ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ : ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 07 : ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಲು ಆರಂಭಿಸಿದ್ದು, ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯ ವಿವರಗಳು ಕೆಳಗಿನಂತಿರಲಿವೆ.

ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿರುವ ಫಲಿತಾಂಶದ ದಿಕ್ಸೂಚಿ ಮಾತ್ರ ಆಗಿರುತ್ತವೆ. ಒಂದೊಂದು ಸಂಸ್ಥೆ ನಡೆಸಿರುವ ಸಮೀಕ್ಷೆಗಳು ಹೆಚ್ಚೂಕಡಿಮೆ ಆಗಿರುವುದರಿಂದ ಫಲಿತಾಂಶ ಬರುವವರೆಗೆ ಕಾಯಲೇಬೇಕು.

ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?

ಈ ಚುನಾವಣೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಐದು ರಾಜ್ಯಗಳಲ್ಲಿ ಬರಲಿರುವ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆಯಾಗಿರಲಿದೆ. ಏಕೆಂದರೆ, ಇದು 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.

<br>ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!
ಮಧ್ಯಪ್ರದೇಶದಲ್ಲಿ ಬೆಟುಲ್ ಕ್ಷೇತ್ರ ಗೆದ್ದವರು ರಾಜ್ಯ ಆಳ್ತಾರೆ!

ಐದೂ ರಾಜ್ಯಗಳ ಚುನಾವಣೆ ಫಲಿತಾಂಶ ಡಿಸೆಂಬರ್ 11ರಂದು ಮಂಗಳವಾರ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಎಲ್ಲ ರಾಜಕೀಯ ಪಕ್ಷಗಳು ಉಸಿರುಬಿಗಿಹಿಡಿದು ಕಾದಿರಲಿವೆ.

Exit Poll

Newest FirstOldest First
8:53 PM, 7 Dec

ಪೋಲ್ ಆಫ್ ಪೋಲ್ಸ್ ನಲ್ಲಿ - ಮಧ್ಯ ಪ್ರದೇಶ : ಕಾಂಗ್ರೆಸ್ 125, ಬಿಜೆಪಿ 103, ಇತರೆ 2 ; ರಾಜಸ್ಥಾನ : ಕಾಂಗ್ರೆಸ್ 115, ಬಿಜೆಪಿ 76, ಇತರೆ 8 ; ತೆಲಂಗಾಣ : ಟಿಆರ್ಎಸ್ 66, ಕಾಂಗ್ರೆಸ್ 39, ಬಿಜೆಪಿ 5 ; ಮಿಜೋರಾಂ : ಕಾಂಗ್ರೆಸ್ 16, ಎಂಎನ್ಎಫ್ 18, ಇತರೆ 6 ; ಛತ್ತೀಸ್ ಗಢ : ಬಿಜೆಪಿ 40, ಕಾಂಗ್ರೆಸ್ 44, ಇತರೆ 6.
8:36 PM, 7 Dec

ರಾಜಸ್ಥಾನದಲ್ಲಿ ಒಂದೇ ಒಂದು ಸಮೀಕ್ಷೆಯೂ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಬರುತ್ತದೆಂದು ಹೇಳಿಲ್ಲ. ಭಾರತವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇನೆಂದು ಹೊರಟಿದ್ದ ಬಿಜೆಪಿಗೆ ಇದು ಭಾರೀ ಆಘಾತ. ರಿಪಬ್ಲಿಕ್ - ಜನ್ ಕಿ ಬಾತ್ ಮತ್ತು ನ್ಯೂಸ್ ನೇಷನ್ ಹೊರತುಪಡಿಸಿದರೆ ಉಳಿದೆಲ್ಲ ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಬಹುಮತ ಅಥವಾ ಅತಿಹೆಚ್ಚು ಸ್ಥಾನ ದಕ್ಕಲಿವೆ ಎಂದೇ ಹೇಳಿವೆ. ಇವೆರಡು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ಜಿದ್ದಾಜಿದ್ದಿ ಕುಸ್ತಿ ನಡೆಸಲಿವೆ.
8:00 PM, 7 Dec

