EPFO 3.0 Good News: ಇನ್ಮುಂದೆ ಎಟಿಎಂನಲ್ಲೇ ತೆಗೆದುಕೊಳ್ಳಬಹುದು ನಿಮ್ಮ ಪಿಎಫ್ ಹಣ!
EPFO 3.0 New Features: ಕೆಲಸ ಮಾಡುವವರ ಪ್ರತಿ ತಿಂಗಳ ನಿಜವಾದ ಸೇವಿಂಗ್ಸ್ ಅಂತ ಇರುವುದು ಪಿಎಫ್. ಉದ್ಯೋಗಿಗಳ ಭವಿಷ್ಯ ನಿಧಿ ಉದ್ಯೋಗಿಗಳ ಪಾಲಿಗೆ ಚಿನ್ನದ ಮೊಟ್ಟೆಯಂತೆ ಅಂತನೇ ಹೇಳಲಾಗುತ್ತದೆ. ಪ್ರತಿ ತಿಂಗಳೂ ಇಂತಿಷ್ಟು ಹಣವನ್ನು ಸೇವಿಂಗ್ಸ್ ಅಂತ ಸೇರುತ್ತಿರುತ್ತದೆ. ಕಷ್ಟ ಕಾಲದಲ್ಲಿ ಇಲ್ಲವೇ ಏನಾದರು ತುರ್ತು ಸಂದರ್ಭ ಬಂದರೆ ಪಿಎಫ್ ದುಡ್ಡು ತೆಗೆದುಕೊಳ್ಳಬಹುದು. ಆದರೆ, ಪಿಎಫ್ ದುಡ್ಡು ಬಿಡಿಸಿಕೊಳ್ಳುವುದು ಕೆಲವು ಗಾರ್ಮೆಂಟ್ಸ್ ನೌಕರರು ಸೇರಿದಂತೆ ಹಲವರಿಗೆ ಸಣ್ಣ ಗೊಂದಲ ಇದೆ. ಆದರೆ, ಈಗ ಎಲ್ಲರೂ ಬ್ಯಾಂಕ್‌ನ ಎಟಿಎಂ ಕಾರ್ಡ್‌ಗಳನ್ನು ಬಳಸುವುದನ್ನು ತಿಳಿದುಕೊಂಡಿದ್ದಾರೆ. ಎಟಿಎಂನಲ್ಲಿ ದುಡ್ಡು ತೆಗೆದುಕೊಳ್ಳುವಂತೆ ಪಿಎಫ್ ಅಮೌಂಟ್ ಬಂದರೆ ಹೇಗಿರುತ್ತೆ. ಹೌದು ಇಂತಹದ್ದೊಂದು ಯೋಜನೆ ಜಾರಿಗೆ ಸಿದ್ಧತೆ ನಡೆದಿರುವ ಬಗ್ಗೆ ಇಟಿ ನೌ ವೆಬ್ಸೈಟ್ ವರದಿ ಮಾಡಿದೆ.
ಕಳೆದ ಐದಾರು ವರ್ಷಗಳ ಹಿಂದೆ ಪಿಎಫ್ ಹಣ ಬಿಡಿಸಿಕೊಳ್ಳುವುದರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿರುವ ಬಗ್ಗೆ ವರದಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಪಿಎಫ್ ಖಾತೆಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇದರಿಂದ ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಸುಲಭವಾಗಿ ತೆಗೆಯುವುದಕ್ಕೆ ಸಹಕಾರಿಯಾಗಿದೆ. ಅಲ್ಲದೇ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೆ ಸಂಬಂಧಿಸಿ ಇಪಿಎಫ್ ಖಾತೆಗಳಲ್ಲೂ ಹೊಸ ಫೀಚರ್‌ಗಳನ್ನು ಅಳವಡಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿರುವುದು ವರದಿಯಾಗಿದೆ.

