FAQ: 500, 1000 ನೋಟು ಬದಲಾವಣೆ ಬ್ಯಾಂಕ್ ನಿಯಮ

Posted By:
Subscribe to Oneindia Kannada

ಇಂದು 500, 1000 ನೋಟು ಬದಲಾಯಿಸಿಕೊಳ್ಳಲು ಮೊದಲ ದಿನ. ಆದ್ದರಿಂದ ಬ್ಯಾಂಕ್ ನಲ್ಲಿ ಕೆಲ ಗೊಂದಲಗಳು ಕಂಡುಬರಬಹುದು. ಇವತ್ತು ನಿಮ್ಮ ವ್ಯವಹಾರ ಪೂರ್ತಿ ಆಗಲಿಲ್ಲ ಅಂದರೆ ಸಮಾಧಾನವಾಗಿರಿ, ಚಿಂತೆ ಮಾಡಬೇಡಿ. ಏಕೆಂದರೆ ಡಿಸೆಂಬರ್ 30ರವರೆಗೆ ನಿಮಗೆ ಸಮಯ ಇದೆ. ನೋಟಿಗೆ ಸಂಬಂಧಿಸಿದಂತೆ ಬಿಟ್ಟು ಇಂದು ಬ್ಯಾಂಕ್ ನ ಇತರ ವ್ಯವಹಾರಗಳು ಮಾಡುವುದು ಕಷ್ಟಸಾಧ್ಯವಾದ ಮಾತು.

500 ಹಾಗೂ 1,000 ರುಪಾಯಿ ನೋಟುಗಳಿಗೆ ಎಲ್ಲಿಯವರೆಗೆ ಬೆಲೆ ಇರುತ್ತದೆ?
ಈ ನೋಟುಗಳಿಗೆ ಡಿಸೆಂಬರ್ 30ರವರೆಗೆ ಬೆಲೆ ಇರುತ್ತದೆ. ಅಲ್ಲಿಯವರೆಗೆ ಬ್ಯಾಂಕ್ ಗೆ ಡೆಪಾಸಿಟ್ ಮಾಡಬಹುದು.

Exchange of notes with bank: FAQ's answered

ಎಷ್ಟು ಮೊತ್ತದ ಹಣವನ್ನು ನಗದು ರೂಪದಲ್ಲಿ ಸದ್ಯಕ್ಕೆ ಪಡೆಯಬಹುದು?
ಉದಾಹರಣೆ: ನಿಮ್ಮ ಹತ್ತಿರ ಐವತ್ತು ಸಾವಿರ ಇದೆ ಅಂದುಕೊಳ್ಳಿ. 4 ಸಾವಿರ ರುಪಾಯಿ ನಗದು ರೂಪದಲ್ಲಿ ಪಡೆಯಬಹುದು. ಮಿಕ್ಕ ನಲವತ್ತಾರು ಸಾವಿರ ರುಪಾಯಿ ನಿಮ್ಮದೇ ಬ್ಯಾಂಕ್ ಖಾತೆಗೆ ಜಮೆ ಮಾಡ್ತಾರೆ.

ಎಷ್ಟು ಹಣ ಬೇಕಾದರೂ ಡಿಪಾಸಿಟ್ ಮಾಡಬಹುದಾ?
50 ಸಾವಿರ ರುಪಾಯಿ ಮೇಲ್ಪಟ್ಟಿದ್ದರೆ ಪಾನ್ ಕಾರ್ಡ್ ಇರಲೇಬೇಕು. ಎರಡು ಲಕ್ಷ ಮೇಲ್ಪಟ್ಟ ಮೊತ್ತಕ್ಕೆ ಹಣದ ಮೂಲ ಯಾವುದು ಎಂಬುದನ್ನು ಸಾಬೀತು ಪಡಿಸುವ ದಾಖಲೆ ಇರಬೇಕು.