ತೆಲಂಗಾಣದಲ್ಲಿ ಎಲ್ಲ ಸಮೀಕ್ಷೆಗಳ ಪ್ರಕಾರ ಹೆಚ್ಚುಕಡಿಮೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅಧಿಕಾರ ಉಳಿಸಿಕೊಳ್ಳಲಿದೆ. ಇಂಡಿಯಾ ಟುಡೇ - ಆಕ್ಸಿಸ್ ಸಮೀಕ್ಷೆಯಂತೆ ಟಿಆರ್ಎಸ್ 79-91 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯಲಿದೆ. ಕಾಂಗ್ರೆಸ್ 21-33ರಷ್ಟು ಸ್ಥಾನ ಪಡೆದು ಸಮಾಧಾನಕರ ಸಾಧನೆ ಮಾಡಲಿದೆ. ಎಐಎಂಐಎಂಗೆ ಭಾರೀ ಆಘಾತವಾಗಲಿದ್ದು ಕೇವಲ 4-7 ಸ್ಥಾನ ಮಾತ್ರ ಗೆಲ್ಲಲಿದೆ. ಇನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವ ಬಿಜೆಪಿ 1-3 ಸ್ಥಾನ ತನ್ನದಾಗಿಸಿಕೊಳ್ಳಲಿದೆ. ನಿರೀಕ್ಷೆಯಂತೆ ಕೆ ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾಗಿ ರಾರಾಜಿಸಲಿದ್ದಾರೆ.
7:00 PM, 7 Dec

ಮಧ್ಯಪ್ರದೇಶದಲ್ಲಿ ರಿಪಬ್ಲಿಕ್ - ಸಿವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಪ್ರಕಾರ, ಬಿಜೆಪಿ 106, ಕಾಂಗ್ರೆಸ್ 110-126, ಇತರ ಪಕ್ಷಗಳು 6-12 ಸ್ಥಾನ ಗೆಲ್ಲಲಿವೆ. ಕಾಂಗ್ರೆಸ್ ಮತ್ತು ಅಂಗ ಪಕ್ಷಗಳು 126ರ ಸನಿಹ ಬಂದರೆ ಅಧಿಕಾರ ಹಿಡಿಯುವುದು ಗ್ಯಾರಂಟಿ. ಮಧ್ಯ ಪ್ರದೇಶದಲ್ಲಿ ಮಹುಮತಕ್ಕೆ ಬೇಕಿರುವುದು 116 ಸ್ಥಾನಗಳು.
6:57 PM, 7 Dec

ತೆಲಂಗಾಣದಲ್ಲಿ ನ್ಯೂಸ್ ಎಕ್ಸ್ ನೇತಾ ಪ್ರಕಾರ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಟಿಎಸ್‌ಆರ್ ನೆಚ್ಚಿನ ಪಕ್ಷವಾಗಿದ್ದರೂ ಕೇವಲ 57 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಲಿದೆ. ಕಾಂಗ್ರೆಸ್ ಮತ್ತಿತರ ಅಂಗಪಕ್ಷಗಳು 46ರಲ್ಲಿ ಗೆದ್ದರೆ, ಬಿಜೆಪಿ 6ರಲ್ಲಿ ಮತ್ತು ಪಕ್ಷೇತರರು 10 ಸ್ಥಾನ ಗೆಲ್ಲಲಿದ್ದಾರೆ. ಇದನ್ನು ಕೆ ಚಂದ್ರಶೇಖರ ರಾವ್ ಅವರಿಗೆ ಮುಖಭಂಗ ಅಂತಲೇ ಹೇಳಬಹುದು. ಬಹುಮತಕ್ಕೆ ಬೇಕಿರುವುದು 61 ಸ್ಥಾನಗಳು. ಟೈಮ್ಸ್ ನೌ ಮತ್ತು ಇಂಡಿಯಾ ಟುಡೆಗಳೆರಡೂ ಇಲ್ಲಿ ಕೆಸಿಆರ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಹೇಳಿವೆ.
6:54 PM, 7 Dec

