4 ರಾಜ್ಯಗಳ ಚುನಾವಣಾ ಫಲಿತಾಂಶ: ನಿಖರ ಅಂಕಿ-ಅಂಶಕ್ಕಾಗಿ 'ಒನ್‌ಇಂಡಿಯಾ'ಗೆ ಭೇಟಿ ನೀಡಿ
ಲೋಕಸಭೆ ಹಣೆಬರಹ ನಿರ್ಧರಿಸುವ 4 ರಾಜ್ಯ ಫಲಿತಾಂಶ ಸಿದ್ಧವಾಗಿದೆ. ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿ VS ಕಾಂಗ್ರೆಸ್ ಮಧ್ಯೆ ಅಖಾಡ ರಂಗೇರಿದೆ. ಗೆಲುವೊಂದೇ ಏಕೈಕ ಮಂತ್ರ ಎಂದು ಮುನ್ನುಗ್ಗುತ್ತಿರುವ 2 ಪಕ್ಷಗಳಿಗೆ ಡಿಸೆಂಬರ್ 3ರ ಭಾನುವಾರ ಅಂತಿಮ ಫಲಿತಾಂಶ ಸಿಗಲಿದೆ. ಮೊದಲು ಮಿಜೋರಾಂ ಚುನಾವಣೆ ಫಲಿತಾಂಶ ಕೂಡ ಡಿಸೆಂಬರ್ 3ಕ್ಕೆ ಹೊರಬೀಳಲಿದೆ ಅಂತಾ ಹೇಳಲಾಗಿತ್ತು. ಆದರೆ ಒಂದು ದಿನ ಮುಂದೂಡಿಕೆ ಆಗಿ ಡಿಸೆಂಬರ್ 4ಕ್ಕೆ ಫಲಿತಾಂಶ ಹೊರಬೀಳಲಿದೆ.
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು, ಹೀಗಾಗಿಯೇ ಭಾರತದ ಲೋಕಸಭೆಗೆ ಚುನಾವಣೆ ನಡೆಯುತ್ತೆ ಅಂದರೆ ಇಡೀ ಜಗತ್ತು ಇಲ್ಲಿ ಕಣ್ಣಿಟ್ಟು ಕೂರಲಿದೆ. ಅದರಲ್ಲೂ ಈ ಬಾರಿ ಇಂಡಿಯಾ ಒಕ್ಕೂಟ VS ಎನ್‌ಡಿಎ ಒಕ್ಕೂಟದ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿಯೂ ನಿರ್ಮಾಣವಾಗಿದೆ. ಹೀಗಾಗಿ ಲೋಕಸಭೆಗೆ ಮೊದಲು ನಡೆದಿರುವ 5 ರಾಜ್ಯಗಳ ಚುನಾವಣೆ ಭಾರಿ ಗಮನ ಸೆಳೆದಿದೆ. ಇಷ್ಟೆಲ್ಲಾ ಮಹತ್ವ ಪಡೆದಿರುವ ಪಂಚರಾಜ್ಯ ಚುನಾವಣೆ ರಿಸಲ್ಟ್ ಬಗ್ಗೆ ಕ್ಷಣಕ್ಷಣದ ಮಾಹಿತಿಗೆ ತಪ್ಪದೆ 'ಒನ್‌ಇಂಡಿಯಾ ಕನ್ನಡ' ಫಾಲೋ ಮಾಡಿ.

ಮಧ್ಯಪ್ರದೇಶ 'ಕೈ' ಪಾಲಾ? 'ಕಮಲ'ಕ್ಕಾ?
