Ethanol: ಕಬ್ಬಿನಿಂದ ಎಥನಾಲ್ ಉತ್ಪಾದನೆ ರೈತರಿಗೆ ಲಾಭದಾಯಕ: ಜವಾಹರಲಾಲ್ ನೆಹರು ತಪ್ಪು ಮಾಡಿದ್ರು ಎಂದ ಕುರುಬೂರ್ ಶಾಂತಕುಮಾರ್

ಕಬ್ಬಿನಿಂದ ಎಥನಾಲ್ ಉತ್ಪಾದನೆ ಹಾಗೂ ಬಳಕೆಯಿಂದ ರೈತರಿಗೆ ಲಾಭವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಅವರು ಹೇಳಿದ್ದಾರೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಮೈಶುಗರ್‌ನಲ್ಲಿ 1840ರಲ್ಲಿ ಕಚ್ಚಾ ವಸ್ತುವಾಗಿ ಉತ್ಪಾದನೆ ಮಾಡಿ ಅದನ್ನು ಮುಂಬೈಗೆ ರಪ್ತು ಮಾಡಿ ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಿ ಬಸ್‌ಗಳಲ್ಲಿ ಬಳಸುತ್ತಿದ್ದರು ಕರ್ನಾಟಕದ ಮಂಡ್ಯ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದರು.

ಕಬ್ಬಿನಿಂದ ಎಥನಾಲ್ ಉತ್ಪಾದನೆ ಹಾಗೂ ಬಳಕೆ ಕುರಿತು ರೈತರಿಗೆ ಆಯೋಜಿಸಿದ್ದ ಸಹಕಾರಿ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು. 1931ರಲ್ಲಿ ಬ್ರೆಜಿಲ್ ನಲ್ಲಿ ಕಂಡುಹಿಡಿದಾಗ ಪವರ್ ಆಲ್ಕೋ ಹಾಲ್ ಎಂಬ ಹೆಸರಿನಲ್ಲಿ ಕರೆಯುತ್ತಿದ್ದರು. 2001ರಲ್ಲಿ ಪ್ರಧಾನ ಮಂತ್ರಿ ಆಗಿದ್ದ ಅಟಾಲ್ ವಾಜಪೇಯಿ ಅವರು ಭಾರತ ದೇಶಕ್ಕೆ ಎಥನಾಲ್ ಪರಿಚಯ ಮಾಡಿದ್ದರು. ಮೊದಲೇ ಇದರ ಉತ್ಪಾದನೆ ಬಳಕೆ ಜಾರಿಗೆ ಬಂದಿದರೆ ಇದರ ಮಾಲೀಕತ್ವ ರೈತರು ಆಗಿರುತ್ತಿದ್ದೆವು. 100 ವರ್ಷದ ಹಿಂದೆ ನಮ್ಮ ಜಮೀನಿನಲ್ಲಿ ಎಥನಾಲ್ ಉತ್ಪಾದನೆ ಬಳಕೆ ಆಗುತ್ತದೆ ಎಂದು ನಮಗೆ ತಿಳಿದಿದ್ದರೆ, ಅದು ನಮ್ಮಗೆ ತಿಳಿದಿದ್ದರೆ ರೈತರು ಬಡವರಾಗುತ್ತಿರಲಿಲ್ಲ ಎಂದೂ ಅವರು ಹೇಳಿದ್ದಾರೆ.

Ethanol Sugarcane Can Make Farmers Prosperous Kurubur Shanthakumar Criticises Nehru Era Delay

1948ರಲ್ಲಿ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರಿಗೆ ಅಂದೇ ಎಥನಾಲ್ ಬಗ್ಗೆ ಗೊತ್ತಿತ್ತು. ಎಥನಾಲ್ ಬಳಕೆ ಬಳಸುತ್ತಿದ್ದರೂ ಅವರು ಯಾಕೆ ಜಾರಿಗೆ ತರಲಿಲ್ಲ. ಪವರ್ ಆಲ್ಕೋಹಾಲ್ ಎಂದರೆ ಕಬ್ಬಿನ ಮೊಲಾಸಿಸ್‌ನಿಂದ ಆಗುವ ಇದನ್ನೇ ಪವರ್ ಆಲ್ಕೋಹಾಲ್ ಎಂದು 1938ರಲ್ಲಿಯೇ ನೆಹರು ಅವರಿಗೆ ಈ ವಿಷಯ ತಿಳಿದಿತ್ತು. ದೇಶದಲ್ಲಿ ಎಥನಾಲ್ ಕಂಡು ಹಿಡಿಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಅರಬ್ ರಾಷ್ಟ್ರಗಳಿಂದ ಕಚ್ಚಾ ಪೆಟ್ರೋಲಿಯಂ ತೈಲ ಖರೀದಿಸುತ್ತಿದ್ದರು. ನಮ್ಮ ದೇಶದಲ್ಲಿ ಎಥನಾಲ್ ಉತ್ಪಾದನೆ ಕಂಡು ಹಿಡಿಯುವುದಕ್ಕೆ ತಡ ಮಾಡಿದ್ದರು ಎಂದೂ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಅವರು ದೂರಿದ್ದಾರೆ.

