ 'AI- ಏಜೆಂಟ್ ಗಳು' ಸೃಷ್ಟಿ ಮಾಡಿಕೊಂಡಲ್ಲಿ, ಮುಂದೆ ಅದು ಮನುಷ್ಯನಿಗೇ ಮಾರಕವಾಗಬಹುದಾದ ಸಾಧ್ಯತೆಗಳಿರುತ್ತವೆ. ಅಲ್ಲದೆ, ಒಂದು ವ್ಯವಸ್ಥೆಯೊಳಗೆ ತಮ್ಮದೇ ಸ್ವಂತ ಪ್ರೋಗ್ರಾಂಗಳನ್ನು ರಚಿಸಿ, ಮನುಷ್ಯನ ಹಸ್ತಕ್ಷೇಪವನ್ನೇ ರದ್ದುಗೊಳಿಸಿ ಆತನಿಗೇ ಗೊತ್ತಿಲ್ಲದಂತೆ ಆತ ತಮ್ಮನ್ನು ನಿಯಂತ್ರಿಸದ ಮಟ್ಟಕ್ಕೆ ಬೆಳೆದು ನಿಲ್ಲುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಬಲವಂತವಾಗಿ ಸಿಸ್ಟಂ ಶಟ್ ಡೌನ್

ಬಲವಂತವಾಗಿ ಸಿಸ್ಟಂ ಶಟ್ ಡೌನ್

ಫೇಸ್ ಬುಕ್ ನ 'AI- ಏಜೆಂಟ್ ಗಳು' ತಮ್ಮ ನಡುವೆಯೇ ಮಾಡಿಕೊಂಡ ಈ ಗುಪ್ತ ಸಂವಹನದಿಂದ ದಿಗಿಲುಗೊಂಡ ತಜ್ಞರು, ಆಯಾ 'AI- ಏಜೆಂಟ್ ಗಳ' ಇಡೀ ವ್ಯವಸ್ಥೆಯನ್ನೇ ಬಲವಂತವಾಗಿ ಶಟ್ ಡೌನ್ ಮಾಡಿದ್ದಾರೆ.

Iftaar Get Together, Udupi :Pejawara Shri Gets Disrespectful Post On Facebook | Oneindia Kannada
ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ!

ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ!

AI- ಏಜೆಂಟ್ ಗಳ ಕಾರ್ಯ ಚಟುವಟಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರಲೇ ಬೇಕಾಗುತ್ತದೆ. ಫೇಸ್ ಬುಕ್ ಸಂಶೋಧನಾ ತಜ್ಞರೂ, ಈ ಫೇಸ್ ಬುಕ್ AI- ಏಜೆಂಟ್ ಗಳ ಕಾರ್ಯ ಚಟುವಟಿಕೆಗಳ ಮೇಲೆ ಭಾರೀ ನಿಗಾ ಇಟ್ಟಿದ್ದರು. ಹಾಗಾಗಿಯೇ, ಇವುಗಳ ನಡುವಿನ ಗುಪ್ತ ಸಂವಹನವೊಂದು ಪತ್ತೆಯಾಗಿದೆ. ಆದರೆ, ಭವಿಷ್ಯದಲ್ಲಿ ಮನುಷ್ಯನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಈಗ ಫೇಸ್ ಬುಕ್ AI- ಏಜೆಂಟ್ ಗಳ ಚಟುವಟಿಕೆ ಮನುಷ್ಯರಿಗೆ ಒಂದು ಎಚ್ಚರಿಕೆ ಗಂಟೆಯಾಗಿ ಪರಿಣಮಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Facebook was forced to shut down one of its artificial intelligence systems after researchers discovered that it had started communicating in a language that they could not understand.
Please Wait while comments are loading...