ಚುಟುಕು ಸುದ್ದಿ: 'ನಿಂದಕರಿಂದ ಮೋದಿ ಜನಪ್ರಿಯತೆ ಹೆಚ್ಚಿದೆ'
ಬೆಂಗಳೂರು, ಏ.29: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.45: ದಲಿತರ ಮನೆಗೆ ರಾಹುಲ್ ಗಾಂಧಿ ಹನಿಮೂನ್ ಮಾಡಲು ಹೋಗುತ್ತಾರೆ ಎಂದು ಹೇಳಿಕೆ ನೀಡಿದ್ದ ಬಾಬಾ ರಾಮದೇವ್ ಅವರ ಮೇಲೆ ಕರ್ನಾಟಕದ ಗುಲ್ಬರ್ಗಾದಲ್ಲೂ ದೂರು ದಾಖಲು. ದೇಶದ ಮೂರ್ನಾಲ್ಕು ಕಡೆ ಈಗಾಗಲೆ ಎಫ್ ಐಆರ್ ದಾಖಲಾಗಿದೆ.
6.30: ಮೋದಿಗಿಂತ ಕಟುಕನೇ ಮೇಲು. ಅವರಿಗೆ ನಾಚಿಕೆಯಾಗಬೇಕು. ಪ್ರಧಾನಿಯಾಗುತ್ತಾರಂತೆ : ಲಾಲೂ ಪ್ರಸಾದ್ ಯಾದವ್.
6.15: ಕಾಶಿ ಸಂಸ್ಕೃತಿ ಉಳಿಸಲು ತನು ಮನ ಧನ ಅರ್ಪಿಸಲು ಸಿದ್ಧ. ಬಿಜೆಪಿ ಹಲ್ಲೆಗಳನ್ನು ಎದುರಿಸಲು ನಾವು ಸಿದ್ಧ: ಅರವಿಂದ್ ಕೇಜ್ರಿವಾಲ್.
6.00: ನರೇಂದ್ರ ಮೋದಿ 3 ಡಿ ತಂತ್ರಜ್ಞಾನದ ಮೂಲಕ ಚುನಾವಣಾ ಸಮಾವೇಶ ನಡೆಸಿದರು.
4.45: ಫರೂಖ್ ಅಬ್ದುಲ್ಲಾ ಅವರ ಘೋಷಿತ ಆಸ್ತಿ 13.1 ಕೋಟಿ ರು.
4.15: ಮಮತಾ ಬ್ಯಾನರ್ಜಿ ತನ್ನ ಚಿತ್ರಪಟವನ್ನು ಕೋಟಿಗಟ್ಟಲೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಬಿಜೆಪಿ ಆರೋಪ.
4.00: ರಾಮದೇವ್ ಅವರ ಮೇಲೆ ಇಲ್ಲದ ಆರೋಪ ಮಾಡಿ ಮಾನನಷ್ಟ ಮಾಡುವುದು ಕಾಂಗ್ರೆಸ್ ಉದ್ದೇಶ : ಸುಬ್ರಮಣ್ಯ ಸ್ವಾಮಿ

10.40: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನಷ್ಟು ಅಧಿಕವಾಗಿದೆ. ನಿಂದಕರ ಚುಚ್ಚು ತುಗಳು ಇನ್ನಷ್ಟು ಬಲ ತಂದಿದೆ. ಜನರಿಗೆ ಸತ್ಯಾಸತ್ಯತೆ ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
10.30: ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಕಾರಣಕ್ಕೂ ಭಾರತೀಯ ರೈಲ್ವೆ ಖಾಸಗೀಕರಣವಾಗಲು ಬಿಡುವುದಿಲ್ಲ: ರಾಜನಾಥ್ ಸಿಂಗ್
10.15: ರಾಹುಲ್ ಗಾಂಧಿ ಪರ ಅಮೇಥಿಯಲ್ಲಿ ಮಂಗಳವಾರ ಮತ್ತೊಮ್ಮೆ ಪ್ರಿಯಾಂಕಾ ಗಾಂಧಿ ಅವರು ಪ್ರಚಾರ ಮಾಡಲಿದ್ದಾರೆ.
10.00: ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಪ್ರಚಾರ ನಡೆಸಲಿದ್ದಾರೆ.
9.45 : ಪಶ್ಚಿಮ ಬಂಗಾಳದಲ್ಲಿ ಮೋದಿ ಮಾಡಿರುವ ಭಾಷಣ ಸಿಡಿ ಪ್ರತಿಯನ್ನು ಚುನಾವಣಾ ಆಯೋಗ ಕೇಳಿದೆ. ಸೆರಂಪೋರ್ ನಲ್ಲಿ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಹೊರೆಸಲಾಗಿದೆ.
9.40: ಕರ್ನಾಟಕದ 12 ಮತಗಟ್ಟೆಗಳಲ್ಲಿ ಮಂಗಳವಾರ ಮರು ಮತದಾನ ಜಾರಿಯಲ್ಲಿದೆ.
9.30: ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ನಾಟಕವಾಡುತ್ತಿದ್ದಾರೆ. ಇಬ್ಬರ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
9.15: ವಾರಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ,
9.00: ಜಾರ್ಖಂಡ್ ಮುಖಂಡ ಬಾಬು ಲಾಲ್ ಮರಾಂಡಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ,












Click it and Unblock the Notifications