ಚುನಾವಣೆ ಕಣ್ಗಾವಲು ಸುದ್ದಿಗಾರರಾಗಿರಿ

ಬೆಂಗಳೂರು,

ಮಾ.19:
ಲೋಕಸಭಾ
ಚುನಾವಣೆಗಾಗಿ
ವಿವಿಧ
ಪಕ್ಷಗಳು
ವಿವಿಧ
ರೀತಿಯಲ್ಲಿ
ಪ್ರಚಾರ
ಕಾರ್ಯದಲ್ಲಿ
ತೊಡಗಿಕೊಂಡಿವೆ.
ಆದರೆ,
ಇದೇ
ವೇಳೆ
ಚುನಾವಣಾ
ಆಯೋಗ
ನೀಡಿರುವ
ನೀತಿ
ಸಂಹಿತೆಯನ್ನು
ಮೀರುವುದು
ಎಲ್ಲಾ
ಪಕ್ಷಗಳಿಗೂ
ಮಾಮೂಲಿನ
ಸಂಗತಿಯಾಗಿದೆ.
ಚುನಾವಣೆ
ಸಂದರ್ಭದಲ್ಲಿ
ನಡೆಯುವ
ಅಕ್ರಮಗಳಿಗೆ
ಕಡಿವಾಣ
ಹಾಕುವ
ಉದ್ದೇಶದಿಂದ
ಆಂಡ್ರಾಯ್ಡ್
ಅಪ್ಲಿಕೇಷನ್
(election
watch
reporter)ವೊಂದನ್ನು
ರೂಪಿಸಲಾಗಿದ್ದು,
ಇದಕ್ಕೆ
ಚುನಾವಣಾ
ಆಯೋಗದ
ಮಾನ್ಯತೆಯನ್ನು
ಸಿಕ್ಕಿದೆ.

id="toptextpromo">
id='are-slot-1'
class='oiad
oi-axt
oiadv'>

ಅಸೋಸಿಯೇಷನ್

ಫಾರ್
ಡೆಮಾಕ್ರೆಟಿಕ್
ರಿಫಾರ್ಮ್ಸ್(ADR)
ಮತ್ತು
ನ್ಯಾಷನಲ್
ಎಲೆಕ್ಷನ್
ವಾಚ್(NEW)
ಎನ್ನುವ
ಸರ್ಕಾರೇತರ
ಸಂಸ್ಥೆಗಳು
ರೂಪಿಸಿರುವ
ಈ
ಅಪ್ಲಿಕೇಷನ್
ಬಳಕೆ
ಸುಲಭವಾಗಿದ್ದು,
ಸಾರ್ವಜನಿಕರು
ಇದರಲ್ಲಿ
ಪಾಲ್ಗೊಂಡು
ಚುನಾವಣಾ
ಆಯೋಗದ
ಪ್ರಯತ್ನಕ್ಕೆ
ಸಹಕಾರಿಯಾಗಬಹುದು.
ಚುನಾವಣಾ
ಅಕ್ರಮಗಳು,
ನೀತಿ
ಸಂಹಿತೆ
ಉಲ್ಲಂಘನೆ
ಕಂಡು
ಕಣ್ಣಿಗೆ
ಬಿದ್ದಾಗ
ಮೊಬೈಲ್
ಬಳಸಿ
ಚುನಾವಣಾ
ಆಯೋಗಕ್ಕೆ
ದೂರು
ನೀಡಬಹುದು.
ಉದಾಹರಣೆಗೆ
ಚುನಾವಣಾ
ಪ್ರಚಾರದ
ವೇಳೆ
ಅಕ್ರಮ
ಬ್ಯಾನರ್
ನೋಡಿದರೆ,
ಹಣ,
ಹೆಂಡ
ಹಂಚುವ
ದೃಶ್ಯ
ಕಣ್ಣಿಗೆ
ಬಿದ್ದರೆ
ಅದನ್ನು
ನಿಮ್ಮ
ಸ್ಮಾರ್ಟ್
ಫೋನ್
ನಲ್ಲಿರುವ
ಈ
ಅಪ್ಲಿಕೇಷನ್
ಮೂಲಕ
ತಿಳಿಸಬಹುದು.
ಇನ್ನಷ್ಟು
ಮಾಹಿತಿ
ಮುಂದೆ
ಓದಿ...

id='are-slot-2'
class='oiad
oi-axt
oiadv'>

ನಿಮ್ಮ ಮಾಹಿತಿ ಆಯೋಗ ತಲುಪಲಿದೆ

ನಿಮ್ಮ ಮಾಹಿತಿ ಆಯೋಗ ತಲುಪಲಿದೆ

ನೀವು ಕೊಡುವ ಮಾಹಿತಿ ಚುನಾವಣಾ ಆಯೋಗಕ್ಕೆ ತಲುಪಲಿದೆ. ಚುನಾವಣಾ ಆಯೋಗ ಬೆಂಬಲಿತ ಈ ಆಪ್ ಅನ್ನು ಅಭಿವೃದ್ಧಿಪಿಡಿಸಿದ್ದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಎನ್ನುವ ಎರಡು ಎನ್‌ಜಿಒಗಳು. ಈ ಎನ್ ‌ಜಿಒಗಳು ಚುನಾವಣಾ ಅಪರಾಧ ನಿಯಂತ್ರಣ ವರದಿಗೆ ಸಂಬಂಧಿಸಿದಂತೆ ಈಗಾಗಲೇ ಕೆಲಸ ಮಾಡುತ್ತಿವೆ.

