ವಿಜಯ್ ಮಲ್ಯ ಎಲ್ಲಿದ್ದರೂ ಏಪ್ರಿಲ್ 2ರೊಳಗೆ ಬರಲೇಬೇಕು

Subscribe to Oneindia Kannada

ಮುಂಬೈ, ಮಾರ್ಚ್, 18: ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದ್ದು ಗೊತ್ತೆ ಇದೆ. ಇದರೊಂದಿಗೆ ಹೈದರಾಬಾದ್ ನ್ಯಾಯಾಲಯ ಸಹ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಇದೀಗ ಮಲ್ಯ ಅವರಿಗೆ ಕೊನೆ ಅವಕಾಶ ಎಂಬಂತೆ ಜಾರಿ ನಿರ್ದೇಶನಾಲಯ ಏಪ್ರಿಲ್ 2 ರೊಳಗೆ ಹಾಜರಾಗಬೇಕು ಎಂದು ತಿಳಿಸಿದೆ. ಐಡಿಬಿಐ ಬ್ಯಾಂಕ್ ನಿಂದ 900 ಕೋಟಿ ರು. ಸಾಲ ಪಡೆದು ವಂಚಿಸಿರುವ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ಸಮನ್ಸ್ ಹೊರಡಿಸಿತ್ತು.[ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]

vijay mallya

ನನಗೆ ಹಾಜರಾಗಲು ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಮಲ್ಯ ಕೇಳಿಕೊಂಡಿದ್ದರು. ಯುನೈಟೆಡ್ ಬ್ರಿವರೀಸ್ ಅಧ್ಯಕ್ಷರಾಗಿರುವ ಮಲ್ಯ ಜಾರಿ ನಿರ್ದೇಶಾನಾಲಯವನ್ನು ಇ ಮೇಲ್ ಮುಖಾಂತರ ಸಂಪರ್ಕಿಸಿ ಕಾಲಾವಕಾಶ ಕೇಳಿಕೊಂಡಿದ್ದರು. [ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಏಪ್ರಿಲ್ 2 ರಂದು ಖುದ್ದು ಹಾಜರಾಗಬೇಕೆಂದು ಇಡಿ ತಿಳಿಸಿದೆ. ಮಾರ್ಚ್ ನಲ್ಲಿ ಹಾಜರಾಗಬೇಕೆಂದು ಮಲ್ಯಗೆ ತನಿಖಾಧಿಕಾರಿಗಳು ಸೂಚಿಸಿದ್ದರು. ಆದರೆ ಆ ಸಮಯದಲ್ಲಿ ತಾವು ಹಾಜರಾಗಲು ಸಾಧ್ಯವಿಲ್ಲ ಎಂಬುದಾಗಿ ಮಲ್ಯ ತಿಳಿಸಿದ್ದ ಕಾರಣ ಇಡಿ ಏಪ್ರಿಲ್ 2 ರವರೆಗೆ ಕಾಲಾವಾಕಾಶ ನೀಡಿದ್ದು ಹೊಸ ಸಮನ್ಸ್ ನೀಡಿಕೆ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Enforcement Directorate (ED) today issued fresh summons to liquor baron Vijay Mallya to make a personal appearance before its investigating officer here on April 2 in connection with its money laundering probe in the over Rs 900 crore IDBI loan fraud case.
Please Wait while comments are loading...