Jharkhand Assembly Election 2024: ಜಾರ್ಖಂಡ್ ಚುನಾವಣೆ..ಯುವ ಮತದಾರರ ಸಂಖ್ಯೆ ಗಣನೀಯ ಏರಿಕೆ

ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಜಾರ್ಖಂಡ್‌ ವಿಧಾನಸಭೆ ಚುನಾವಣೆ ಮತದಾನ ಆರಂಭವಾಗಿದ್ದು, ಬೆಳಗ್ಗೆ ಜಾರ್ಖಂಡ್‌ನ 43 ವಿಧಾನಸಭಾ ಕ್ಷೇತ್ರಗಳಲ್ಲಿ 13.04% ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಗಳು ಮಾಹಿತಿ ನೀಡಿದ್ದಾರೆ. ಜಾರ್ಖಂಡ್‌ನಲ್ಲಿ ಇಂದು ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು, ನವೆಂಬರ್ 20ರಂದು ಎರಡನೇ ಹಂತದಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಈ ಚುನಾವಣೆ ಫಲಿತಾಂಶ ನವೆಂಬರ್‌ 23 ಶನಿವಾರದಂದು ಹೊರಬೀಳಲಿದೆ.

ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಯುವ ಮತದಾರರು ಹಾಗೂ ವಿಶೇಷ ಚೇತನ ಮತದಾರರ ಸಂಖ್ಯೆ ಕಳೆದ ಚುನಾವಣೆಗಿಂತ ಗಣನೀಯವಾಗಿ ಹೆಚ್ಚಿದೆ ಎನ್ನುವುದು ತಿಳಿದು ಬಂದಿದೆ.

jharkhand assembly election

ಈ ಬಾರಿ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ 18-19 ವರ್ಷ ವಯಸ್ಸಿನ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. 2019 ರಲ್ಲಿ ವಿಧಾನಸಭೆ ಚುನಾವಣೆಗೆ ಈ ವಯೋಮಿತಿಯಲ್ಲಿ 5,49,619 ಮತದಾರರಿದ್ದರು. ಮೇ 2024ರ ಲೋಕಸಭೆ ಚುನಾವಣೆಗೆ ಸಮಯದಲ್ಲಿ ಈ ಸಂಖ್ಯೆ 9,29,071ಕ್ಕೆ ಏರಿಕೆ ಕಂಡಿತ್ತು. ಇದೀಗ ಒಟ್ಟು 11,84,150 ಮತದಾರರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತಚಲಾಯಿಸುತ್ತಿದ್ದು, ಕೇವಲ ಆರು ತಿಂಗಳಲ್ಲಿ 2.55 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ.

jharkhand assembly election

ಇನ್ನು ಮಹಿಳಾ ಮತದಾರರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆ ಕಂಡಿದ್ದು, 2019ರ ವಿಧಾನಸಭಾ ಚುನಾವಣೆಯಿಂದ ಈವರೆಗೆ 18,24,551 ರಷ್ಟು ಏರಿಕೆ ಕಂಡಿದೆ. ಇನ್ನು ಪುರುಷ ಮತದಾರರ ನೋಂದಣಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ಬಾರಿ ಜಾರ್ಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ವಿಶೇಷ ಚೇತನ ಮತದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. 2019ರ ವಿಧಾನಸಭಾ ಚುನಾವಣೆಯಿಂದ ಈವರೆಗೆ ವಿಶೇಷ ಚೇತನ ಮತದಾರರ ಸಂಖ್ಯೆ 77,244 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+