ಚುನಾವಣಾ ಅಕ್ರಮಗಳ ಕಡಿವಾಣಕ್ಕಾಗಿ

ಚುನಾವಣಾ ಅಕ್ರಮಗಳ ಕಡಿವಾಣಕ್ಕಾಗಿ

ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಎಲೆಕ್ಷನ್ ವಾಚ್ ರಿಪೋರ್ಟರ್ ಆಪ್ ಅನ್ನು ಅಭಿವೃದ್ಧಿಪಡಿಸಿವೆ. ಈ ಆಪ್ ನ ಮೂಲಕ ಸಾರ್ವಜನಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ 8 ದೂರುಗಳನ್ನು ನೀಡಬಹುದು. ಈ ವೇಳೆ ಸಾರ್ವಜನಿಕರು ತಮ್ಮ ಹೆಸರನ್ನು ಗೌಪ್ಯವಾಗಿ ಇಡಬಹುದಾಗಿದೆ. ನಿಮ್ಮ ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ನೋಟಿಸ್ ಅಥವಾ ಎಫ್ ‌ಐಆರ್ ದಾಖಲಿಸಬಹುದು.

ಅಪ್ಲಿಕೇಷನ್ ಡೌನ್ ಲೋಡ್ ಹೇಗೆ?

ಅಪ್ಲಿಕೇಷನ್ ಡೌನ್ ಲೋಡ್ ಹೇಗೆ?

ಎಡಿಆರ್ ಹಾಗೂ ಎನ್ ಇಡಬ್ಲ್ಯೂ ವಿನ್ಯಾಸದ ಆಂದ್ರಾಯ್ಡ್ ಅಪ್ಲಿಕೇಷನ್ ಗೂಗಲ್ ಪ್ಲೇ ನಿಂದ ನಿಮ್ಮ ಸ್ಮಾರ್ಟ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ವರದಿ ಮಾಡುವಾಗ ಬಳಕೆದಾರರ ಹೆಸರು ದಾಖಲಿಸಿಕೊಳ್ಳಬಹುದು ಅಥವಾ ಹೆಸರನ್ನು ಮರೆಮಾಚಬಹುದು.ಇದು ಉಚಿತ ಅಪ್ಲಿಕೇಷನ್ ಆಗಿದೆ. ಸಮಯ ಹಾಗೂ ಸ್ಥಳವನ್ನು ಈ ಆಪ್ ದಾಖಲು ಮಾಡಿಕೊಳ್ಳುತ್ತದೆ. ಗೂಗಲ್ ಪ್ಲೇಗೆ ಹೋಗಿ election watch reporter ಎಂದು ಸರ್ಚ್ ಮಾಡಿ ಪಡೆಯಬಹುದು.

ಯಾವ ಅಕ್ರಮಗಳನ್ನು ವರದಿ ಮಾಡಬಹುದು

ಯಾವ ಅಕ್ರಮಗಳನ್ನು ವರದಿ ಮಾಡಬಹುದು

* ಮಾಧ್ಯಮಗಳ ಜಾಹೀರಾತುಗಳು
* ಪೋಸ್ಟರ್ ಗಳು ಹಾಗೂ ಹೋರ್ಡಿಂಗ್ ಗಳು
* ಮದ್ಯ ಅಥವಾ ಮಾದಕ ವಸ್ತುಗಳ ಹಂಚಿಕೆ
* ನಗದು, ಗಿಫ್ಟ್ ಅಥವಾ ಕೂಪನ್ ಹಂಚಿಕೆ
* ಪರವಾನಿಗೆ ಇಲ್ಲದ ಚುನಾವಣಾ ಮೆರವಣಿಗೆ
* ಅಧಿಕೃತ ವಾಹನಗಳ ದುರ್ಬಳಕೆ
* ಶಸ್ತ್ರಾಸ್ತ್ರಗಳ ದುರ್ಬಳಕೆ, ಪೊಲೀಸರಿಗೆ ನೀಡದಿರುವಿಕೆ
* ಇನ್ನಿತರ ಅಕ್ರಮಗಳು

ಪ್ರತಿ ದೂರಿನ ಮಾದರಿ ವಿಶಿಷ್ಟ

ಪ್ರತಿ ದೂರಿನ ಮಾದರಿ ವಿಶಿಷ್ಟ

ಪ್ರತಿ ದೂರಿಗೂ ವಿಶಿಷೃ ಐಡಿ ನೀಡಲಾಗುತ್ತದೆ. ಪತ್ಯೇಕ ವಿವರಣೆ, ಸ್ಥಳ ವಿವರ ಜತೆಗೆ ಗೂಗಲ್ ಮ್ಯಾಪ್ ಇರುತ್ತದೆ. ಜತೆಗೆ ದೂರಿನ ಸ್ಟೇಟಸ್ ಕೂಡಾ ಚೆಕ್ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+