Chhattisgarh Election 2023: ‘ನಕ್ಸಲ್’ ನಾಡಲ್ಲಿ, ಬಿಜೆಪಿ VS ಕಾಂಗ್ರೆಸ್ ಕದನದಲ್ಲಿ ಗೆಲುವು ಕಾಂಗ್ರೆಸ್‌ಗೆ?
ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಭಾರತದ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗೆ ಲೋಕಸಭೆ ಚುನಾವಣೆಗೆ ಮೊದಲು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಅಗ್ನಿಪರೀಕ್ಷೆ ಎದುರಾಗಿದೆ. ಲೋಕಸಭೆ ಎಲೆಕ್ಷನ್ ನಡೆಯೋದಕ್ಕೆ ಮೊದಲು ಪಂಚರಾಜ್ಯ ಚುನಾವಣೆ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭವಿಷ್ಯವನ್ನ ಮತದಾರ ಪ್ರಭು ತೋರಿಸಿದ್ದಾನೆ.
ಪಂಚರಾಜ್ಯ ಅಂದ್ರೆ 5 ರಾಜ್ಯಗಳಿಗೆ ಕಳೆದ ಕೆಲವು ದಿನಗಳಿಂದ ಮತದಾನ ನಡೆದಿದೆ. ಹೀಗೆ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂಗೆ ಎಲೆಕ್ಷನ್ ಆಗಿದ್ದು ಇಡೀ ಭಾರತದ ಗಮನ ಸೆಳೆದಿತ್ತು. ಈಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಕಾಂಗ್ರೆಸ್ VS ಬಿಜೆಪಿ ಪಕ್ಷಗಳ ಹಣೆಬರಹವನ್ನು, ಮತದಾರ ಪ್ರಭು ತಿಳಿಸಿದ್ದಾನೆ. ಹಾಗಾದ್ರೆ ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲುವು ಸಾಧಿಸುತ್ತೆ? ಮತದಾರ ಪ್ರಭು ಹೇಳಿದ್ದು ಏನು? ಮುಂದೆ ಓದಿ.

'ನಕ್ಸಲ್' ನಾಡಲ್ಲಿ ಕಾಂಗ್ರೆಸ್‌ಗೆ ದಿಗ್ವಿಜಯ?
ಹೌದು ಈಗ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಹೆಚ್ಚು ಕೂತಹಲ ಕೆರಳಿಸಿದ್ದು 'ನಕ್ಸಲ್' ನಾಡು ಎಂಬ ಕುಖ್ಯಾತಿ ಪಡೆದಿರುವ ಛತ್ತೀಸ್‌ಗಢ ರಾಜ್ಯ. ಯಾಕಂದ್ರೆ ಬಿಜೆಪಿಗೆ ಈ ಮೊದಲು ಇಲ್ಲಿ ಗಟ್ಟಿಯಾದ ನೆಲೆ ಇತ್ತು. ಅದ್ರಲ್ಲೂ 2003, 2008, 2013ರ ಎಲೆಕ್ಷನ್ ಅಖಾಡದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿತ್ತು. ಆದ್ರೆ, 2018ರಲ್ಲಿ ಹೀನಾಯ ಸೋಲು ಕಂಡ ಬಿಜೆಪಿ 2023ರಲ್ಲಿ ಮತ್ತೆ ಛತ್ತೀಸ್‌ಗಢ ರಾಜ್ಯ ತನ್ನ ವಶ ಮಾಡಿಕೊಳ್ಳುವ ನಿರೀಕ್ಷೆನ್ನ ಹೊಂದಿತ್ತು. ಆದರೆ ಈಗ ಏನಾಗಿದೆ ಗೊತ್ತಾ?
ಬಿಜೆಪಿಗೆ ಸೋಲು ಎದುರಾಯ್ತಾ?
