ಭಾರತದ ನಿಕೋಬಾರ್ ದ್ವೀಪದಲ್ಲಿಯೂ ನಡುಗಿದ ಭೂಮಿ

ನಿಕೋಬಾರ್, ಆಗಸ್ಟ್ 6: ನಿಕೋಬಾರ್ ದ್ವೀಪದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ರಿಕ್ಟರ್ ಮಾಪನದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಸುನಾಮಿಯ ಬಗ್ಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಅಂಡಮಾನ್ ದ್ವೀಪವು ಭೂಕಂಪದ ಕೇಂದ್ರವಾಗಿದ್ದು, ಭೂಮಿಯ ಸುಮಾರು ಹತ್ತು ಕಿ.ಮೀ. ಒಳಭಾಗದಲ್ಲಿ ಕಂಪನ ಉಂಟಾಗಿದೆ.

ಇದುವರೆಗೂ ಯಾವುದೇ ಸಾವುನೋವು ವರದಿಯಾಗಿಲ್ಲ. ಇಂಡೋನೇಷ್ಯಾದ ಲಂಬೋಕ್ ದ್ವೀಪದಲ್ಲಿ ಭಾರಿ ಪ್ರಮಾಣದ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ನಿಕೋಬಾರ್‌ನಲ್ಲಿಯೂ ಭೂಮಿ ಕಂಪಿಸಿದೆ.

eqrthquake on Indias Nicobar islands with 5.3 magnitude

ಇಂಡೋನೇಷ್ಯಾದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 91ಕ್ಕೆ ಏರಿದೆ. ಮೃತರೆಲ್ಲರೂ ಇಂಡೋನೇಷ್ಯಾದ ಪ್ರಜೆಗಳಾಗಿದ್ದು, ವಿದೇಶಿಗರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸುಮಾರು 20 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಗಿಲಿ ಟ್ರವಾಂಗಾನ್ ದ್ವೀಪದ ಬೀಚ್‌ನಲ್ಲಿರುವ ವಿದೇಶಿಗರನ್ನು ಮುಂಜಾಗ್ರತೆಯ ಕ್ರಮವಾಗಿ ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಲಂಬೋಕ್‌ನಲ್ಲಿ ತೀವ್ರ ಪ್ರಮಾಣದಲ್ಲಿ ಭೂಮಿ ನಡುಗಿದ ಬಳಿಕ ಬಾಲಿ ಹಾಗೂ ಸುತ್ತಮುತ್ತಲೂ ನೂರಕ್ಕೂ ಹೆಚ್ಚು ಬಾರಿ ಕಂಪನದ ಅನುಭವಗಳು ಉಂಟಾಗಿವೆ.

ದ್ವೀಪಗಳ ಸುತ್ತಮುತ್ತಲಿನ ನಿವಾಸಿಗಳು, ಪ್ರವಾಸಿಗರಿಗೆ ಮನೆ ಹಾಗೂ ಕಟ್ಟಡಗಳಿಂದ ಹೊರಕ್ಕೆ ಇರುವಂತೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+