Parliament Security Breach: ಸಂಸತ್ ಭದ್ರತಾ ಲೋಪ: ಏನಿದು ಬಣ್ಣದ ಗ್ಯಾಸ್ ಕ್ಯಾನಿಸ್ಟರ್?
ಬುಧವಾರ ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದ್ದು, ಇಬ್ಬರು ವ್ಯಕ್ತಿಗಳು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಹಳದಿ ಹೊಗೆಯನ್ನು ಹೊರಸೂಸುವ ಡಬ್ಬಿಗಳನ್ನು ತೆರೆದು ಸದನದೊಳಗೆ ಆತಂಕ ಮೂಡಿಸಿದ್ದರು. ಲೋಕಸಭೆಯ ಚೇಂಬರ್‌ನೊಳಗೆ ಎಚ್ಚೆತ್ತ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ವೀಕ್ಷಕರ ಗ್ಯಾಲರಿಯಿಂದ ಸಂಸದರ ಆಸನದ ಮುಂಭಾಗಕ್ಕೆ ಜಿಗಿದ ವ್ಯಕ್ತಿಯೊಬ್ಬ ಡೆಸ್ಕ್‌ಗಳ ಮೇಲೆ ಜಿಗಿಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಆತನ ಸಹಚರ, ಸಂದರ್ಶಕರ ಗ್ಯಾಲರಿಯಿಂದ ದಟ್ಟವಾದ ಹೊಗೆಯನ್ನು ಸೂಸುವ ಗ್ಯಾಸ್ ಕ್ಯಾನಿಸ್ಟರ್ ಎಸೆಯುವ ಮೂಲಕ ಹಳದಿ ಹೊಗೆ ಆವರಿಸುವಂತೆ ಮಾಡುತ್ತಾನೆ. ಇಬ್ಬರನ್ನೂ ಕೂಡ ಈಗ ಬಂಧಿಸಲಾಗಿದೆ.

ಬಣ್ಣದ ಗ್ಯಾಸ್ ಕ್ಯಾನಿಸ್ಟರ್‌ಗಳು ಯಾವುವು?
ಇವುಗಳನ್ನು ಹೊಗೆ ಡಬ್ಬಗಳು ಅಥವಾ ಹೊಗೆ ಬಾಂಬ್‌ಗಳು ಎಂದು ಕರೆಯಲಾಗುತ್ತದೆ ಹೆಚ್ಚಿನ ದೇಶಗಳಲ್ಲಿ ಇವುಗಳ ಬಳಕೆ ಕಾನೂನುಬದ್ಧವಾಗಿವೆ ಮತ್ತು ಬಹುತೇಕ ಎಲ್ಲಾ ಚಿಲ್ಲರೆ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿವಿಧ ಉದ್ದೇಶಗಳಿಗಾಗಿ ಅವುಗಳನ್ನು ಬಳಕೆ ಮಾಡಲಾಗುತ್ತದೆ. ಈ ಕ್ಯಾನ್‌ಗಳನ್ನು ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಕ್ರೀಡಾ ಕಾರ್ಯಕ್ರಮ ಅಥವಾ ಫೋಟೋಶೂಟ್‌ನಲ್ಲಿ ಬಳಸುತ್ತಾರೆ. ಇತ್ತೀಚೆಗೆ ಪ್ರಿ ವೆಡ್ಡಿಂಗ್ ಫೋಟೊ ಶೂಟ್‌ನಲ್ಲಿ ಇವುಗಳ ಬಳಕೆಯನ್ನು ನೋಡಬಹುದು.
