ಚುಟುಕು: ಹೇಮಮಾಲಿನಿ ವಿರುದ್ಧ ಎಫ್ಐಆರ್
ಬೆಂಗಳೂರು, ಏ.14: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
18.00: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಮಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.
* ಅನುಮತಿ ಪಡೆಯದೆ ಶಾಲೆಯೊಂದರಲ್ಲಿ ಸಭೆ ನಡೆಸಿರುವುದು, ಚುನಾವಣಾ ಖರ್ಚು ವೆಚ್ಚದ ಲೆಕ್ಕವನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪದಡಿಯಲಿ ಎಫ್ ಐಆರ್ ದಾಖಲಿಸಲಾಗಿದೆ.
16.00: ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಅವರು ಮಂಗಳವಾರ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಕುಮಾರ್ ಸ್ಪರ್ಧೆಗಿಳಿದಿದ್ದಾರೆ.

13.00: ವಾಜಪೇಯಿ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಅವರು ಕಂದಹಾರ್ ಅಪಹರಣ ಪ್ರಸಂಗವೇ ಸಾಕ್ಷಿ ಎಂದು ಕಾಂಗ್ರೆಸ್ ನಾಯಕ ಸಂಜಯ್ ಝಾ ಟ್ವೀಟ್.
* ಕಾರ್ಗಿಲ್ ಯುದ್ಧದಲ್ಲಿ 50 ಸೈನಿಕರನ್ನು ಕಳೆದುಕೊಂಡಾಗಲೂ ವಾಜಪೇಯಿ ಅವರು ನವಾಜ್ ಷರೀಫ್ ಗೆ ರತ್ನಗಂಬಳಿ ಸ್ವಾಗತ ನೀಡಿ ಆಲಂಗಿಸಿಕೊಂಡಿದ್ದರು : ಸಂಜಯ್ ಝಾ
The weakest PM India ever had was AB Vajpayee who gave Kandahar terrorists an escort-service,and allowed Parliament to be attacked.
— Sanjay Jha (@JhaSanjay) April 14, 2014 12.30: ಕಾಂಗ್ರೆಸ್ ಪಕ್ಷ ಪ್ರತಿನಿತ್ಯ ಡಾ. ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದೆ. ಅವರು ರೂಪಿಸಿದ ಕಾನೂನು ಹಾಗೂ ಹಕ್ಕುಗಳನ್ನು ತಮ್ಮದೇ ಕೊಡುಗೆ ಎನ್ನುತ್ತಿದೆ: ಮೋದಿ

11.15: ಆಮ್ ಆದ್ಮಿ ಪಕ್ಷದ ನಾಯಕಿ ಶಾಜಿಯಾ ಇಲ್ಮಿ ಸಮಾವೇಶ ಮೇಲೆ ಕಲ್ಲುತೂರಾಟ. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಈ ದುರ್ಘಟನೆ. ಕಲ್ಲು ಎಸೆತದಿಂದ ಇಲ್ಮಿ ಸ್ವಲ್ಪದರಲ್ಲೇ ಬಚಾವ್.
11.00: ನಲಂದಾದಲ್ಲಿ ಎಎಪಿ ಅಭ್ಯರ್ಥಿ ಪ್ರಣವ್ ಪ್ರಕಾಶ್ ಅವರನ್ನು ಕಾರಿನಿಂದ ಹೊರಕ್ಕೆ ಎಳೆದು ದುಷ್ಕರ್ಮಿಗಳಿಂದ ಥಳಿತ.

10.45: ಮೋದಿ ಅಲೆ ಎನ್ನುವುದಿಲ್ಲ. ದೇಶದಲ್ಲಿರುವುದು ಬಿಜೆಪಿ ಅಲೆ ಎಂದಿರುವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ.
10.30: ಮೋದಿ ವಿರುದ್ಧ ವಾರಣಸಿಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆ ನನ್ನಲ್ಲಿರಲಿಲ್ಲ: ಪ್ರಿಯಾಂಕಾ ಗಾಂಧಿ.
10.00: ಚುನಾವಣೆ ನಂತರ ಪ್ರಧಾನಿ ಅಭ್ಯರ್ಥಿ ಘೋಷಣೆ: ತೃಣ ಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ.
9.30: ಸಂಜಯ್ ಬರು ಬರೆದಿರುವ ಪುಸ್ತಕ ಎಲ್ಲಾ ಸುಳ್ಳು. ಮನಮೋಹನ್ ಸಿಂಗ್ ರಿಮೋಟ್ ಕಂಟ್ರೋಲ್ ಪಿಎಂ ಅಲ್ಲ, ಯುಪಿಎ ಸಮರ್ಥವಾಗಿದೆ ಎಂದ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ












Click it and Unblock the Notifications