ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮತ್ತೆ ಹೇಳಿದ್ದೇನು?
ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ ಮತ್ತು ತಮಿಳುನಾಡು ಸರ್ಕಾರದ ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಹೇಳಿಕೆ ಮತ್ತೊಮ್ಮೆ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ಹಿಂದೆ ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ನೀಡಿದ್ದ ಹೇಳಿಕೆ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು. ಇದೀಗ ಮತ್ತೊಮ್ಮೆ ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತನಾಡಿದ್ದು, ಏನ್ ಹೇಳಿದ್ದಾರೆ ಗೊತ್ತಾ?
ಕೇಂದ್ರದಲ್ಲಿ ಈಗ ಅಧಿಕಾರ ನಡೆಸುತ್ತಿರುವ ಎನ್‌ಡಿಎ ಸರ್ಕಾರ ಹಾಗೂ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ (I.N.D.I.A) ನಡುವೆ ಜಿದ್ದಾಜಿದ್ದಿನ ಕದನವು ಆರಂಭವಾಗಿದೆ. ಇದೇ ಸಮಯದಲ್ಲಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪುತ್ರ & ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ಕುರಿತು ಕೆಲವು ತಿಂಗಳ ಹಿಂದೆ ಮಾತನಾಡಿ ದೊಡ್ಡ ಸದ್ದು ಮಾಡಿದ್ದರು. ಅಲ್ಲದೆ ಈ ಬಗ್ಗೆ ದೇಶದ ವಿವಿಧೆಡೆ ಆಕ್ರೋಶ ಕೂಡ ಮೊಳಗಿತ್ತು. ಈ ಘಟನೆ ಇಷ್ಟು ದೊಡ್ಡದಾದ ಸಮಯದಲ್ಲೇ ಮತ್ತೊಮ್ಮೆ ಉದಯನಿಧಿ ಸ್ಟಾಲಿನ್, ಸನಾತನ ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರಂತೆ.

ಸನಾತನ ಧರ್ಮದ ಬಗ್ಗೆ ಉಧಯನಿಧಿ ಮಾತು
ಅಂದಹಾಗೆ ತಾವು ಈ ಹಿಂದೆ ಸನಾತನ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಉದಯನಿಧಿ ಸ್ಟಾಲಿನ್ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಪಿ.ಕೆ.ಶೇಖರ್ ಬಾಬು ಸನಾತನ ಧರ್ಮದ ಕುರಿತಾಗಿ ನೀಡಿರುವ ಹೇಳಿಕೆ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು, ಕೆಲವು ದಿನಗಳ ಹಿಂದಷ್ಟೇ ಕೋರ್ಟ್ ಖಾಕಿ ಪಡೆ ವಿರುದ್ಧ ಗರಂ ಆಗಿತ್ತು. ಇದೇ ಬೆನ್ನಲ್ಲಿ ಸನಾತನ ಹಿಂದೂ ಧರ್ಮದ ಬಗ್ಗೆ ತಮ್ಮ ನಿಲುವು ಸರಿಯಾಗಿದೆ ಎಂದಿದ್ದಾರಂತೆ ಸಚಿವ ಉದಯನಿಧಿ ಸ್ಟಾಲಿನ್.
ಉದಯನಿಧಿ ಸ್ಟಾಲಿನ್ ಹೇಳಿದ್ದು ಏನು?
ಅಷ್ಟಕ್ಕು ಕೆಲ ತಿಂಗಳ ಹಿಂದೆ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನ ಡೆಂಘಿ ಮತ್ತು ಮಲೇರಿಯಾಗೆ ಹೋಲಿಸಿದ್ದರು. ಇದೀಗ ತಮ್ಮ ಹೇಳಿಕೆಯನ್ನ ಉದಯನಿಧಿ ಸ್ಟಾಲಿನ್ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದು ಇದಕ್ಕೂ ಮೊದಲು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈಗ ಮತ್ತೊಮ್ಮೆ ಉದಯನಿಧಿ ಸ್ಟಾಲಿನ್ ನಿಲುವಿನ ಪರಿಣಾಮ ವಿವಾದ ಮತ್ತಷ್ಟು ಹೆಚ್ಚಾಗುವ ಸೂಚನೆಯು ಸಿಕ್ಕಂತಾಗಿದೆ.
ಒಟ್ನಲ್ಲಿ ಲೋಕಸಭೆ ಚುನಾವಣೆ ಸಮಯದಲ್ಲಿ ಮತ್ತೊಮ್ಮೆ ಈ ವಿಚಾರವಾಗಿ ಕಿರಿಕ್ ಕೂಡ ಜೋರಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಒಂದು ರೌಂಡ್ ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟದ ಲೀಡರ್ಸ್ ಈ ವಿಚಾರಕ್ಕೆ ತಿಕ್ಕಾಟ ನಡೆಸಿದ್ದರು. ಇದೀಗ ಮತ್ತೊಮ್ಮೆ ಈ ಕಿರಿಕ್ ಜೋರಾಗುವ ಸೂಚನೆ ಸಿಕ್ಕಿದೆ. ಅಲ್ಲದೆ ಈ ಕುರಿತು ಈಗಾಗಲೇ ಸೋಷಿಯಲ್ ಮೀಡಿಯಾ ಮಂದಿ ಜೋರು ಚರ್ಚೆ ಶುರು ಮಾಡಿದ್ದಾರೆ.











Click it and Unblock the Notifications