ಮೋದಿ ಬೆಂಬಲಿಗರ ವಿರುದ್ಧ ಆಯೋಗಕ್ಕೆ ದೂರು ನೀಡಿದ ರಮ್ಯಾ

ನವದೆಹಲಿ, ಮಾರ್ಚ್ 29: ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರ ಹೆಸರಿನಲ್ಲಿರುವ ಫೇಸ್ ಬುಕ್ ಮತ್ತಿತ್ತರ ಸಾಮಾಜಿಕ ಜಾಲ ತಾಣ ಖಾತೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಉಚಿತ ಕೊಡುಗೆ, ಫ್ರೀ ಗಿಫ್ಟ್ ಹಂಚಿಕೆ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಆರೋಪಿಸಿದ್ದಾರೆ. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

Divya Spandana writes to EC against Modi supporters

ಈ ರೀತಿ ಉಡುಗೊರೆಗಳನ್ನು ನೀಡುವ ಮೂಲಕ ಮತದಾರರನ್ನು ಓಲೈಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪ ಹೊರೆಸಿ, ಜಾಲ ತಾಣ ಖಾತೆಗಳ ವಿವರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮೈ ಫಸ್ಟ್ ವೋಟ್ ಫಾರ್ ಮೋದಿ 2019 ಎಂಬ ಫೇಸ್ ಬುಕ್ ಖಾತೆ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಲಾಗುತ್ತಿದೆ.

ಮೋದಿ ಹೆಸರಿನಲ್ಲಿ ಟೀ ಶರ್ಟ್, ಬ್ಯಾಗ್, ಬ್ಯಾಡ್ಜ್, ಫೋನ್ ಕವರ್, ಟೋಪಿ ಮುಂತಾದ ಉಡುಗೊರೆ ನೀಡಿ ಮೋದಿಗೆ ವೋಟ್ ಮಾಡಿ ಎಂದು ಫುಸಲಾಯಿಸಲಾಗುತ್ತಿದೆ ಎಂದು ವರದಿ ಬಂದಿದೆ.

ನರೇಂದ್ರಮೋದಿ ಅಧಿಕೃತ ವೆಬ್ ಸೈಟಿನಲ್ಲಿ ಈ ಗಿಫ್ಟ್ ಗಳು ಲಭ್ಯವಿದೆ. ಹೀಗಾಗಿ ಇದನ್ನು ಅಭ್ಯರ್ಥಿ ಮೋದಿ ಅವರ ಚುನಾವಣಾ ವೆಚ್ಚಕ್ಕೆ ಸರಿದೂಗಿಸಬೇಕು, ಆಮಿಷ ನೀಡಿ ಮತ ಹಾಕಿ ಎನ್ನುವದನ್ನು ತಡೆಗಟ್ಟಬೇಕು ಎಂದಿದ್ದಾರೆ.

ಉಡುಗೊರೆಗಳನ್ನು ನೀಡುವುದು, ರಾಜಕೀಯ ಪ್ರೇರಿತ ಜಾಹೀರಾತು ನೀಡುವುದಕ್ಕಾಗಿ ಒಂದು ವಾರದಲ್ಲಿ 53 ಲಕ್ಷ ರು ವೆಚ್ಚ ಮಾಡಲಾಗಿದೆ. ಆದರೆ, ಉಡುಗೊರೆ ನೀಡುವ ಆಮಿಷವೊಡ್ಡುವುದು ಜನಪ್ರತಿನಿಧಿ ಕಾಯ್ದೆ 123(1)2 ರ ಅನ್ವಯ ಲಂಚ ಎಂದು ಪರಿಗಣಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+