• search

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷದ ಗೆಲುವು?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಡಿಸೆಂಬರ್ 07: ದೇಶದಾದ್ಯಂತ ಭಾರಿ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ಮತದಾನ ಪ್ರಕ್ರಿಯೆ ಇಂದಿಗೆ ಕೊನೆ ಆಗಿದೆ. ಅದರ ಬೆನ್ನಿಗೆ ಮತದಾನೋತ್ತರ ಸಮೀಕ್ಷೆ ಸಹ ಹೊರಬಿದ್ದಿದೆ.

  ರಾಜಸ್ಥಾನ, ತೆಲಂಗಾಣ, ಮಿಜೋರಂ, ಛತ್ತೀಸ್‌ಘಡ್, ಮಧ್ಯಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಮುಗಿದಿದ್ದು, ಸನಿಹದಲ್ಲೇ ಇರುವ ಲೋಕಸಭೆ ಚುನಾವಣೆಗೆ ಇದನ್ನು ಸೆಮಿಫೈನಲ್ ಎನ್ನಲಾಗುತ್ತಿದೆ. ಈ ಚುನಾವಣೆಗಳ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಬಿಜೆಪಿಗೆ ಅಷ್ಟೇನೂ ಹಿತಕರವಲ್ಲದ ವರದಿಯನ್ನು ಸಮೀಕ್ಷೆಗಳು ನೀಡುತ್ತಿವೆ.

  ಐದು ರಾಜ್ಯಗಳಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ. ಆದರೆ ಕಾಂಗ್ರೆಸ್‌ಗೆ ಸಹ ಇದು ಅಷ್ಟೇನು ಉತ್ತಮ ಫಲಿತಾಂಶವಾಗಲಾರದು ಎಂದು ಸಮೀಕ್ಷೆಯ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತಿದೆ.

  ಮಧ್ಯಪ್ರದೇಶದಲ್ಲಿ Poll of Polls : ಮರೀಚಿಕೆಯಾದ ಮ್ಯಾಜಿಕ್ ನಂಬರ್

  ರಾಜಸ್ಥಾನ, ತೆಲಂಗಾಣ, ಮಿಜೋರಂ, ಛತ್ತೀಸ್‌ಘಡ್, ಮಧ್ಯಪ್ರದೇಶ ಚುನಾವಣೆಗಳ ಮತದಾನೋತ್ತರ ಸಮೀಕ್ಷೆಯ ಪುರ್ಣ ವರದಿ ಇಲ್ಲದೆ.

  ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಬಹುಮತ

  ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಬಹುಮತ

  ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಗದ್ದುಗೆ ಹಿಡಿಯಲಿದೆ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳುತ್ತಿವೆ. ಪೋಲ್‌ ಆಫ್‌ ದಿ ಪೋಲ್ಸ್‌ (ಸಮೀಕ್ಷೆಗಳ ಸಮೀಕ್ಷೆ) ಪ್ರಕಾರ ಬಿಜೆಪಿ 82 ರ ಆಸುಪಾಸಿಗೆ ಓಟ ನಿಲ್ಲಿಸಲಿದೆ. ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿದ್ದು 108ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ. ಇನ್ನು ಇತರೆ ಪಕ್ಷಗಳು 8-10 ಸ್ಥಾನ ಪಡೆಯಬಹುದು ಎಂದು ವರದಿ ಹೇಳುತ್ತಿದೆ.

  ಸಮೀಕ್ಷೆಗಳ ಸಮೀಕ್ಷೆ: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಹವಾ ತಡೆಯುವವರಿಲ್ಲ

  ಮಧ್ಯಪ್ರದೇಶದಲ್ಲೂ ಬಿಜೆಪಿಗೆ ಸಿಹಿ ಇಲ್ಲ

  ಮಧ್ಯಪ್ರದೇಶದಲ್ಲೂ ಬಿಜೆಪಿಗೆ ಸಿಹಿ ಇಲ್ಲ

  ಕಳೆದ 15 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿರುವ ಮಧ್ಯಪ್ರದೇಶದಲ್ಲಿ ಈ ಬಾರಿ ಅಧಿಕಾರ ಪಲ್ಲಟ ಆಗುತ್ತದೆಯೆಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಬಿಜೆಪಿಯ ಶೇಕಡಾವಾರು ಮತದಲ್ಲಿ ಭಾರಿ ಕುಸಿತ ಆಗಿದೆ ಎನ್ನುತ್ತಿವೆ ಸಮೀಕ್ಷೆಗಳು. ಬಿಜೆಪಿ 40% ಮತ ಗಳಿಸಿದರೆ, ಕಾಂಗ್ರೆಸ್‌ 43% ಮತಗಳಿಸುತ್ತದೆ. ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಾಯಂ ಆದರೆ ಬಹುಮತ ಬರುವ ಬಗ್ಗೆ ಸಮೀಕ್ಷೆಯ ವರದಿಯಿಂದ ಅನುಮಾನ ಏಳುತ್ತಿದೆ.

