Electric Bicycle: ಬೆಂಗಳೂರಿನ ಕಂಪನಿಯ ಮಾಲಿನ್ಯ ಮುಕ್ತ 'ಇ-ಸೈಕಲ್' ಬಿಡುಗಡೆ: ವೈಶಿಷ್ಯತೆಗಳೇನು?
ಬೆಂಗಳೂರು, ಫೆಬ್ರವರಿ 22: ಭಾರತದ ಆಟೋ ಮೊಬೈಲ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳು ಭಾರೀ ಕ್ರಾಂತಿಯನ್ನು ಮಾಡುತ್ತಿವೆ. ಭಾರತದಲ್ಲಿ ದಿನೇ ದಿನೆ ಎಲೆಕ್ಟ್ರಿಕ್ ಕಾರು, ಬೈಕ್, ತ್ರಿಚಕ್ರ ವಾಹನ, ಬಸ್‌ಗಳು ಸೇರಿದಂತೆ ಅನೇಕ ಬಗೆಯ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈ ಸಾಲಿಗೆ 'ಎಲೆಕ್ಟ್ರಿಕ್ ಬೈಸಿಕಲ್' (Electric Bicycle) ಸಹ ಸೇರಿದೆ.
ವಾಹನ ತಯಾರಿಕಾ ಕಂಪನಿಗಳು 'ಇವಿ' ವಾಹನಗಳನ್ನು ತಯಾರಿಸುವಲ್ಲಿ ಪೈಪೋಟಿ ಒಡ್ಡುತ್ತಿವೆ. ಜನರು ಸಹ ಈ ಎಲೆಕ್ಟ್ರಿಕ್ ವಾಹನಗಳಿಗೆ ಮಾರು ಹೋಗಿದ್ದಾರೆ. ಇವು ಪರಿಸರಕ್ಕೆ ಪೂರಕವಾದ ವಾಹನಗಳಾಗಿವೆ. ಹೊಸ ಹೊಸ ವಿನ್ಯಾಸದಲ್ಲಿ ಕೈಗೆಟುವ ಬೆಲೆಗೆ ಸಿಗುವ ವಾಹನಗಳಂತೆ ಇದೀಗ 'ಎಲೆಕ್ಟ್ರಿಕ್ ಬೈಸಿಕಲ್' ಸಹ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಬೆಂಗಳೂರಿನಲ್ಲಿ ಬಿಡುಗಡೆ
ಸಂಪೂರ್ಣವಾಗಿ ಮಾಲಿನ್ಯ ಮುಕ್ತವಾದ ಹಾಗೂ ಸುಲಭ ಸಾರಿಗೆಯು ಆಗಿರುವ ಈ ಎಲೆಕ್ಟ್ರಿಕ್ ಬೈಸಿಕಲ್ ಅನ್ನು 'ಇಜೀ ಸೈಕಲ್' ಕಂಪನಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದು ಸ್ವದೇಶಿ ನಿರ್ಮಿತ ಈ ಇ-ಬೈಸಿಕಲ್ ಅನ್ನು ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಮೂಲದ ಇಜೀ ಸೈಕಲ್ ಕಂಪನಿ ನಗರದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಸಣ್ಣದೊಂದು ಬೈಕ್‌ನಂತಿದೆ ಇ-ಬೈಸಿಕಲ್
ಕೈಗೆಟುಕುವ ಬೆಲೆಯಲ್ಲಿ ಮೋಟಾರ್ ಚಾಲಿತ ಮತ್ತು ವಿದ್ಯುತ್‌ನಿಂದ ಸರಾಗವಾಗಿ ಚಲಿಸಬಲ್ಲ ಶಕ್ತಿ, ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಿಕ್ ಬೈಸಿಕಲ್ ಆಕರ್ಷಕವಾಗಿದೆ. ನೋಡಲು ಸಣ್ಣದೊಂದು ಬೈಕ್‌ನಂತೆ ಕಾಣುತ್ತದೆ. ಇದಕ್ಕೆ ಭಾರೀ ಬೇಡಿಕೆ ಸಹ ಬಂದಿದೆ ಕಂಪನಿಯ ಮೂಲಗಳು ಮಾಹಿತಿ ನೀಡಿವೆ.