ಪೆಟ್ರೋಲ್ - ಡೀಸೆಲ್ ಬಳಕೆಯಿಂದ ಪರಿಸರ ದುರ್ಬಲವಾಗುತ್ತಿದೆ ಹಿಂದೆ ಯಾವ ರೀತಿ ಮಳೆ ಆಗುತ್ತಿತ್ತು. ಈಗ ಹೇಗೆ ಮಳೆ ಆಗುತ್ತಿದೆ ಎಂದರೆ ಮಳೆ ಕಡಿಮೆ ಆಯಿತು ಇಂದು ಕಾಡು ಕೂಡ ನಾಶ ಆಯಿತ್ತು. ಇದರಿಂದ ಬರಗಾಲ ಉಂಟುವಾಯಿತ್ತು. ಒಂದು ಲೀಟರ್ ಪೆಟ್ರೋಲ್ ತೆಗೆಯುವುದಕ್ಕೆ ಭೂಮಿಯಿಂದ 3 ಕೆಜಿ ಕಾರ್ಬನ್ ಡೈ ಆಕ್ಸೈಡ್ ಬಳಸಲಾಗುತ್ತಿದೆ. ಇದರ ಪರಿಣಾಮ ವಾಯು ಮಾಲಿನ್ಯ ಬರುವುದಕ್ಕೆ ಕಾರಣ ಎಂದರೆ ಪೆಟ್ರೋಲ್ ಡೀಸೆಲ್ ಬಳಸುವುದರಿಂದ 3kg ಕಾರ್ಬನ್ ಡೖ ಆಕ್ಸೈಡ್ ಉತ್ಪಾದನೆ ಪರಿಸರ ನಾಶಕ್ಕೆ ಕಾರಣವಾಗಿದೆ. ಕಾರ್ಬನ್ ಡೈ ಆಕ್ಸೈಡ್ ಭೂಮಿ ಕೆಳಗೆ ಇದೆ ಇದು ಭೂಮಿ ಮೇಲೆ ಬಂದರೆ ನಾವು ಮನುಷ್ಯರು ಬದುಕುವುದು ಕಷ್ಟವಾಗುತ್ತದೆ. ಇದರಿಂದ್ದ ನಾವು ಪೆಟ್ರೋಲ್ ಡೀಸೆಲ್ ಬಳಕೆ ಮಾಡುವುದು ಕಡಿಮೆ ಮಾಡಬೇಕಾಗುತ್ತದೆ ಎಂದಿದ್ದಾರೆ.

Ethanol: ಎಥನಾಲ್ ಬಳಕೆ ಮಾಡುವುದರಿಂದ ವಾಯುಮಾಲಿನ್ಯ ಕಡಿಮೆ

ಎಥನಾಲ್ ಬಳಕೆ ಮಾಡುವುದರಿಂದ ವಾಯುಮಾಲಿನ್ಯ ಕಡಿಮೆ ಆಗುತ್ತದೆ. ವಾಯುಮಾಲಿನ್ಯ 320 ಇರಬೇಕು ಆದರೆ ಇಂದು 430 ಇದೆ ಇದು ಇದೇ ರೀತಿ ಮುಂದುವರಿದ್ದಾರೆ ಇದು ಇನ್ನೂ ಮುಂದೆ ಮುಂದುವರಿದ್ದಾರೆ ನಾವೇ ವಿನಾಶದ ಹಾದಿ ತುಳಿಯುತ್ತಾ ಇದ್ದೇವೆ ಎಂದರು. ಎಥನಾಲ್ ಉತ್ಪಾದನೆ ಬಳಕೆ ಬಗ್ಗೆ ಇದೇ ತಿಂಗಳ 28 /29ರಂದು ಮುಂಬೈನಲ್ಲಿ ರಾಷ್ಟ್ರೀಯ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಮಾತನಾಡಿ, ನನ್ನ ಮಾಲೀಕತ್ವದ 11 ಕಾರ್ಖಾನೆಗಳಲ್ಲಿ ದಿನಕ್ಕೆ 1 ಲಕ್ಷ ಲೀಟರ್ ಎಥನಾಲ್ ಉತ್ಪಾದಿಸುತ್ತಾ ಇದ್ದೇವೆ ಜಗತ್ತಿನಲ್ಲಿ ಎಥನಾಲ್ ಕಂಡು ಹಿಡಿಯುವುದಕ್ಕೆ ಕಾರಣವೆಂದರೆ ನಮ್ಮ ಮೈಸೂರಿನ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಇವರು ಹಾಕಿ ಕೊಟ್ಟ ಯೋಜನೆಗಳಿಂದ ಎಂದರು. ಎಥನಾಲ್ ಪ್ರಾರಂಭ ಮಾಡಬೇಕು ಎಂದರೆ ಸ್ವಾತಂತ್ರ್ಯ ಸಿಕ್ಕಿದಾಗ ಭಾರತದ ಜನ ಸಂಖ್ಯೆ 35 ಕೋಟಿ ಜನ ಇದ್ದೆವು. ಅಂದಿನ ಕಾಲದಲ್ಲಿ ಜನರಿಗೆ ತಿನ್ನುವುದಕ್ಕೆ ಆಹಾರ ಕೂಡ ಸಿಗುತ್ತಿರಲಿಲ್ಲ. ಅದರಿಂದ ಅಂದಿನ ಸರ್ಕಾರವು ಎಥನಾಲ್ ಯೋಜನೆ ಬಗ್ಗೆ ಯೋಚಿಸಲಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+