Exchange of notes with bank: FAQ's answered

ಬ್ಯಾಂಕ್ ಅಕೌಂಟ್ ಇಲ್ಲದ ಪಕ್ಷದಲ್ಲಿ ಏನು ಮಾಡಬಹುದು?
ಒಂದು ಬ್ಯಾಂಕ್ ಖಾತೆ ತೆರೆಯಬೇಕು ಅಥವಾ ಪೋಸ್ಟ್ ಆಫೀಸ್ ನಲ್ಲಿ, ಆರ್ ಬಿಐನಲ್ಲಿ. ವಾಣಿಜ್ಯ ಬ್ಯಾಂಕ್ ಗಳಲ್ಲಿ, ಕೋ ಆಪರೇಟಿವ್ ಬ್ಯಾಂಕ್ ಗಳು ಮತ್ತು ಇತರೆಡೆ ಖಾತೆ ತೆರೆಯಬಹುದು.

ನಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕಾ?
ನಾಲ್ಕು ಸಾವಿರದವರೆಗಿನ ನೋಟು ಬದಲಾವಣೆಗೆ ಯಾವುದೇ ಬ್ಯಾಂಕ್ ಗೆ ಹೋಗಬಹುದು. ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಈಗಾಗಲೇ ಖಾತೆ ಇರುವ ಬ್ಯಾಂಕ್ ಗೆ ಹೋಗಬೇಕು. ನಾಲ್ಕು ಸಾವಿರ ಮೇಲ್ಪಟ್ಟ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ಒಂದು ವೇಳೆ ಬೇರೆ ಬ್ಯಾಂಕ್ ಗೆ ಹೋಗೋದಾದರೆ ಅಧಿಕೃತ ಗುರುತಿನ ಚೀಟಿ ಹಾಗೂ ಬ್ಯಾಂಕ್ ಮಾಹಿತಿ ನೀಡಿದರೆ ಹೆಚ್ಚಿನ ಹಣವನ್ನು ಖಾತೆಗೆ ಹಾಕಲಾಗುತ್ತದೆ.

Exchange of notes with bank: FAQ's answered

ನನ್ನ ಖಾತೆ ಇರುವ ಬ್ಯಾಂಕ್ ನ ಯಾವುದೇ ಶಾಖೆಗೆ ಹೋಗಬಹುದಾ?
ಹೌದು, ಯಾವುದೇ ಶಾಖೆಗೆ ಹೋಗಬಹುದು.

ನನ್ನ ಸ್ನೇಹಿತರು ಅಥವಾ ಸಂಬಂಧಿಕರು ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಬಹುದಾ?
ಹೋಗಬಹುದು. ಅವರು ಲಿಖಿತ ರೂಪದಲ್ಲಿ ಅನುಮತಿ ನೀಡಬೇಕು. ಜತೆಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು.

ನಾವೇ ವೈಯಕ್ತಿಕವಾಗಿ ಬ್ಯಾಂಕ್ ಗೆ ಹೋಗಬೇಕಾ?
ನೀವೇ ಹೋದರೆ ಇಡೀ ಪ್ರಕ್ರಿಯೆ ತುಂಬ ಸಲೀಸು. ನಿಮ್ಮ ಪರವಾಗಿ ಯಾರನ್ನಾದರೂ ಕಳಿಸಿದರೆ ಲಿಖಿತವಾಗಿ ಬರೆದು, ಅವರು ನಿಮ್ಮ ಪ್ರತಿನಿಧಿ ಅಂತ ತಿಳಿಸಬೇಕು. ಅದರ ಜತೆಗೆ ಅವರ ಅಧಿಕೃತ ಗುರುತಿನ ಚೀಟಿಯನ್ನೂ ಜತೆಗೆ ತೆಗೆದುಕೊಂಡು ಹೋಗಬೇಕು.