ಭಾರತದಲ್ಲಿ ಉತ್ಪಾದಿಸಿರುವ ಸಂಪೂರ್ಣ ದೇಶಿಯ ಈ ಬೈಸಿಕಲ್ ಮಾಲಿನ್ಯ ಮುಕ್ತ ಸಾರಿಗೆ ನೀಡಲಿದೆ. ಮೇಡ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಈ ಬೈಸಿಕಲ್ ಸಖತ್ ಟ್ರೆಂಡ್ ಹುಟ್ಟಹಾಕುವ ವಿಶ್ವಾಸವಿದೆ. ಈಗಾಗಲೇ ಹೆಚ್ಚೆಚ್ಚು ಗ್ರಾಹಕರಿಂದ ಬೈಸಿಕಲ್ ಗಾಗಿ ಸಂಪರ್ಕಿಸುತ್ತಿದ್ದಾರೆ.

ಇ-ಬೈಸಿಕಲ್ ವಿಶೇಷತೆಗಳೇನು?
ಸಾಮಾನ್ಯ ಸೈಕಲ್‌ಗಳಂತೆ ಇರದೇ ಹೊಸ ವಿನ್ಯಾಸದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಮೋಟಾರ್ ಸಹಾಯದಿಂದ ಚಲಿಸಬಲ್ಲ, ನೋಡಲು ಸುಂದರವಾದ ಎಲೆಕ್ಟ್ರಿಕ್ ಬೈಸಿಕಲ್ ಇದಾಗಿದೆ.
ಗಟ್ಟಿಮುಟ್ಟಾದ ಫ್ರೇಮ್ ಹೊಂದಿರುವ ಇ-ಸೈಕಲ್ ಸುಧಾರಿತ ಬ್ಯಾಟರಿ ತಂತ್ರಜ್ಞಾನ ಒಳಗೊಂಡಿದೆ. ಹೆಚ್ಚು ಸಾಮರ್ಥ್ಯದ ಮೋಟಾರ್ ಅಳವಡಿಸಲಾಗಿದೆ. ಇದರ ತಯಾರಿಕೆಯಲ್ಲಿ ಲಿ ಅಯಾನ್ ರಿಚಾರ್ಜೆಬಲ್ ಬ್ಯಾಟರಿ ಬಳಕೆ ಮಾಡಲಾಗಿದೆ. ಈ ಬ್ಯಾಟರಿಯನ್ನು ಸೈಕಲ್‌ನಿಂದ ಹೊರತೆಗೆದು ನಿಮಗೆ ಅನುಕೂಲವಾಗುವ ಸ್ಥಳದಲ್ಲಿಟ್ಟುಕೊಂಡು ಚಾರ್ಜ್ ಮಾಡಬಹುದಾಗಿದೆ.
ಗರಿಷ್ಠ 70km ಮೈಲೇಜ್ ಸಾಮರ್ಥ್ಯ
ಒಮ್ಮೆ ಪೂರ್ತಿ ಚಾರ್ಜ್ ಮಾಡಿದಲ್ಲಿ ಒಟ್ಟು 50 ಕಿಲೋ ಮೀಟರ್ ಮೈಲೆಜ್ ನೀಡಲಿದೆ. ಗರಿಷ್ಠ 40 ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಇದರಲ್ಲಿದೆ. ಇ-ಸೈಕಲ್‌ನಲ್ಲಿ ಸಂಚರಿಸುವ ವೇಳೆ ಪೆಡ್ಲಿಂಗ್ ಮಾಡಿದರೆ ಇದರ ಮೈಲೇಜ್ ಹೆಚ್ಚುವರಿ 20 ಕಿಮೀವರೆಗೆ (ಒಟ್ಟು 70ಕಿ.ಮೀ) ವಿಸ್ತರಣೆ ಆಗಲಿದೆ.
ಪವರ್ ಮೋಡ್ ಮತ್ತು ಎಕನಾಮಿಕ್ ಸ್ಟ್ಯಾಡಂರ್ಡ ಹೊಂದಿರುವ ಈ ಇ-ಸೈಕಲ್‌ಗೆ ಏಳು ಗೇರಗಳಿವೆ. ಹೆಚ್ಚು ಭಾರವಾಗಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.











Click it and Unblock the Notifications