ನಿನ್ನೆಯಷ್ಟೇ ಹೊರಬಿದ್ದಿರುವ 5 ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶವು ಇಡೀ ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ತೀವ್ರ ಕುತೂಹಲ ಕೆರಳಿಸಿದ್ದ ಮಧ್ಯಪ್ರದೇಶ ಚುನಾವಣಾ ಅಖಾಡದಲ್ಲಿ ಬಿಜೆಪಿ & ಕಾಂಗ್ರೆಸ್ ಸಮಬಲದ ಹೋರಾಟ ನಡೆಸಿವೆ. ಹೀಗಾಗಿ ಅಧಿಕಾರ ರಚಿಸುವುದು ಯಾರು? ಎಂಬ ಪ್ರಶ್ನೆ ಕಾಡಿದೆ. ಜನ್ ಕಿ ಬಾತ್ (Jan Ki Baat) ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 102-125 ಸೀಟು, ಬಿಜೆಪಿ 100-123 ಸೀಟು, ಇತರರು 5 ಸೀಟುಗಳಲ್ಲಿ ಗೆಲುವು ಕಾಣಲಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಕುತೂಹಲ ದುಪ್ಪಟ್ಟಾಗಿದೆ.
ರಾಜಸ್ಥಾನ ರಾಜಕೀಯದಲ್ಲಿ ಮೇಲುಗೈ ಯಾರದ್ದು?
ಪಂಚರಾಜ್ಯ ಚುನಾವಣೆ ಪೈಕಿ ರಾಜಸ್ಥಾನ ಕೂಡ ಭಾರಿ ಕುತೂಹಲ ಕೆರಳಿಸಿತ್ತು. ಹೀಗಾಗಿ ರಾಜಸ್ಥಾನ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಗಮನ ಸೆಳೆದವು. ಎಬಿಪಿ ನ್ಯೂಸ್ & ಸಿ-ವೋಟರ್ ಎಕ್ಸಿಟ್ ಪೋಲ್ ಪ್ರಕಾರ, ಆಡಳಿತರೂಢ ಕಾಂಗ್ರೆಸ್ 71ರಿಂದ 91 ಸ್ಥಾನ ಗೆಲ್ಲಬಹುದು. ಬಿಜೆಪಿ 94ರಿಂದ 114 ಸ್ಥಾನದಲ್ಲಿ ಗೆಲುವು ಪಡೆಯಲಿದ್ದು, ಇತರರು 0 ಸ್ಥಾನ ಪಡೆಯಬಹುದು ಎನ್ನಲಾಗಿದೆ.

ತೆಲಂಗಾಣ ರಾಜ್ಯದಲ್ಲೂ ಅತಂತ್ರ?
ಮತ್ತೊಂದು ಕಡೆ ದಕ್ಷಿಣ ಭಾರತದ ಪ್ರಮುಖ ರಾಜ್ಯ ತೆಲಂಗಾಣ ರಾಜ್ಯದ ವಿಧಾನಸಭೆಗೂ ಚುನಾವಣೆ ನಡೆದಿದ್ದು, ಇಲ್ಲಿ ಕಾಂಗ್ರೆಸ್ 63-79 ಸ್ಥಾನ ಪಡೆದು ಸರ್ಕಾರ ರಚಿಸಲಿದೆ ಅಂತ ಇಂಡಿಯಾ ಟಿವಿ & ಸಿಎನ್‌ಎಕ್ಸ್ ಸಮೀಕ್ಷೆ ಹೇಳುತ್ತಿದ್ದರೆ. ಬಿಆರ್‌ಎಸ್‌ಗೆ 31-47 ಸ್ಥಾನಗಳು ಸಿಗಬಹುದು ಎನ್ನಲಾಗಿದೆ. ಹಾಗೇ ಎಐಎಂಐಎಂ 5-7 ಸ್ಥಾನ ಮತ್ತು ಬಿಜೆಪಿ 2-4 ಸ್ಥಾನ ಗಳಿಸಬಹುದು ಅಂತಾ ಸಮೀಕ್ಷೆ ಹೇಳಿದೆ. ಆದರೆ ಇನ್ನೂ ಕೆಲವು ಸಮೀಕ್ಷೆಗಳು ತೆಲಂಗಾಣ ರಾಜ್ಯದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಅಂತಿವೆ.
ನಕ್ಸಲರ ನಾಡಿನಲ್ಲಿ ಕಾಂಗ್ರೆಸ್‌ಗೆ ಗೆಲುವು?
