ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗಾಗಿ 100 ರೈಲುಗಳು ಬಾಡಿಗೆಗೆ

By Mahesh
|
Google Oneindia Kannada News

ನವದೆಹಲಿ, ಮಾ.9: ಮುಂಬರುವ ಲೋಕಸಭೆ ಚುನಾವಣೆಗೆ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲಿರುವ ಭದ್ರತಾ ಸಿಬ್ಬಂದಿಯ ಸಂಚಾರಕ್ಕೆ ಅನುಕೂಲವಾಗಲೆಂದು ಕೇಂದ್ರ ಗೃಹ ಇಲಾಖೆಯು 100 ರೈಲುಗಳನ್ನು ಭಾರತೀಯ ರೈಲ್ವೆಯಿಂದ ಬಾಡಿಗೆ ಪಡೆದಿದೆ.

ಏ.7 ರಿಂದ ಮೇ 12ರವರೆಗೆ 9 ಹಂತಗಳಲ್ಲಿ ನಡೆಯಲಿರುವ 543 ಲೋಕಸಭಾ ಕ್ಷೇತ್ರಗಳಿಗೆ ಭದ್ರತೆ ನಿಯೋಜಿಸಲು ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ಯಾರಾ ಮಿಲಿಟರಿ ಬಳಸಿಕೊಳ್ಳಲು ಮುಂದಾಗಿದೆ.

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಗೃಹ ಇಲಾಖೆಯು 100 ರೈಲುಗಳನ್ನು ಬಾಡಿಗೆ ಪಡೆಯಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅನಿಲ್ ಗೋಸ್ವಾಮಿಯವರು ಕೇಂದ್ರ ರೈಲ್ವೆ ಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿದ್ದು , ಭದ್ರತಾ ಪಡೆಗಳಿಗೆ 100 ರೈಲು ಮೀಸಲಿಡುವಂತೆ ಮನವಿ ಮಾಡಿದ್ದಾರೆ.

ವಿಶೇಷ ರೈಲುಗಳು ಹಾಗೂ ಸೌಲಭ್ಯಗಳುಳ್ಳ ಬೋಗಿಗಳೆಲ್ಲಾ ರೈಲುಗಳನ್ನು ಮೀಸಲಿಡಬೇಕು. 9 ಹಂತಗಳಲ್ಲಿ ಭದ್ರತಾ ಪಡೆಗೆ ಇದು ಅಗತ್ಯವೆಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

Elections: MHA to hire over 100 trains for ferrying forces

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ‌ಪಿಎಫ್)ಗೆ ಏಕ ಗವಾಕ್ಷಿ ಪದ್ಧತಿ ಅಡಿಯಲ್ಲಿ ರೈಲ್ವೆ ಸಂಚಾರವನ್ನು ನೀಡಬೇಕು. ಅಂದರೆ ಭದ್ರತಾ ಪಡೆ ಯಾವುದೇ ಪ್ರದೇಶಕ್ಕೆ ತೆರಳಲು ಅನುಕೂಲವಾಗುವಂತೆ ಪ್ರಮುಖ ನಗರಗಳಲ್ಲಿ ರೈಲನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.

ವಿಶೇಷವಾಗಿ ರಾಜಧಾನಿ ನವದೆಹಲಿಯಿಂದ ದೇಶದ ವಿವಿಧ ಭಾಗಗಳಿಗೆ ತೆರಳುವ ಕಂಪೆನಿಗಳು (ಒಂದು ಕಂಪೆನಿ 100ಕ್ಕೂ ಹೆಚ್ಚು) ತೆರಳಲು ಅನುಕೂಲವಾಗುವಂತೆ ಸಿದ್ಧಪಡಿಸಬೇಕು. ಎರಡು ಬೋಗಿ ಜತೆಗೆ ಸಾಮಾನ್ಯ ಬೋಗಿಗಳು ಹಾಗೂ ಕೆಲವು ವಿಶೇಷ ಸವಲತ್ತುಗಳನ್ನು ಕಲ್ಪಿಸಬೇಕು ಎಂದು ಕೋರಿದ್ದಾರೆ.

ಗೃಹ ಇಲಾಖೆಯ ಪತ್ರಕ್ಕೆ ಸ್ಪಂದಿಸಿರುವ ರೈಲ್ವೆ ಮಂಡಳಿ ಅಗತ್ಯಕ್ಕನುಗುಣವಾಗಿ ಭದ್ರತಾ ಸಿಬ್ಬಂದಿಗೆ ರೈಲ್ವೆ ಒದಗಿಸಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.ಸಮಯದ ಅಭಾವದಿಂದ ರಸ್ತೆ ಸಂಚಾರ ವಿಳಂಬವಾಗುವುದನ್ನು ನಾವು ಮನಗಂಡಿದ್ದೇವೆ. ಹೀಗಾಗಿ ಭದ್ರತಾ ಸಿಬ್ಬಂದಿಗೆ ರೈಲು ಸೇವೆ ಒದಗಿಸಲು ಈ ಮಂಡಳಿ ಸಿದ್ಧವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ವಿವಿಧೆಡೆ ನಡೆಯುವ 9 ಹಂತಗಳ ಲೋಕಸಭೆ ಚುನಾವಣೆಗೆ ಸಿಆರ್‌ಪಿಎಫ್, ಸಿಐಎಸ್ ಎಫ್, ಸಿಆರ್ ‌ಎಫ್, ಬಿಎಸ್ ‌ಎಫ್, ಎಸ್ ‌ಎಸ್ ‌ಬಿ, ಐಟಿಬಿಪಿ, ಅಸ್ಸಾಂ ರೈಫಲ್ ಸೇರಿದಂತೆ 2 ಲಕ್ಷಕ್ಕೂ ಹೆಚ್ಚಿನ ಭದ್ರತಾ ಪಡೆ ಭದ್ರತೆಗೆ ನಿಯೋಜನೆಗೊಳ್ಳಲಿದೆ. (ಪಿಟಿಐ)

English summary
The Home Ministry will use the services of more than 100 trains to transport paramilitary forces for deployment during the upcoming Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X