ಭಾರತದಲ್ಲಿ ಫೆಬ್ರವರಿಯಲ್ಲಿ ಕೋವಿಡ್​ ಉತ್ತುಂಗಕ್ಕೆ, ದಿನಕ್ಕೆ 5ಲಕ್ಷ ಕೇಸ್​ ಸಾಧ್ಯತೆ

ನವದೆಹಲಿ, ಜನವರಿ 08: ದೇಶದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಕೊರೊನಾ ಪ್ರಕರಣಗಳು ಉತ್ತುಂಗಕ್ಕೇರಲಿದ್ದು, ದಿನಕ್ಕೆ 5 ಲಕ್ಷ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ನಿತ್ಯ ಹೊರಬರುತ್ತಿವೆ. ಕೊರೊನಾ ಹೊಸ ರೂಪಾಂತರವಾದ ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸರ್ಕಾರವು ನಿರಂತರವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಮಧ್ಯೆ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕರು ಶಾಕಿಂಗ್​ ಸುದ್ದಿ ಸಹ ಕೊಟ್ಟಿದ್ದಾರೆ.

Recommended Video

      Omicron ಬಗ್ಗೆ ಜನರಿಗೆ ಎಷ್ಟು ಗೊತ್ತಿದೆ ? | Oneindia Kannada

      ದೇಶದಲ್ಲಿ ಮುಂದಿನ ತಿಂಗಳ ವೇಳೆಗೆ ನಿತ್ಯ ಐದು ಲಕ್ಷ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ ಎಂದು ಅಮೆರಿಕ ಮೂಲದ ಆರೋಗ್ಯ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಓಮಿಕ್ರಾನ್​ ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಹಲವಾರು ರಾಜ್ಯಗಳು ದಿಟ್ಟ ಹೆಜ್ಜೆಗಳು ಇಟ್ಟಿವೆ . ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ನೈಟ್​ ಕರ್ಫ್ಯೂ ಸೇರಿದಂತೆ ಅನೇಕ ಕಟ್ಟು ನಿಯಮಗಳು ಜಾರಿಗೆ ತಂದಿವೆ

      Experts Warn Of 5L Peak In February As India Stares At 21% Rise In A Day

      ಅಮೆರಿಕ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಹೇಳಿಕೆ ಪ್ರಕಾರ, ಭಾರತದಲ್ಲಿ, ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಪ್ರಕರಣಗಳು ಬರಬಹುದು ಎಂದು ಹೇಳಿದ್ದಾರೆ. ಒಮಿಕ್ರಾನ್ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಇವರು ಮುನ್ಸೂಚನೆ ನೀಡಿದ್ದಾರೆ.

      ಓಮಿಕ್ರಾನ್ ಕಡಿಮೆ ತೀವ್ರತೆ ಹೊಂದಿದೆ ಎಂಬುದು ಈವರೆಗೆ ಒಳ್ಳೆಯ ಸುದ್ದಿಯೇ ಆಗಿದೆ. ಆದರೆ ಕೋವಿಡ್-19 ಬಹಳ ಪರಿಣಾಮಕಾರಿಯಾಗಿ ಹರಡುತ್ತಿದ್ದು ಇದು ವಿಕಸನಾತ್ಮಕ ತಪ್ಪೂ ಆಗಿರಬಹುದು, ಈ ರೂಪಾಂತರಿ ಸೌಮ್ಯ ಲಕ್ಷಣಗಳನ್ನು ಹೊಂದಿರುವುದಕ್ಕೆ ಕಾರಣಗಳಿಲ್ಲ, ಮುಂಬರುವ ರೂಪಾಂತರಿ ವೈರಾಣು ಇದಕ್ಕಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು ಎಂದು ಭಾರತೀಯ ಮೂಲದ ಬ್ರಿಟನ್ ತಜ್ಞರೊಬ್ಬರು ಹೇಳಿದ್ದಾರೆ.

      ಕೇಂಬ್ರಿಡ್ಜ್ ವಿವಿಯ ರವೀಂದ್ರ ಗುಪ್ತ ಕ್ಲಿನಿಕಲ್ ಮೈಕ್ರೋಬಯಾಲಜಿಯ ವಿಭಾಗದ ಪ್ರೊಫೆಸರ್ ಆಗಿದ್ದು, ಓಮಿಕ್ರಾನ್ ಬಗ್ಗೆ ಇತ್ತೀಚೆಗೆ ನಡೆದ ಅಧ್ಯಯನದ ನೇತೃತ್ವ ವಹಿಸಿದ್ದರು.

      ಈ ಅಧ್ಯಯನ ಜಾಗತಿಕ ಮಟ್ಟದಲ್ಲೇ ಮೊದಲ ಬಾರಿಗೆ ದೇಹದ ರೋಗನಿರೋಧಕ ವ್ಯವಸ್ಥೆಗೆ ಓಮಿಕ್ರಾನ್ ನ್ನು ಸ್ಪಷ್ಟವಾಗಿ ಗುರುತಿಸುವ ಜೀವಕೋಶಗಳ ಮಾರ್ಪಡಿಸಿದ ಸಮ್ಮಿಳನ ಕಾರ್ಯವಿಧಾನವನ್ನು ವಿವರಿಸಿತ್ತು.

      ಬ್ರಿಟನ್ ನಲ್ಲಿ ಅತಿ ಹೆಚ್ಚಾಗಿರುವ, ಭಾರತದಲ್ಲಿ ಏರುಗತಿಯಲ್ಲಿರುವ ಓಮಿಕ್ರಾನ್ ಸೋಂಕು ಶ್ವಾಸಕೋಶದಲ್ಲಿರುವ ಜೀವಕೋಶಗಳಿಗೆ ಕಡಿಮೆ ತಗುಲುತ್ತಿದೆ. ಆದರೆ ವೈರಾಣುವಿನ ಸ್ವರೂಪ ಮೂಲದಲ್ಲಿಯೇ ಸೌಮ್ಯವಾಗಿಲ್ಲ ಎಂದು ಅಧ್ಯಯನ ವರದಿ ಹೇಳಿದೆ.

      ಕಳೆದಂತೆ ವೈರಾಣುಗಳು ಹೆಚ್ಚು ಸೌಮ್ಯವಾಗುತ್ತವೆ ಎಂಬುದು ಜನಜನಿತ ಕಲ್ಪನೆ. ಆದರೆ ಈ ಕೋವಿಡ್-19 ವಿಷಯದಲ್ಲಿ ಅದು ಹಾಗೆ ಆಗುತ್ತಿಲ್ಲ. ಏಕೆಂದರೆ ಅವೆಲ್ಲವೂ ದೀರ್ಘಾವಧಿಯ ವಿಕಸನ ಪ್ರವೃತ್ತಿಗಳನ್ನು ಹೊಂದಿದೆ ಎಂದು ಪ್ರೊಫೆಸರ್ ಗುಪ್ತ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಎಚ್ಚರಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+