ರಾಜಸ್ಥಾನದಲ್ಲಿ ನ್ಯೂಸ್ ಎಕ್ಸ್ ನೇತಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಜಯಭೇರಿ ಬಾರಿಸಿ ಸ್ಪಷ್ಟ ಬಹುಮತ ಪಡೆಯಲಿದೆ. ಬಹುಮತಕ್ಕೆ ಬೇಕಿರುವುದು 101 ಸ್ಥಾನಗಳಾದರೆ ಕಾಂಗ್ರೆಸ್ 112 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಬಿಜೆಪಿ 80ರಲ್ಲಿ ಗೆದ್ದು ಅಧಿಕಾರದಿಂದ ಇಳಿಯಲಿದೆ. 9 ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ.
6:48 PM, 7 Dec

ಮಧ್ಯಪ್ರದೇಶದಲ್ಲಿ ನ್ಯೂಸ್ ಎಕ್ಸ್ ನೇತಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಕಾಂಗ್ರೆಸ್ 112 ಸ್ಥಾನ ಗಳಿಸಿ ಅಧಿಕಾರ ಹಿಡಿಯಲು ಹತ್ತಿರ ಬರಲಿದೆ, ಬಿಜೆಪಿ 106 ಸ್ಥಾನ ಗಳಿಸಿದರೆ, ಇತರೆ ಪಕ್ಷಗಳ ಪಾಲು 12. ಹೀಗಿದ್ದಾಗ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ಆಗ ಪಕ್ಷೇತರರೇ ಪ್ರಮುಖ ಪಾತ್ರ ವಹಿಸಲಿದ್ದಾರೆ.
Advertisement
6:44 PM, 7 Dec

ಜನ್‌ ಕೀ ಬಾತ್ ಸಮೀಕ್ಷೆ ಪ್ರಕಾರ ಕೂಡ ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಅಧಿಕಾರ ಗದ್ದುಗೆ ತಪ್ಪಲಿದೆ. ಬಿಜೆಪಿ 83-103, ಕಾಂಗ್ರೆಸ್‌ 81-101 ಮತ್ತು ಇತರೆ 7-11 ಸ್ಥಾನ. ರಾಜಸ್ಥಾನದ ಇತ್ತೀಚಿನ ಇತಿಹಾಸ ಗಮನಿಸಿದಾಗ ಒಂದೇ ಪಕ್ಷ ಎರಡು ಅವಧಿಗೆ ಅಧಿಕಾರ ಗದ್ದುಗೆ ಏರಿಯೇ ಇಲ್ಲ.
6:33 PM, 7 Dec

ಛತ್ತೀಸ್ ಗಢದಲ್ಲಿ ರಿಪಬ್ಲಿಕ್ ಟಿವಿ - ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆಯಂತೆ, ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, 90 ಕ್ಷೇತ್ರಗಳ ರಾಜ್ಯದಲ್ಲಿ 40-48 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 37-43 ಸ್ಥಾನ ಪಡೆದು ಅಧಿಕಾರ ವಂಚಿತವಾಗಲಿದೆ ಮತ್ತು ಇತರ ಪಕ್ಷಗಳು 5-6 ಸ್ಥಾನಗಳನ್ನು ಗೆಲ್ಲಲಿವೆ.
6:28 PM, 7 Dec