  ಪೋಲ್ ಆಫ್ ಪೋಲ್ಸ್ : ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ

  ತೆಲಂಗಾಣದಲ್ಲಿ ಕೆಸಿಆರ್ ಕಿಂಗ್‌

  ತೆಲಂಗಾಣದಲ್ಲಿ ಕೆಸಿಆರ್ ಕಿಂಗ್‌

  ತೆಲಂಗಾಣ ರಾಜ್ಯದಲ್ಲಿ ಕೆ.ಚಂದ್ರಶೇಖರ್ ರಾವ್ ಅವರೇ ಮತ್ತೊಮ್ಮೆ ಸಿಎಂ ಆಗುವ ಸಾಧ್ಯತೆ ಹೆಚ್ಚಿಗಿದೆ ಎನ್ನುತ್ತಿದೆ ಚುನಾವಣೋತ್ತರ ಸಮೀಕ್ಷೆ. ಕಾಂಗ್ರೆಸ್‌ ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಉತ್ತಮ ಫಸಲು ಗಳಿಸಲು ವಿಫಲವಾಗಿದೆ. ಬಿಜೆಪಿ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಟಿಎಸ್‌ಆರ್‌ ಪಕ್ಷ 66 ಸ್ಥಾನ ಪಡೆದರೆ, ಟಿಡಿಪಿ ಮತ್ತು ಕಾಂಗ್ರೆಸ್‌ ಜಂಟಿಯಾಗಿ 39 ಬಿಜೆಪಿ 5 ಹಾಗೂ ಇತರೆ ಪಕ್ಷಗಳು 9 ಸ್ಥಾನವನ್ನಷ್ಟೆ ಗಳಿಸುತ್ತವೆ ಎನ್ನುತ್ತಿವೆ ಸಮೀಕ್ಷೆ.

  ಮತದಾನೋತ್ತರ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಅಧಿಕಾರಕ್ಕೇರಲಿದೆ ಕಾಂಗ್ರೆಸ್‌

  ಛತ್ತೀಸ್‌ಘಡದಲ್ಲಿ ಸಮಬಲ

  ಛತ್ತೀಸ್‌ಘಡದಲ್ಲಿ ಸಮಬಲ

  ಛತ್ತೀಸ್‌ಘಡದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲು ಮೈತ್ರಿಯ ಮೊರೆಹೋಗಬೇಕಾಗುತ್ತದೆ. ಅದೇ ಮೈತ್ರಿಯ ಅವಕಾಶ ಕಾಂಗ್ರೆಸ್‌ಗೂ ಎನ್ನುತ್ತಿವೆ ಸಮೀಕ್ಷೆ ವರದಿಗಳು. ಸಮೀಕ್ಷೆಗಳ ಸಮೀಕ್ಷೆ ಪ್ರಕಾರ ಛತ್ತೀಸ್‌ಘಡ್‌ನಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ 43 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿಯು 40 ಮತ್ತು ಇತರೆ ಪಕ್ಷಗಳು 6 ಸ್ಥಾನದಲ್ಲಿ ಗೆಲುವು ಸಾಧಿಸಲಿವೆ. ಬಹುಮತಕ್ಕೆ 46 ಸ್ಥಾನಗಳನ್ನು ಪಡೆಯಬೇಕಿದೆ.

  ಮಿಜೋರಂನಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಕಾಂಗ್ರೆಸ್‌

  ಮಿಜೋರಂನಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಕಾಂಗ್ರೆಸ್‌

  ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಕೊನೆಯ ಈಶಾನ್ಯ ರಾಜ್ಯ ಮಿಜೋರಂನಲ್ಲಿ ಅದು ತನ್ನ ಅಧಿಕಾರ ಕಳೆದುಕೊಳ್ಳಲಿದೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು. ಆದರೆ ಪ್ರತಿಪಕ್ಷ ಎಂಎನ್‌ಎಫ್‌ಗೂ ಪೂರ್ಣ ಬಹುಮತ ಬರುವ ಸಾಧ್ಯತೆ ಇಲ್ಲಿ ಕಡಿಮೆ ಎನ್ನಲಾಗುತ್ತಿದೆ. ಇನ್ನು ಬಿಜೆಪಿಯು ಇಲ್ಲಿ ಖಾತೆ ತೆರೆದರೇ ದೊಡ್ಡ ಸಂಗತಿ. 40 ಕ್ಷೇತ್ರಗಳಿರುವ ಇಲ್ಲಿ ಬಹುಮತಕ್ಕೆ 21 ಬೇಕು ಆದರೆ ಕಾಂಗ್ರೆಸ್‌ ಆಗಲಿ, ಎಂಎನ್‌ಎಫ್‌ (ಮಿಜೋ ನ್ಯಾಷನಲ್ ಫ್ರಂಟ್‌) ಮ್ಯಾಜಿಕ್ ನಂ ಮುಟ್ಟುವುದು ಅನುಮಾನ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Exit poll result of Rajasthan, Telangana, Madhya Pradesh, mizoram, Chattisgarh states assembly elections 2018. poll report saying that BJP may face defeat in this fie state elections.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more