ಬೆಂಗಳೂರು ಸೇರಿ 3 ಏರ್‌ಪೋರ್ಟ್‌ಗಳಲ್ಲಿ ಫೇಸಿಯಲ್ ರೆಕಗ್ನಿಷನ್ ಜಾರಿ, ಇಲ್ಲಿದೆ ವಿವರ
ನವದೆಹಲಿ, ಡಿಸೆಂಬರ್, 01: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ 3 ಏರ್‌ಪೋರ್ಟ್‌ಗಳಲ್ಲಿ ಗುರುವಾರದಿಂದ (ಡಿಸೆಂಬರ್ 01) ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ನೂತನ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಚೆಕ್ ಇನ್‌ಗೆ ಅನುಕೂಲವಾಗಲಿದೆ.
ವಿಮಾನ ನಿಲ್ದಾಣಗಳಲ್ಲಿ ಕಾಗದ ರಹಿತ, ತಡೆ ರಹಿತ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಸಲುವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ಫೇಸಿಯಲ್ ರೆಕಗ್ನಿಷನ್ ವ್ಯವಸ್ಥೆ ಒದಗಿಸುವ "ಡಿಜಿ ಯಾತ್ರಾ" ತಂತ್ರಜ್ಞಾನ ಪ್ರಾರಂಭ ಆಗಿದೆ. "ಡಿಜಿ ಯಾತ್ರಾ" ಆ್ಯಪ್ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿವಿಧ ಚೆಕ್ ಪಾಯಿಂಟ್‌ಗಳಲ್ಲಿ ಕಾಗದ ರಹಿತ ಹಾಗೂ ತಡೆರಹಿತವಾಗಿ ತೆರಳಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೇಸಿಯಲ್ ರೆಕಗ್ನಿಷನ್‌ನ ವಿಶೇಷತೆ
ಫೇಸಿಯಲ್ ರೆಕಗ್ನಿಷನ್ ತಂತ್ರಜ್ಞಾನ ಆಧಾರಿತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಪರ್ಕರಹಿತ, ತಡೆರಹಿತ ಸಂಸ್ಕರಣೆಯನ್ನು ಸಾಧಿಸಲು ಡಿಜಿ ಯಾತ್ರಾ ವ್ಯವಸ್ಥೆಯನ್ನು ಮಾಡಲಾಗಿದೆ. ಡಿಜಿ ಯಾತ್ರಾ ಆ್ಯಪ್ ತಂತ್ರಜ್ಞಾನದೊಂದಿದೆ ಭದ್ರತಾ ತಪಾಸಣೆ ಪ್ರದೇಶಗಳು ಸೇರಿದಂತೆ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿ ಪ್ರಯಾಣಿಕರ ದತ್ತಾಂಶವನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಬಹುದಾಗಿದೆ.

ಇನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ "ಡಿಜಿ ಯಾತ್ರಾ" ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಫೇಸ್ ರೆಕಗ್ನಿಷನ್‌ಗಾಗಿ ಸೆಲ್ಫೀ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ. ಸದ್ಯ ಪ್ರಯಾಣಿಕರ ಮಾಹಿತಿ ಸಂಗ್ರಹಕ್ಕೆ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲ. ಪ್ರಯಾಣಿಕರ ಗುರುತಿನ ಸಂಖ್ಯೆ ಹಾಗೂ ಪ್ರಯಾಣದ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಚೆಕ್ ಪಾಯಿಂಟ್‌ಗಳಲ್ಲಿ ಆಗಾಗ ದಾಖಲೆಗಳನ್ನು ತೋರಿಸುವ ತೊಂದರೆ ತಪ್ಪಿದಂತಾಗುತ್ತದೆ.
3 ವಿಮಾನ ನಿಲ್ದಾಣಗಳಲ್ಲಿ ಆರಂಭ
ಗುರುವಾರದಿಂದ (ಡಿಸೆಂಬರ್ 01) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಹಾಗೂ ವಾರಾಣಸಿ ವಿಮಾಣ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. 2023ರ ಮಾರ್ಚ್ ಅಂತ್ಯದ ವೇಳೆಗೆ ಹೈದರಾಬಾದ್, ಕೋಲ್ಕತ್ತ, ಪುಣೆ ಹಾಗೂ ವಿಜಯವಾಡಲ್ಲೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದೀಗ ಈ ವ್ಯವಸ್ಥೆ ದೇಶೀಯ ಪ್ರಯಾಣಿಕರಿಗೆ ಮಾತ್ರ ಲಭ್ಯವಿದೆ ಎಂದು ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಒಳಗಡೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ
ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಬೋರ್ಡಿಂಗ್ ಪಾಸ್ ಸ್ಕ್ಯಾನ್ ಕಡ್ಡಾಯ
ಪ್ರಯಾಣಿಕರು ವಿಮಾಣ ನಿಲ್ದಾಣಕ್ಕೆ ಹೋಗುವ ಮೊದಲು ಇ-ಗೇಟ್‌ಲ್ಲಿ ಬಾರ್ ಕೋಡ್ ಒಳಗೊಂಡ ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಬೇಕು. ನಂತರ ಫೇಷಿಯಲ್ ರೆಕಗ್ನೇಷನ್ ಪೂರ್ಣಗೊಳಿಸಬೇಕು. ಅದು ಪ್ರಯಾಣಿಕರ ಗುರುತನ್ನು ಮೌಲ್ಯೀಕರಿಸುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ನಿಲ್ದಾಣದೊಳಗೆ ಪ್ರವೇಶಿಸಬಹುದು. ನಂತರ ಭದ್ರತಾ ತಪಾಸಣೆಯ ಸಾಮಾನ್ಯ ಪ್ರಕ್ರಿಯೆ ಮುಗಿಸಿದ ನಂತರ ನೇರವಾಗಿ ವಿಮಾನವನ್ನು ಹತ್ತಬಹುದಾಗಿದೆ.












Click it and Unblock the Notifications