ಎಬಿಪಿ ನ್ಯೂಸ್ - ಸಿಎಸ್‌ಡಿಎಸ್ ಎಕ್ಸಿಟ್ ಪೋಲ್ ಪ್ರಕಾರ, ರಾಹುಲ್ ಗಾಂಧಿ ಅವರು ಗೆಲುವಿನ ನಗೆ ಬೀರಲಿದ್ದಾರೆ. ಕಾಂಗ್ರೆಸ್ ಪಕ್ಷದ 15 ವರ್ಷಗಳ ಅಧಿಕಾರದ ಬರ ನೀಗಲಿದ್ದು, 126 ಸೀಟುಗಳನ್ನು ಗೆದ್ದು ಗದ್ದುಗೆಯೇರಲಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮುಖಭಂಗ ಅನುಭವಿಸಲಿದ್ದು, 94 ಕ್ಷೇತ್ರಗಳಲ್ಲಿ ಮಾತ್ರ ಜಯಶಾಲಿಯಾಗಲಿದೆ.
6:21 PM, 7 Dec

ರಿಪಬ್ಲಿಕ್ ಟಿವಿ - ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತದೆಂದರೆ, ಮಧ್ಯ ಪ್ರದೇಶದಲ್ಲಿ ಬಿಜೆಪಿ ಮತ್ತು ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದೆ. ಬಿಜೆಪಿ 108-128. ಬಹುಮತಕ್ಕೆ ಬೇಕಿರುವುದು 116 ಸ್ಥಾನಗಳು. ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಲಿದ್ದು, 95-115 ಸ್ಥಾನ ಗೆದ್ದು, ಅಧಿಕಾರಕ್ಕೆ ಹತ್ತಿರ ಬಂದೂ ನಿರಾಶೆ ಅನುಭವಿಸಲಿದೆ.
6:10 PM, 7 Dec

ಇಂಡಿಯಾ ಟುಡೆ - ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಮುಖಭಂಗ ಅನುಭವಿಸುವುದು ಖಚಿತ. ಕಾಂಗ್ರೆಸ್ 119-141 ಕ್ಷೇತ್ರಗಳಲ್ಲಿ ಗೆದ್ದು ಗದ್ದುಗೆ ಏರಲಿದೆ. ಬಿಜೆಪಿ 55-72 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ವಿರೋಧ ಪಕ್ಷದಲ್ಲಿ ಕೂಡಲಿದೆ. ಇದು ಆಡಳಿತ ವಿರೋಧಿ ಅಲೆಯ ಪರಿಣಾಮವೆ?
Advertisement
6:02 PM, 7 Dec

ಛತ್ತೀಸ್ ಗಢದಲ್ಲಿ ಸಿವೋಟರ್ ವಿಭಿನ್ನ ಫಲಿತಾಂಶವನ್ನು ನೀಡುತ್ತಿದೆ. ಕಾಂಗ್ರೆಸ್ಸಿಗೆ 46 ಸ್ಥಾನಗಳು ಲಭಿಸಿದರೆ, 36 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ಉಳಿದವು ಇತರೆ ಪಕ್ಷಗಳ ಪಾಲಾಗಲಿವೆ. ಸಿವೋಟರ್ ಸಮೀಕ್ಷೆ ನಿಜವಾಗುವುದಾ, ಟೈಮ್ಸ್ ನೌ ಸಮೀಕ್ಷೆ ನಿಜವಾಗುವುದಾ? ಡಿಸೆಂಬರ್ 11ರವರೆಗೆ ಕಾಯಿರಿ.
6:00 PM, 7 Dec

ಟೈಮ್ಸ್ ನೌ ಪ್ರಕಾರ, ಛತ್ತೀಸ್ ಗಢದಲ್ಲಿ ಕಳೆದ ಚುನಾವಣೆಯಂತೆ ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಲಿದೆ. ಒಟ್ಟು 90 ಕ್ಷೇತ್ರಗಳ ರಾಜ್ಯದಲ್ಲಿ ಬಿಜೆಪಿಗೆ 46, ಕಾಂಗ್ರೆಸ್ಸಿಗೆ 35, ಬಿಎಸ್ಪಿ ಮೈತ್ರಿಕೂಟದ ಪಕ್ಷಗಳಿಗೆ 7 ಮತ್ತು ಇತರ ಪಕ್ಷಗಳಿಗೆ 9 ಸ್ಥಾನ ದೊರೆಯಲಿವೆ. ಇಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಹೆಚ್ಚೂಕಡಿಮೆ ಗ್ಯಾರಂಟಿ.
5:51 PM, 7 Dec

