ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ- ಭಾರತ ರಕ್ಷಣಾ ಸಹಭಾಗಿತ್ವ ನಮ್ಮ ಮೊದಲ ಆದ್ಯತೆ; ಆಸ್ಟಿನ್

|
Google Oneindia Kannada News

ನವದೆಹಲಿ, ಮಾರ್ಚ್ 20: ಅಮೆರಿಕ- ಭಾರತ ರಕ್ಷಣಾ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೇರಿಸುವುದು ಬೈಡನ್ ಆಡಳಿತದ ಆದ್ಯತೆ ಎಂದಿರುವ ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಜೇಮ್ಸ್ ಆಸ್ಟಿನ್, ಉಭಯ ದೇಶಗಳ ನಡುವಿನ ಸಂಬಂಧವು ಮುಕ್ತವಾಗಿರುವುದಾಗಿ ವಿವರಿಸಿದ್ದಾರೆ.

ಶನಿವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, ವೇಗವಾಗಿ ಘಟಿಸುತ್ತಿರುವ ಅಂತರರಾಷ್ಟ್ರೀಯ ಬದಲಾವಣೆಗಳ ಮಧ್ಯೆ ಭಾರತದೊಂದಿಗೆ ತಮ್ಮ ಪಾಲುದಾರಿಕೆ ಮಹತ್ವದ್ದಾಗಿದೆ. ಭಾರತದೊಂದಿಗೆ ರಕ್ಷಣಾ ಪಾಲುದಾರಿಕೆಗೆ ಅಮೆರಿಕ ಬದ್ಧವಾಗಿದೆ ಎಂದು ಹೇಳಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಯುಎಸ್ ರಕ್ಷಣಾ ಕಾರ್ಯದರ್ಶಿ

ಆಸ್ಟಿನ್ ಭಾರತಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದು, ಶುಕ್ರವಾರ ಆಗಮಿಸಿದ್ದರು. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರದ ಬದ್ಧತೆಯನ್ನು ಜೇಮ್ಸ್ ಆಸ್ಟಿನ್ ಪುನರುಚ್ಚರಿಸಿದರು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಕಾರ್ಯತಂತ್ರದ ಸಹಭಾಗಿತ್ವವನ್ನು ಜೇಮ್ಸ್ ಒತ್ತಿ ಹೇಳಿದ್ದರು.

Elevating US India Defence Partnership Is Priority Said Lloyd Austin

ಭಾರತ ಹಾಗೂ ಅಮೆರಿಕ ತಮ್ಮ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಬದ್ಧವಾಗಿದ್ದು, ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ಮೋದಿ ಕೂಡ ಹೇಳಿಕೆ ನೀಡಿದ್ದರು.

2018ರ ಅಕ್ಟೋಬರ್‌ನಲ್ಲಿ ರಷ್ಯಾದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಐದು ಘಟಕಗಳನ್ನು ಖರೀದಿಸುವ ಸಲುವಾಗಿ ಭಾರತವು 5 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವು ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಬಲ್ಲದು ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಎಚ್ಚರಿಕೆ ನಡುವೆಯೂ ಭಾರತ ಮುಂದುವರಿದಿತ್ತು. ರಷ್ಯಾ ನಿರ್ಮಿತ ಎಸ್-400 ವೈಮಾನಿಕ ರಕ್ಷಣಾ ವ್ಯವಸ್ಥೆಯ ಬಹುಕೋಟಿ ವೆಚ್ಚದ ಖರೀದಿ ಒಪ್ಪಂದವು ಭಾರತಕ್ಕೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಒಪ್ಪಂದದ ಕಾರಣ ಭಾರತವು ಅಮೆರಿಕದ ನಿರ್ಬಂಧಕ್ಕೆ ಒಳಗಾಗಬಹುದು ಎಂದು ಅಮೆರಿಕದ ಸಂಸದೀಯ ವರದಿಯೊಂದು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Elevating the US-India defence partnership is a priority of the Biden administration said US Defence Secretary Lloyd Austin on Saturday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X