Epstein Files: ಎಪ್ಸ್ಟೀನ್ ಫೈಲ್ಸ್‌ನಲ್ಲಿ ಬಿಲ್ ಗೇಟ್ಸ್ ಹೆಸರು: ಆಂಧ್ರ ಪ್ರದೇಶದ ಐಟಿ ಸಚಿವ ನಾರಾ ಲೋಕೇಶ್‌ಗೆ ಕ್ಲಾಸ್
Epstein Files: ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಜೆಫ್ರಿ ಎಪ್‌ಸ್ಟೀನ್ ಫೈಲ್‌ನಲ್ಲಿ ಬಿಲ್ ಗೇಟ್ಸ್ ಹೆಸರು ಕೇಳಿ ಬಂದಿತ್ತು. ಮೈಕ್ರೋಸಾಫ್ಟ್ ಸ್ಥಾಪಕರಾದ ಬಿಲ್ ಗೇಟ್ಸ್ ರಷ್ಯಾದ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ, ರೋಗಕ್ಕೆ ತುತ್ತಾಗಿದ್ದರು ಎಂಬ ಆರೋಪ ಜೆಫ್ರಿ ಎಪ್‌ಸ್ಟೀನ್ ಫೈಲ್‌ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಆರೋಪವನ್ನು ಬಿಲ್ ಗೇಟ್ಸ್ ತೀವ್ರವಾಗಿ ನಿರಾಕರಿಸಿದ್ದಾರೆ. ಈ ನಡುವೆ ಅವರು ಭಾರತಕ್ಕೆ ಭೇಟಿ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಅಮರಾವತಿಗೆ ಸ್ವಾಗತ ಬಿಲ್ ಗೇಟ್ಸ್ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಚಾರವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ನಾರಾ ಲೋಕೇಶ್ ಅವರ ಟ್ವೀಟ್ ಹಾಗೂ ಆಂಧ್ರಪ್ರದೇಶಕ್ಕೆ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರ ಭೇಟಿ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಆಂಧ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದಲ್ಲಿ ಗೇಟ್ಸ್ ಫೌಂಡೇಶನ್‌ನ ಅಧ್ಯಕ್ಷ ಬಿಲ್ ಗೇಟ್ಸ್ ಅವರನ್ನು ಆಹ್ವಾನಿಸಿದ್ದು ಸಂತೋಷವಾಯಿತು. ನನ್ನೊಂದಿಗೆ ಸಹೋದ್ಯೋಗಿಗಳಾದ ಗೃಹ ಸಚಿವೆ ಅನಿತಾ, ಕೃಷಿ ಸಚಿವೆ ಅಚ್ಚನ್ನೈದು ಮತ್ತು ಆರೋಗ್ಯ ಸಚಿವೆ ಸತ್ಯ ಕುಮಾರ್ ಅವರು ಇದ್ದರು. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಪಾಲುದಾರಿಕೆಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆದಿದೆ. ಆಂಧ್ರಪ್ರದೇಶ ಸರ್ಕಾರವು, ನಮ್ಮ ಜನರಿಗೆ ಉಪಯುಕ್ತ ಮತ್ತು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಗೇಟ್ಸ್ ಫೌಂಡೇಶನ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರು ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದ್ದು, ರಾಜಕೀಯ ಚರ್ಚೆಗೂ ಇದು ಕಾರಣವಾಗಿದೆ.
ಇದನ್ನು ನಾವು ನಿರೀಕ್ಷಿಸಿರಲಿಲ್ಲ
ಈ ಬೆಳವಣಿಗೆಯನ್ನು ನಾವು ಯುವ ರಾಜಕಾರಣಿಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ರಾಜ್ಯಸಭೆ ಸದಸ್ಯೆ, ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನನ್ನ ವಿರೋಧದ ನಂತರ AI ಸಮಿಟ್ ವೆಬ್‌ಸೈಟ್‌ನ "Visionaries on the Global Stage" ವಿಭಾಗದಿಂದ ಬಿಲ್ ಗೇಟ್ಸ್ ಪ್ರಚಾರವನ್ನು ತೆಗೆದುಹಾಕಲಾಗಿದೆ. ಆದರೂ ಆಂಧ್ರಪ್ರದೇಶದಿಂದ ಬಂದ ಈ ಚಿತ್ರಗಳನ್ನು ನೋಡಿ ಬೇಸರವಾಗಿದೆ. ನಿಮ್ಮಂತಹ ಯುವ ನಾಯಕ ಲೋಕೇಶ್ ಜಿಯಿಂದ ಇನ್ನಷ್ಟು ಉತ್ತಮ ನಿರೀಕ್ಷೆ ಇತ್ತು. ನಿಮ್ಮಿಂದ ಇದಕ್ಕಿಂತ ಉತ್ತಮವಾದ್ದನ್ನು ನಿರೀಕ್ಷೆ ಮಾಡಿದ್ದೆವು ಎಂದಿದ್ದಾರೆ.
While the AI summit landing page after my protest has removed the “Visionaries on the Global Stage”promotion of Bill Gates, it is indeed sad to see these images from Andhra Pradesh. Expected better from a young leader like you Lokesh ji.
— Priyanka Chaturvedi🇮🇳 (@priyankac19) February 16, 2026
Normalising sexual abusers& by separating… https://t.co/0knECKlhnn
ಮುಂದುವರಿದು ಲೈಂಗಿಕ ದೌರ್ಜನ್ಯ ನಡೆಸುವವರನ್ನು ಮತ್ತು ಅವರ ಅಪರಾಧಗಳನ್ನು ಅವರ ಕೆಲಸದಿಂದ ಬೇರ್ಪಡಿಸುವ ವಿಧಾನವನ್ನು ನಾವು ಕಿರಿಯ ನಾಯಕರಿಂದ ನಿರೀಕ್ಷಿಸುವುದಿಲ್ಲ. ವಿಶ್ವಾದ್ಯಂತ ಮಹಿಳೆಯರು ಇಂತಹ ವಿಕೃತತೆಯಿಂದ ನ್ಯಾಯವನ್ನು ಬಯಸುವ ಇಂತಹ ಸೂಕ್ಷ್ಮ ಸಮಯದಲ್ಲಿ ಗೌರವಾನ್ವಿತ ಮಹಾರಾಷ್ಟ್ರದ ರಾಜ್ಯಪಾಲರು ನನ್ನ ವಿನಂತಿಯನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತವು ಅವರ ತಪ್ಪುಗಳನ್ನು ಮರೆಮಾಚಲು ವೇದಿಕೆಯಾಗಬಾರದು. ನರಾ ಲೋಕೇಶ್ ಜಿ ಅವರು ಮೆಲಿಂಡಾ ಗೇಟ್ಸ್ ವಿಚ್ಛೇದನಕ್ಕೆ ನೀಡಿದ ಕಾರಣಗಳನ್ನು ಹಾಗೂ DoJ ಇಮೇಲ್‌ಗಳಲ್ಲಿ ಹೊರಬಂದ ವಿಷಯಗಳನ್ನು ಗಮನಿಸಬೇಕಿತ್ತು ಎಂದು
ಪ್ರಿಯಾಂಕಾ ಚತುರ್ವೇದಿ ಅವರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ













Click it and Unblock the Notifications