ಆದರೆ, ಟೈಮ್ಸ್ ನೌ-ಸಿಎನ್ಎಕ್ಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ಉಳಿಸಿಕೊಳ್ಳಲಿದ್ದು, ರಾಜಸ್ಥಾನದಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಾಂಗ್ರೆಸ್ ಕಿತ್ತುಕೊಳ್ಳಲಿದೆ.
5:46 PM, 7 Dec

ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಮಧ್ಯಪ್ರದೇಶದಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳಲಿದ್ದು, ಆಡಳಿತಾರೂಢ ಬಿಜೆಪಿಯನ್ನು ಕಾಂಗ್ರೆಸ್ ಪದಚ್ಯುತಗೊಳಿಸಲಿದ್ದು, ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಆದರೆ, ಸರಕಾರ ರಚಿಸುವಷ್ಟು ಸೀಟು ಸಿಗಲಿದೆಯಾ, ಡಿಸೆಂಬರ್ 11ರಂದು ತಿಳಿದುಬರಲಿದೆ.
5:16 PM, 7 Dec

ರಾಜಸ್ಥಾನ (200) : ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 200. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ 163 ಸ್ಥಾನಗಳನ್ನು ಬಿಜೆಪಿ ಗೆದ್ದು ಸರ್ಕಾರ ರಚಿಸಿತ್ತು. ವಸುಂಧರಾ ರಾಜೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ರಾಜಸ್ಥಾನಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳನ್ನಷ್ಟೇ ಗೆದ್ದು ಮುಖಭಂಗ ಅನುಭವಿಸಿತ್ತು. ಮತದಾನದ ದಿನಾಂಕ ಡಿಸೆಂಬರ್ 07, ಡಿಸೆಂಬರ್ 11ರಂದು ಫಲಿತಾಂಶ.
5:15 PM, 7 Dec

ತೆಲಂಗಾಣ (119) : ಸೆ.6 ರಂದು ವಿಸರ್ಜನೆಯಾದ ತೆಲಂಗಾಣ ವಿಧಾನಸಭೆಗೂ ಈ ವರ್ಷದ ಕೊನೆಯ ತಿಂಗಳಿನಲ್ಲೇ ಚುನಾವಣೆ ನಡೆಯುತ್ತಿದೆ. ಒಟ್ಟು 119 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪ್ರಾಬಲ್ಯ ಪಡೆದಿದೆ. ಪ್ರಸ್ತುತ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(ಉಸ್ತುವಾರಿ) ನೇತೃತ್ವದ ಟಿಆರ್ ಎಸ್ 2014 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಹುಮತ ಪಡೆದಿತ್ತು. ಮತದಾನದ ದಿನಾಂಕ ಡಿಸೆಂಬರ್ 07, ಡಿಸೆಂಬರ್ 11ರಂದು ಫಲಿತಾಂಶ
5:15 PM, 7 Dec

ಮಿಜೋರಾಂ: 40 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 28ರಂದು ನಡೆದ ಮತದಾನ ನಡೆಸಲಾಯಿತು. 7.68 ಲಕ್ಷ ಜನಸಂಖ್ಯೆಯ ರಾಜ್ಯದಲ್ಲಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. 3.93 ಲಕ್ಷ ಮಹಿಳಾ ಮತದಾರರು ಹಾಗೂ 3.74 ಲಕ್ಷ ಪುರುಷ ಮತದಾರರನ್ನು ರಾಜ್ಯ ಹೊಂದಿದೆ. 2008ರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ನಡುವೆ ನೇರ ಹಣಾಹಣಿ ಕಾಣಬಹುದಾಗಿದೆ. ಬಿಜೆಪಿ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ), ಜೋರಮ್ ಪೀಪಲ್ಸ್ ಮೂವ್ಮೆಂಟ್ (ಜಡ್ಜ್ ಪಿಎಂ) ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಿವೆ. ಈ ಬಾರಿ ಶೇ 80ರಷ್ಟು ಮತದಾನ ಕಂಡು ಬಂದಿದೆ. 2013ರಲ್ಲಿ ಶೇ 83.41ರಷ್ಟು ಮತದಾನವಾಗಿತ್ತು.
5:15 PM, 7 Dec

