Train Timings: ರೈಲು ಓಡಾಟ ಬಂದ್, ಈ ಮಾರ್ಗದ ಪ್ರಯಾಣಿಕರೇ ಗಮನಿಸಿ...
ಹುಬ್ಬಳ್ಳಿ: ಭಾರತೀಯ ರೈಲ್ವೆ ಕೋಟ್ಯಂತರ ಜನರನ್ನು ಅವರ ಗುರಿ ತಲುಪಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕೋಟಿ ಕೋಟಿ ಪ್ರಯಾಣಿಕರು ಈ ರೀತಿ ಭಾರತೀಯ ರೈಲ್ವೆ ಸೇವೆ ಬಳಸಿಕೊಂಡು ತಮ್ಮ ಪ್ರತಿನಿತ್ಯದ ಕೆಲಸವನ್ನು ಮಾಡುತ್ತಾರೆ. ಹೀಗಿದ್ದಾಗ ಕೆಲವು ಮಾರ್ಗ ಬದಲಾವಣೆ & ರೈಲುಗಳು ಕ್ಯಾನ್ಸಲ್ ಆಗುವುದು ಮಾಮೂಲು. ಅದೇ ರೀತಿಯಾಗಿ ಇಲ್ಲೊಂದು ಮಾರ್ಗದ ಪ್ರಯಾಣಿಕರಿಗೆ ಅತಿಮುಖ್ಯವಾದ ಸುದ್ದಿ ಇಲ್ಲಿದೆ!
ಭಾರತೀಯ ರೈಲ್ವೆಗೆ ಶತಮಾನ ಮೀರಿದ ಇತಿಹಾಸ ಇದ್ದು, ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚು ಹೀಗಿದ್ದಾಗ ಅನಿವಾರ್ಯ ಸ್ಥಿತಿಯಲ್ಲಿ ಜನರು ರೈಲು ಪ್ರಯಾಣ, ಮತ್ತು ಸರಕು ಸಾಗಾಣಿಕೆಗೆ ಕೂಡ ಬಹುತೇಕ ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೂ ನಮ್ಮ ಕರ್ನಾಟಕಕ್ಕೆ ರೈಲ್ವೆ ಯೋಜನೆ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಿದೆ ಎಂಬ ಮಾತು ಆಗಾಗ ಕೇಳಿಬರುತ್ತದೆ. ಇದೆಲ್ಲವನ್ನು ಮೀರಿ ರೈಲುಗಳನ್ನ ಪ್ರಯಾಣಿಕರು ಸಾಕಷ್ಟು ಅವಲಂಬಿಸಿದ್ದು, ಇದೀಗ ಮಹತ್ವದ ಮಾರ್ಗ ಒಂದರಲ್ಲಿ ರೈಲು ಓಡಾಟ ಬಂದ್ ಮುಂದುವರಿಯಲಿದೆ.

ಕ್ಯಾಸಲ್ ರಾಕ್-ಲೋಂಡಾ ಮಾರ್ಗದಲ್ಲಿ...
ಹೌದು, ರೈಲ್ವೆ ಇಲಾಖೆ ಕ್ಯಾಸಲ್ ರಾಕ್-ಲೋಂಡಾ ಮಾರ್ಗದಲ್ಲಿ ವಿದ್ಯುದ್ದೀಕರಣ ಸೇರಿದಂತೆ ಇತರೆ ಎಂಜಿನಿಯರಿಂಗ್ ಕಾಮಗಾರಿಗಳನ್ನ ಕೈಗೊಂಡಿದೆ. ಇದೇ ಕಾರಣಕ್ಕೆ ಮಿರಜ್-ಕ್ಯಾಸಲ್ ರಾಕ್-ಮಿರಜ್ ನಡುವಿನ ಪ್ರತಿನಿತ್ಯದ ಕಾಯ್ದಿರಿಸದ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17333/17334) ರೈಲುಗಳ ಭಾಗಶಃ ರದ್ದತಿ ಏಪ್ರಿಲ್ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 17333 ಮಿರಜ್-ಕ್ಯಾಸಲ್ ರಾಕ್ ನಿತ್ಯದ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಜೂನ್ 30, 2025 ರವರೆಗೆ ಲೋಂಡಾ-ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಹಾಗೂ ಈ ರೈಲು ಲೋಂಡಾ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಮತ್ತೊಂದು ಕಡೆ ಕಾಮಗಾರಿ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ಪ್ರಯಾಣಿಕರಲ್ಲಿ ರೈಲ್ವೆ ಇಲಾಖೆಯು ಮನವಿ ಮಾಡಿಕೊಂಡಿದೆ.
ರೈಲ್ವೆ ಇಲಾಖೆ ಸೂಚನೆ ಏನು?
ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್ ಪ್ರೆಸ್ ರೈಲು ಜೂನ್ 30, 2025 ರವರೆಗೆ ಕ್ಯಾಸಲ್ ರಾಕ್-ಲೋಂಡಾ ಮಧ್ಯೆ ಭಾಗಶಃ ರದ್ದಾಗಿರುತ್ತೆ. ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ತನ್ನ ಪ್ರಯಾಣವನ್ನ ಪ್ರಾರಂಭಿಸಲಿದೆ. ಮೊದಲು, ಈ ರೈಲುಗಳ ಭಾಗಶಃ ರದ್ದತಿಯನ್ನ ಮಾರ್ಚ್ 31, 2025 ರವರೆಗೆ ಸೂಚಿಸಲಾಗಿತ್ತು. ಆದ್ರೆ ಈಗ ಈ ಭಾಗಶಃ ರದ್ದತಿಯನ್ನು ಜೂನ್ 30, 2025 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ ರೈಲ್ವೆ ಇಲಾಖೆ.












Click it and Unblock the Notifications