ಛತ್ತೀಸ್‌ಗಢ ರಾಜ್ಯದಲ್ಲಿ ಹಲವು ಚುನಾವಣೋತ್ತರ ಸಮೀಕ್ಷೆಗಳು ಜನರಿಂದ ಮಾಹಿತಿ ಸಂಗ್ರಹ ಮಾಡಿವೆ. ಈ ಪೈಕಿ ಎಬಿಪಿ & ಸಿ-ವೋಟರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 41 ರಿಂದ 53 ಸ್ಥಾನ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 36ರಿಂದ 48 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ, ಇತರರು 0-4 ಸ್ಥಾನ ಗೆಲ್ಲಬಹುದು ಅಂತಿದೆ ಎಬಿಪಿ, ಸಿ-ವೋಟರ್ ಸಮೀಕ್ಷೆ. 'ಜನ್ ಕಿ ಬಾತ್' ಸಮೀಕ್ಷೆ ಪ್ರಕಾರ ಕಾಂಗ್ರೆಸ್ 42 ರಿಂದ 53 ಸ್ಥಾನಗಳ ಪಡೆಯಬಹುದು ಎನ್ನಲಾಗಿದೆ. ಬಿಜೆಪಿ 34ರಿಂದ 45 ಸ್ಥಾನ ಗೆಲ್ಲಬಹುದು ಅಂತಾ ಹೇಳಿದ್ದರೆ ಇತರರು 0-3 ಸ್ಥಾನ ಗೆಲ್ಲಬಹುದು ಅಂತಾ ಹೇಳಲಾಗಿದೆ.

ಮಿಜೋರಾಂ ಫಲಿತಾಂಶ ಮುಂದೂಡಿಕೆ
ಅಷ್ಟಕ್ಕೂ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಸೇರಿದಂತೆ ಮಿಜೋರಾಂ ರಾಜ್ಯಗಳಿಗೆ ಇತ್ತೀಚೆಗೆ ಮತದಾನ ನಡೆದಿತ್ತು. ಈ ಪೈಕಿ 5 ರಾಜ್ಯದ ಫಲಿತಾಂಶ ಭಾನುವಾರ ಹೊರಬೀಳಬೇಕಿತ್ತು. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಸಮದಯಲ್ಲೇ ದಿಢೀರ್ ಮಿಜೋರಾಂ ರಾಜ್ಯದ ಚುನಾವಣೆ ಫಲಿತಾಂಶದ ದಿನ ಮುಂದೂಡಿಕೆ ಆಗಿದೆ. ಒಂದು ದಿನ ಅಂದರೆ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು, ಡಿಸೆಂಬರ್ 3ರ ಭಾನುವಾರದ ಬದಲಾಗಿ ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ.
ಚುನಾವಣೋತ್ತರ ಸಮೀಕ್ಷೆ ಹೊರತು ಪಕ್ಕಾ ರಿಸಲ್ಟ್ ಇದೆ ಭಾನುವಾರ ರಿವೀಲ್ ಆಗಲಿದೆ. ಹೀಗಾಗಿ ಇಡೀ ದೇಶದ ಗಮನ ಪಂಚರಾಜ್ಯ ಚುನಾವಣೆ ಫಲಿತಾಂಶದ ಮೇಲೆ ನೆಟ್ಟಿದೆ. ಈ ಹಿನ್ನೆಲೆ, ನಿಮ್ಮ 'ಒನ್‌ಇಂಡಿಯಾ ಕನ್ನಡ' ಕನ್ನಡಿಗರಿಗಾಗಿ ಕ್ಷಣಕ್ಷಣದ ಮಾಹಿತಿಯನ್ನ ನಿಮ್ಮ ಮುಂದೆ ಇಡಲಿದೆ. ಹೀಗಾಗಿ 4 ರಾಜ್ಯಗಳ ಮಹತ್ವದ ಚುನಾವಣೆ ಫಲಿತಾಂಶದ ಮಾಹಿತಿಗೆ ಡಿಸೆಂಬರ್ 3ರ ಭಾನುವಾರ ತಪ್ಪದೆ ನಿಮ್ಮ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications