ಮಳೆ-ಪ್ರವಾಹ: WFH ಕೇಳಿದ್ದೇ ತಪ್ಪಾಯ್ತಾ! ಕೆಲಸದಿಂದ ವಜಾಗೊಳಿಸಿದ ಕಂಪನಿ CEO, ವೈರಲ್ ಪೋಸ್ಟ್
Viral News: ಬೆಂಗಳೂರು, ದೆಹಲಿ ಸೇರಿದಂತೆ ದೇಶಾದ್ಯಂತ ವಿವಿದೆಡೆ ಭಾರೀ ಮಳೆ ಆಗುತ್ತಿದೆ. ಪ್ರವಾಹ ಭೀತಿ ಸೃಷ್ಟಿಸಿರುವ ಈ ಮಳೆ ಕಾರಣಕ್ಕೆ ಕಚೇರಿಗೆ ಬರಲು ಕಷ್ಟವಾಗುತ್ತದೆ. ನಾನು ಮನೆಯಿಂದ ಕೆಲಸ ಮಾಡಬಹುದೇ (WFH) ಎಂದು ತಮ್ಮ ಮ್ಯಾನೇಜರ್‍ಗೆ ವಾಟ್ಸಾಪ್ ಮೂಲಕ ನೌಕರರನೊಬ್ಬರು ಮನವಿ ಮಾಡಿಕೊಂಡಿದ್ದಾರೆ. ಆದರೆ ಮ್ಯಾನೇಜರ್ ಬದಲಾಗಿ ಕಂಪನಿ ಸಿಇಒನಿಂದ ವಜಾಗೊಳಿಸಿದ ಇಮೇಲ್ ಸ್ವೀಕರಿಸಿ ನೌಕರರ ದಂಗಾಗಿದ್ದಾರೆ. ಅವುಗಳ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿವೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಕುರಿತು ಪ್ರತಿಕ್ ಶೆಟ್ಟಿ ಎಂಬುವವರು ಮಾಹಿತಿ ಹಂಚಿಕೊಂಡಿದ್ದಾರೆ. ಕಂಪನಿಯ ಉದ್ಯೋಗಿಯ ಮನೆ ಸುತ್ತಮುತ್ತ ಭಾರೀ ಮಳೆ, ಪ್ರವಾಹದ ವಾತಾವರಣ ಉಂಟಾಗಿದೆ. ಈ ಸಂಬಂಧ ಮನೆಯಿಂದ ಕೆಲಸ ಮಾಡುವುದಾಗಿ ಮ್ಯಾನೇಜರ್‍ಗೆ ಅನುಮತಿ ಕೋರಿ ವಾಟ್ಸಾಪ್ ಸಂದೇಶ ಕಳುಹಿಸಿದ್ದರು. ಇಲ್ಲಿ ಅಚ್ಚರಿ ಎಂದರೆ ಮ್ಯಾನೇಜರ್ ನಿಂದ ಯಾವುದೇ ಪ್ರತಿಕ್ರಿಯೆ ಸ್ವೀಕರಿಸದ ನೌಕರರ ನೇರವಾಗಿ ಕಂಪನಿ ಸಿಇಓ ನಿಂದ ಇಮೇಲ್ ಸ್ವೀಕರಿಸಿದ್ದಾರೆ.