ಇಪಿಎಫ್‌ಒ 3.0: ಕೇಂದ್ರ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಲ್ಲಿ ಇಪಿಎಫ್‌ಒ 3.0ದ ಮೂಲಕ ಹೊಸ ಫೀಚರ್ ತರುತ್ತಿದ್ದು, ಇದರಿಂದ ಪಿಎಫ್ ಜಮೆಯಾಗುತ್ತಿರುವ ದೇಶದ ಕೋಟ್ಯಾಂತರ ಜನ ಉದ್ಯೋಗಿಗಳಿಗೆ ನೆರವಾಗಲಿದೆ. ಅಲ್ಲದೇ ಈ ಕಾರ್ಮಿಕರು ಸುಲಭವಾಗಿ ಪಿಎಫ್ ಹಣ ತೆಗೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಎಟಿಎಂ ಮಾದರಿ ಪಿಎಫ್ ಹಣ ವಿತ್ಡ್ರಾ ಮಾಡಿಕೊಳ್ಳುವುದು. ಇಪಿಎಫ್ ಖಾತೆಯ ಜೊತೆಗೆ ಹೆಚ್ಚುವರಿ ಹಣ ಉಳಿತಾಯ ಮಾಡುವುದು, ಪೆನ್ಷನ್ ಆಗಿ ಇದನ್ನು ಪರಿವರ್ತನೆ ಮಾಡುವುದು ಹಾಗೂ ಪಿಎಫ್ ಮಿತಿ ಹೆಚ್ಚಳ ಮಾಡುವುದು ಸೇರಿದಂತೆ ಹಲವು ಅಂಶಗಳು ಇದರಲ್ಲಿ ಇರಲಿವೆ ಎಂದು ಹೇಳಲಾಗಿದೆ. ಈ ಹೊಸ ಮಾದರಿಗಳು ಜಾರಿಗೆ ಬಂದರೆ, ಪಿಎಫ್ ಹಣ ಸುಲಭವಾಗಿ ನಿಮ್ಮ ಸಂಬಳದ ದುಡ್ಡಿನಂತೆಯೇ ನಿಮ್ಮ ಕೈ ಸೇರಲಿದೆ.
ಪಿಎಫ್ ಹಣಕ್ಕೆ ಬರಲಿದೆ ಎಟಿಎಂ ಕಾರ್ಡ್: ಕೇಂದ್ರ ಸರ್ಕಾರವು ಕಾರ್ಮಿಕರು ಹಾಗೂ ಉದ್ಯೋಗಿಗಳು ಪಿಎಫ್ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಬೇಕು. ಇದಕ್ಕೆ ಈಗ ಇರುವ ಗೊಂದಲಗಳನ್ನು ಬಗೆಹರಿಬೇಕು ಎಂದು ನಿರ್ಧರಿಸಿದೆ. ಇದರಿಂದಾಗಿ ನೀವು ಇನ್ನುಮುಂದೆ ಅರ್ಜಿ ತುಂಬಿ ಹಣ ಬರುವುದಕ್ಕಾಗಿ ದಿನಗಳ ಗಟ್ಟಲೆ ಕಾಯಬೇಕಾಗಿಲ್ಲ. ಪಿಎಫ್ ವಿತ್ ಡ್ರಾ ಮಾಡಿಕೊಳ್ಳುವುದು ಹೇಗೆ ಅಂತ ತಲೆಕಡೆಸಿಕೊಳ್ಳಬೇಕಾಗಿಲ್ಲ. ನೀವು ಪಿಎಫ್ ಹಣ ವಿತ್ ಡ್ರಾ ಮಾಡಿಕೊಳ್ಳುವುದಕ್ಕೆ ಅಂತಲೇ ಎಟಿಎಂ ಕಾರ್ಡ್ ಬರಲಿದೆ. ಹೌದು
ನೀವು ಇದೀಗ ಬ್ಯಾಂಕ್ ಖಾತೆಯಿಂದ ಹಣ ಬಿಡಿಸಿಕೊಳ್ಳುವಂತೆ ಮುಂದಿನ ದಿನಗಳಲ್ಲಿ ಇಪಿಎಫ್ ಖಾತೆಯಲ್ಲಿರುವ ಹಣವನ್ನು ಅತ್ಯಂತ ಸುಲಭವಾಗಿ ವಿತ್ ಡ್ರಾ ಮಾಡಿಕೊಳ್ಳಬಹುದು. ಇದಕ್ಕಾಗಿ ಎಟಿಎಂ ಕಾರ್ಡ್ ಮಾದರಿ ಕಾರ್ಡ್ ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹೊಸ ಮಾದರಿಯ ಕಾರ್ಡ್‌ನಿಂದ ನೀವು ಎಂಟಿಗಳಲ್ಲೂ ಪಿಎಫ್ ದುಡ್ಡು ಪಡೆಯಬಹುದಾಗಿದೆ. 2025ರ ಮೇ ಹಾಗೂ ಜೂನ್ ತಿಂಗಳ ನಡುವೆ ಈ ಸೌಲಭ್ಯವನ್ನು ದೇಶದಾದ್ಯಂತ ಹಂತ ಹಂತವಾಗಿ ಪರಿಚಯಿಸುವ ಸಾಧ್ಯತೆ ಇದೆ. ಆದರೆ, ಇದರಲ್ಲಿ ಪ್ರಮುಖ ಷರತ್ತುವೊಂದನ್ನು ವಿಧಿಸಲಾಗಿದೆ. ಇಪಿಎಫ್ ಅಕೌಂಟ್ನಲ್ಲಿರುವ ಹಣದಲ್ಲಿ ನೀವು ಶೇ. 50ರಷ್ಟು ಮೊತ್ತದ ಹಣವನ್ನು ಮಾತ್ರ ವಿತ್ಡ್ರಾ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.












Click it and Unblock the Notifications