ಮೊದಲೇ ಹೇಳಿದಂತೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ಈ ಪೈಕಿ ಉಳಿದ 4 ರಾಜ್ಯ ಒಂದು ಲೆಕ್ಕವಾದರೆ, ಛತ್ತೀಸ್‌ಗಢ ಚುನಾವಣೆ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಇಡೀ ದೇಶದ ಗಮನ ಸೆಳೆಯುತ್ತಿದ್ದು ಇಲ್ಲಿ ಗೆಲ್ಲಬೇಕು ಎಂಬ ಹಠ ಬಿಜೆಪಿ & ಕಾಂಗ್ರೆಸ್‌ಗೆ ಇತ್ತು. ನಕ್ಸಲ್ ಹಾವಳಿ ಹಿನ್ನೆಲೆ ಭದ್ರತೆ ಅಗತ್ಯತೆ ಕಾರಣಕ್ಕೆ ಛತ್ತೀಸ್‌ಗಢ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ನ. 7 ಕ್ಕೆ ಮೊದಲ ಹಂತದಲ್ಲಿ ಮತದಾನ ನಡೆದರೆ, ನವೆಂಬರ್ 17 ಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆದಿತ್ತು. ಹೀಗೆ 90 ಸ್ಥಾನದ ಛತ್ತೀಸ್‌ಗಢ ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತಾ? ಬಿಜೆಪಿ ಮತ್ತೆ ಗೆಲುವು ಸಾಧಿಸುತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಿಜೆಪಿಗೆ ಛತ್ತೀಸ್‌ಗಢದಲ್ಲಿ ದೊಡ್ಡ ಆಘಾತ?
ಛತ್ತೀಸ್‌ಗಢ ರಾಜ್ಯದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಭರ್ಜರಿ 40 ರಿಂದ 50 ಸ್ಥಾನ ಗೆಲ್ಲಬಹುದು ಅಂತಿದೆ ಸಮೀಕ್ಷೆ. ಹಾಗೇ ಬಿಜೆಪಿ ಇಲ್ಲಿ 35 ರಿಂದ 45 ಸ್ಥಾನಗಳ ಪಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ & ಬಿಜೆಪಿ ಪಕ್ಷಗಳನ್ನ ಹೊರತುಪಡಿಸಿ, ಇತರರು ಅಂದರೆ ಬೇರೆ ಪಕ್ಷಗಳು ಹಾಗೂ ಪಕ್ಷೇತರರು ಸೇರಿ 00 ರಿಂದ 03 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಇನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಮಾಹಿತಿ ಸಿಕ್ಕಿದ್ದು, ಒಟ್ಟು 90 ವಿಧಾನಸಭೆ ಕ್ಷೇತ್ರ ಹೊಂದಿರುವ ಛತ್ತೀಸ್‌ಗಢ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಡಿಸೆಂಬರ್ 3ಕ್ಕೆ ರಿಯಲ್ ಫಲಿತಾಂಶ ಹೊರಬೀಳಲಿದ್ದು, ಅಂದೇ ಎಲ್ಲವೂ ಡಿಸೈಡ್ ಆಗಲಿದೆ.
ಸತತ 3 ಬಾರಿ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಗೆದ್ದು ಬೀಗಿದ್ದರೂ ಈ ಬಾರಿ ಚುನಾವಣೆಯಲ್ಲಿ ಮತ್ತೆ ಸೋಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಲೆಕ್ಕಾಚಾರ ಹೇಳಿವೆ. ಆದ್ರೆ ಇಬ್ಬರ ಮಧ್ಯೆ ಗೆಲುವಿನ ಅಂತರ ಅಷ್ಟು ದೊಡ್ಡದಾಗಿ ಇಲ್ಲ. ಹೀಗಾಗಿ ಛತ್ತೀಸ್‌ಗಢ ಚುನಾವಣೆಯ ಬಗ್ಗೆ ಪಕ್ಕಾ ಉತ್ತರ ಸಿಗಬೇಕು ಅಂದ್ರೆ ಭಾನುವಾರದ ತನಕ ಕಾದು ನೋಡಬೇಕಿದೆ. ಯಾಕಂದ್ರೆ ಡಿಸೆಂಬರ್ 3ರ ಭಾನುವಾರ ರಿಯಲ್ ರಿಸಲ್ಟ್ ಹೊರಬೀಳುತ್ತೆ.












Click it and Unblock the Notifications