ಮನೆಯಲ್ಲಿದ್ದರು ಉದ್ಯೋಗಿಯು ತಾನು ಶೇ. 100ರಷ್ಟು ಬದ್ಧತೆಯಿಂದ ಕೆಲಸ ಮಾಡುವುದಾಗಿ ತಿಳಿಸಿ ವರ್ಕ್ ಫ್ರಂ ಹೋಮ್ ನೀಡುವಂತೆ ನೌಕರ ವಿನಂತಿಸಿಕೊಂಡಿದ್ದರು. ನೀವು ಅನುಮತಿ ಕೊಟ್ಟಲ್ಲಿ ಇಂದು ನಾನು ಮನೆಯಿಂದ ಕೆಲಸ ಮಾಡಬಹುದೇ ಎಂದು ಕೋರಿದ್ದರು. ಇದನ್ನು ತಿರಸ್ಕೃರಿಸಿದ ಕಂಪನಿಯ ಸಿಇಒ ನೇರವಾಗಿ ಉದ್ಯೋಗಿಗೆ 'ನೀವು ಮನೆಯಲ್ಲೇ ಇರಿ. ನಿಮ್ಮ ವಜಾಗೊಳಿಸಿದ್ದೇವೆ' ಎಂದು ಮೇಲ್ ಕಳುಹಿಸಿದ್ದಾರೆ. ಈ ಸಂಗತಿಯ ಅನೇಕ ನೆಟ್ಟಿಗರ ಆಕ್ರೋಶಕ್ಕೂ ಗುರಿಯಾಗಿದೆ. ಏನಿದು ಒಂದು ದಿನ ಮನೆಯಿಂದ ಕೆಲಸ ಮಾಡಲು ಅನುಮತಿ ಕೋರಿದರೆ ಕೆಲಸದಿಂದಲೇ ತೆಗೆದು ಹಾಕಿದರೆ ಹೇಗೆ? ಎಂದು ಸಾರ್ವಜನಿಕರು ದಿಗ್ಭ್ರಮೆಗೊಂಡಿದ್ದಾರೆ
ಕಂಪನಿ ಸೇರುವ ಮುನ್ನ ಈಜು ಕಲಿಯಬೇಕಿತ್ತು!
ನೌಕರನನ್ನು ವಜಾಗೊಳಿಸಿದ ಸಿಇಒ ಕಳಹಿಸಿದ ಇಮೇಲ್ ಸಂದೇಶದಲ್ಲಿ, 'ನಿಮ್ಮ (ನೌಕರ) ಮಳೆ ಪ್ರವಾಹ, WFH ಮನವಿಯನ್ನು ಗಮನಿಸಲಾಗಿದೆ. ನೀವು ಈ ಕಂಪನಿಗೆ ಸೇರುವ ಮುನ್ನ ಮೊದಲು ನೀವು ಈಜುವುದು ಹೇಗೆ ಎಂದು ಕಲಿಯಬೇಕಿತ್ತು! ನೀವು ಕಲಿತಿಲ್ಲ. ಆದ್ದರಿಂದ ಮನೆಯಲ್ಲೇ ಇರಿ. ನಿಮ್ಮನ್ನು ವಜಾಗೊಳಿಸಲಾಗಿದೆ' ಎಂದು ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಈ ಮೂಲಕ ನೌಕರನನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಒಂದೇ ಒಂದು ವಾಟ್ಸಾಪ್ ಸಂದೇಶ ಕಳುಹಿಸಿದ ನಂತರ ತಾನು ವಜಾಗೊಳ್ಳುವ ಕುರಿತು ನೌಕರರ ಕಿಂಚಿತ್ತು ಆಲೋಚಿಸಿರಲಿಲ್ಲ. ಈ ಸಂಭಾಷಣೆ, ವಜಾ ಸಂದೇಶಗಳ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿವೆ. ಅನೇಕರು ಕಾಮೆಂಟ್ ಮೂಲಕ ಹಾಸ್ಯ ಮಾಡಿದ್ದಾರೆ. "ಈಜು ಕಲಿಯಿರಿ ಕಲಿತು ಮತ್ತೊಂದು ಆದಾಯ ಸೃಷ್ಟಿಗಾಗಿ ಒಲಿಂಪಿಕ್ಸ್‌ಗೆ ತಯಾರಿ ಪ್ರಾರಂಭಿಸಬೇಕಿದೆ' ಎಂದು ಹೇಳಿದ್ದಾರೆ. ಮತ್ತೊದು 'ನೌಕರ ಈಜು ಕಲಿಯದ್ದಕ್ಕಾಗಿ ವಜಾಗೊಂಡಿದ್ದಾನೆ. ಈ ಘಟನೆಯಿಂದ ನಾನು ಹತ್ತು ಪಾಠ ಕಲಿತೆ' ಎಂದು ಬರೆದುಕೊಂಡಿದ್ದಾರೆ. ಬಹುತೇಕರು ಕಾಮಿಡಿಯಾಗಿ ಪ್ರತಿಕ್ರಿಯಿಸಿದ್ದಾರೆ.













Click it and Unblock the Notifications