ಗ್ರೆನೇಡ್‌ಗಳಿಂದ ಹೊರಸೂಸುವ ದಪ್ಪ ಹೊಗೆಯಿಂದ ರೂಪುಗೊಂಡ ಹೊಗೆ ಪರದೆಗಳನ್ನು ಮಿಲಿಟರಿ ಮತ್ತು ಕಾನೂನು ಜಾರಿ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದಟ್ಟವಾದ ಹೊಗೆ ಮೋಡಗಳು ಸೈನ್ಯದ ಚಲನೆಯನ್ನು ಅಸ್ಪಷ್ಟಗೊಳಿಸುತ್ತವೆ, ಶತ್ರುಗಳ ಕಣ್ಣುಗಳಿಗೆ ಅಗೋಚರವಾಗುವಂತೆ ಮಾಡುತ್ತವೆ ಮತ್ತು ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣೆಯನ್ನು ಒದಗಿಸುತ್ತವೆ. ವಾಯುದಾಳಿಗಳು, ಸೈನ್ಯದ ಇಳಿಯುವಿಕೆಗಳು ಮತ್ತು ಸ್ಥಳಾಂತರಿಸುವ ಸ್ಥಳಗಳಿಗೆ ಗುರಿ ವಲಯಗಳನ್ನು ಗುರುತಿಸುವಲ್ಲಿ ಈ ಹೊಗೆ ಕ್ಯಾನ್‌ಗಳನ್ನು ಬಳಸಲಾಗುತ್ತದೆ. ಸಿನಿಮಾ, ವಿಡಿಯೋ ಛಾಯಾಗ್ರಹಣದಲ್ಲಿ ಕೂಡ ಇವುಗಳನ್ನು ಬಳಸಲಾಗುತ್ತದೆ.
ಕ್ರೀಡೆಗಳಲ್ಲಿ, ವಿಶೇಷವಾಗಿ ಫುಟ್‌ಬಾಲ್, ಹೊಗೆ ಡಬ್ಬಿಗಳನ್ನು ಅಭಿಮಾನಿಗಳು ತಮ್ಮ ಕ್ಲಬ್‌ಗಳ ಬಣ್ಣಗಳನ್ನು ಪ್ರದರ್ಶಿಸಲು ಬಳಸುತ್ತಾರೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ, ಫ್ಯಾನ್ ಕ್ಲಬ್‌ಗಳು, ಭೇಟಿ ನೀಡುವ ತಂಡಗಳಿಗೆ ಬೆದರಿಸುವ ವಾತಾವರಣವನ್ನು ಸೃಷ್ಟಿಸಲು ಹೊಗೆ ಕ್ಯಾನ್‌ಗಳು ಮತ್ತು ಪೈರೋಗಳನ್ನು ಬಳಸುತ್ತವೆ.
ಸಂಸತ್ತಿನ ಹೊರಗೆ ಇಬ್ಬರ ಬಂಧಿಸಲಾಗಿದೆ
ಹಳದಿ ಹೊಗೆಯನ್ನು ಬಿಡುಗಡೆ ಮಾಡುವ ಕಂಟೈನರ್‌ಗಳೊಂದಿಗೆ ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಪುರುಷ ಮತ್ತು ಮಹಿಳೆಯನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೀಲಂ (42) ಮತ್ತು ಅಮೋಲ್ ಶಿಂಧೆ (25) ಅವರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಆದೇಶ
ಸ್ಪೀಕರ್ ಓಂ ಬಿರ್ಲಾ ಅವರು ಆತಂಕಗೊಂಡ ಸಂಸದರನ್ನು ಉದ್ದೇಶಿಸಿ, "ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ದೆಹಲಿ ಪೊಲೀಸರನ್ನು ವಿಚಾರಣೆ ನಡೆಸಲು ಕೇಳಲಾಗಿದೆ. ನಾನು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇದರಿಂದ ಯಾವುದೇ ಗಂಭೀರ ಬೆದರಿಕೆ ಇಲ್ಲ. ನಾನು ನಿಮಗೆಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನಾನು ಕೂಡ ಇಲ್ಲಿದ್ದೇನೆ. ನಿಮ್ಮೆಲ್ಲರೊಂದಿಗೆ ಇಲ್ಲಿ ಕುಳಿತಿದ್ದೇನೆ. ತನಿಖೆಯ ನಂತರ ಹೊರಬರುವ ಹೆಚ್ಚಿನ ವಿವರಗಳಿಗಾಗಿ ನಾವು ಈಗ ಕಾಯೋಣ." ಎಂದು ಹೇಳಿದ್ದಾರೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications