ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಮಾ ಮಸೀದಿಗೆ ಪುರುಷರಿಲ್ಲದೆ ಬರುವ ಮಹಿಳೆಯರಿಗೆ ಪ್ರವೇಶ ನಿಷೇಧ

|
Google Oneindia Kannada News

ಜಾಮಾ ಮಸೀದಿಗೆ ಒಂಟಿ ಮಹಿಳೆ ಅಥವಾ ಮಹಿಳೆಯರ ಗುಂಪಿನ ಪ್ರವೇಶವನ್ನು ಮಸೀದಿ ಆಡಳಿತ ಸಮಿತಿ ಇಂದಿನಿಂದ ನಿಷೇಧಿಸಿದೆ. ಮಹಿಳೆಯರು ಜಾಮಾ ಮಸೀದಿ ಸಂಕೀರ್ಣಕ್ಕೆ ಪ್ರವೇಶ ಪಡೆಯಲು ಅವರ ಕುಟುಂಬದ ಪುರುಷ ಸದಸ್ಯರ ಜೊತೆಯಲ್ಲಿಯೇ ಬರಬೇಕು ಎಂದು ಅದು ಹೇಳಿದೆ.

ಕೆಲ ದಿನಗಳ ಹಿಂದೆ ಜಾಮಾ ಮಸೀದಿಯ ಪ್ರವೇಶ ದ್ವಾರದಲ್ಲಿ ನಿಷೇಧಾಜ್ಞೆ ಘೋಷಣೆಯ ಸೂಚನೆಯನ್ನು ಹಾಕಲಾಗಿತ್ತು. ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಈ ವಿಷಯದ ಬಗ್ಗೆ ಜಾಮಾ ಮಸೀದಿ ಆಡಳಿತಕ್ಕೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಅಂತಹ ನಿಷೇಧವನ್ನು ಹೊರಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

Entry of women unaccompanied by men to Jama Masjid is prohibited

ಜಾಮಾ ಮಸೀದಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬೀವುಲ್ಲಾ ಖಾನ್ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯರು ಏಕಾಂಗಿಯಾಗಿ ನಮಾಜ್ ಮಾಡಲು ಬರುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಕುಟುಂಬಗಳು ಅಥವಾ ವಿವಾಹಿತ ದಂಪತಿಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಜೊತೆಗೆ ನಾವು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳ ಚಿತ್ರೀಕರಣಕ್ಕೆ ನಿಷೇಧ ಹೇರಿದ್ದೇವೆ ಎಂದು ಅವರು ಹೇಳಿದರು.

English summary
Jama Masjid Management Committee has banned single women or groups of women from entering the mosque complex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X