ಗುರುತಿನ ಚೀಟಿ ಅನ್ನೋ ಹಾಗೆ ಯಾವ ದಾಖಲೆಗಳನ್ನು ನೀಡಬಹುದು?
ಆಧಾರ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ನರೇಗಾ ಕಾರ್ಡ್, ಪಾನ್ ಕಾರ್ಡ್, ಸರಕಾರದ ಯಾವುದೇ ಇಲಾಖೆ ವಿತರಿಸಿದ ಗುರುತಿನ ಚೀಟಿ, ಸಾರ್ವಜನಿಕ ಉದ್ದಿಮೆಗಳು ತಮ್ಮ ನೌಕರರಿಗೆ ನೀಡಿದ ಗುರುತಿನ ಚೀಟಿ.

ಎಟಿಎಂನಲ್ಲಿ ಹಣ ಡಿಪಾಸಿಟ್ ಮಾಡಬಹುದಾ?
ಹೌದು ಮಾಡಬಹುದು. ಆದರೆ ನವೆಂಬರ್ 10ರಂದು ಎಟಿಎಂ ಬಂದ್ ಆಗಿರುತ್ತವೆ.

Exchange of notes with bank: FAQ's answered

ಎಟಿಎಂನಿಂದ ಎಷ್ಟು ಹಣ ವಿಥ್ ಡ್ರಾ ಮಾಡಬಹುದು?
ನವೆಂಬರ್ 11ರಿಂದ 18ರವರೆಗೆ ಎರಡು ಸಾವಿರ ರುಪಾಯಿ, ಆ ನಂತರ ಅದನ್ನು 4 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಹಣ ಡ್ರಾ ಮಾಡುವುದಕ್ಕೆ ಚೆಕ್ ಬಳಸಬಹುದಾ?
ಹೌದು ಚೆಕ್ ಬಳಸಬಹುದು. ಆದರೆ ಚೆಕ್ ಅಥವಾ ವಿಥ್ ಡ್ರಾ ಸ್ಲಿಪ್ ಬಳಸಿ ದಿನಕ್ಕೆ ಹತ್ತು ಸಾವಿರ ಮಾತ್ರ ಡ್ರಾ ಮಾಡಲು ಸಾಧ್ಯ. ಒಂದು ವಾರಕ್ಕೆ ಗರಿಷ್ಠ ಅಂದರೆ ಎಟಿಎಂನ ವ್ಯವಹಾರವೂ ಸೇರಿ ಇಪ್ಪತ್ತು ಸಾವಿರ ಮಿತಿ ನಿಗದಿಯಾಗಿದೆ. ಇದು ನವೆಂಬರ್ 24ರವರೆಗೆ ಈ ರೀತಿ ಇರುತ್ತದೆ.

ನಾನು ದೇಶದಿಂದ ಹೊರಗೆ ಇದ್ದರೆ ಏನು ಮಾಡೋದು?
ನಿಮ್ಮ ಪರವಾಗಿ ಯಾರಿಗಾದರೂ ನೋಟು ಡಿಪಾಸಿಟ್ ಮಾಡುವಂತೆ ಹೇಳಬಹುದು. ಅದಕ್ಕಿರುವ ನಿಯಮ ಪಾಲಿಸಬೇಕು ಅಷ್ಟೇ.

ನಾನು ಅನಿವಾಸಿ ಭಾರತೀಯ, ಏನು ಮಾಡೋದು?
ಎನ್ ಆರ್ ಒ ಖಾತೆಯಲ್ಲಿ ಹಣ ಜಮೆ ಮಾಡಬಹುದು.

ನಮಗೆ ಸಮಸ್ಯೆ ಎದುರಾದರೆ ಏನು ಮಾಡಬಹುದು?
www.rbi.org.in ವೆಬ್ ಸೈಟ್ ನಲ್ಲಿ ಮಾಹಿತಿ ಇದೆ. ನಿಮ್ಮ ದೂರುಗಳನ್ನು publicquery@rbi.org ಗೆ ಮೇಲ್ ಮಾಡಬಹುದು. ಅಥವಾ 022-22602201/02222602944 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the ban on Rs 500 and Rs 1,000 notes, exchange of notes started from banks started from Thursday. Some of the frequently asked questions answered here.
Please Wait while comments are loading...