ಛತ್ತೀಸ್ ಗಢ(90) : ನವೆಂಬರ್ 12 ಹಾಗೂ 20 ರಂದು ಎರಡು ಹಂತದಲ್ಲಿ ಮತದಾನ ನಡೆಸಲಾಯಿತು. 8 ಜಿಲ್ಲೆಗಳಲ್ಲಿನ 118 ಸ್ಥಾನಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಶೇ70ರಷ್ಟು ಮತದಾನ ಕಂಡು ಬಂದಿತ್ತು. ಬಿಜಾಪುರ್ ಹಾಗೂ ಸುಕ್ಮಾ ಜಿಲ್ಲೆಗಳಲ್ಲಿ ನಡೆದ ಚುನಾವಣೆಗಳಲ್ಲಿ ಕನಿಷ್ಟ 6 ಮಂದಿ ಮಾವೋವಾದಿಗಳ ಹತ್ಯೆ ನಡೆಯಿತು, ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದರು. ಎರಡನೇ ಹಂತದಲ್ಲಿ ಶೇ 76.35ರಷ್ಟು ಮತದಾನ ದಾಖಲಾಯಿತು. ಒಟ್ಟಾರೆ, 1,079 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 72 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 2003ರಿಂದ ಇಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2013ರಲ್ಲಿ ಶೇ 77.40ರಷ್ಟು ಮತದಾನವಾಗಿತ್ತು.
5:15 PM, 7 Dec

ಮಧ್ಯಪ್ರದೇಶ (230): ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಶೇ 75ರಷ್ಟು ಮತದಾನದ ದಾಖಲಾಯಿತು. ಬಿಜೆಪಿ 230 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ 229ರಲ್ಲಿ ಸ್ಪರ್ಧಿಸಿದ್ದರೆ, ತಿಕ್ಮಾಘರ್ ಜಿಲ್ಲೆಯ ಜತಾರಾ ಸೀಟನ್ನು ಶರದ್ ಯಾದವ್ ನೇತೃತ್ವದ ಲೋಕ್ ತಾಂತ್ರಿಕ್ ಜನತಾ ದಳ(ಎಲ್ ಜೆಡಿ)ಗೆ ಬಿಟ್ಟುಕೊಟ್ಟಿದೆ. ಮಧ್ಯಪ್ರದೇಶದಲ್ಲಿ ಅಧಿಕಾರ ಸ್ಥಾಪಿಸಲು ಬೇಕಾದ ಮ್ಯಾಜಿಕ್ ನಂಬರ್ 116. ಮಧ್ಯಪ್ರದೇಶದಲ್ಲಿ 82 ಮೀಸಲು ಕ್ಷೇತ್ರಗಳಿದ್ದು, 35 ಎಸ್ ಸಿ ಹಾಗೂ 47 ಎಸ್ ಟಿ ವರ್ಗಕ್ಕೆ ಸೇರಿದ್ದಾಗಿವೆ.

English summary
Counting of votes for all the five assembly states will be held on December 11. BJP leaders, Shivraj Singh Chauhan and Raman Singh seeking mandate for the fourth term in Madhya Pradesh and tribal-state Chhattisgarh. In Rajasthan, Vasundhara Raje Scindia government seeking a mandate for the second consecutive term and for the third term overall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X