ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಕ್ಷಣದಿಂದಲೇ ಜಾರಿಗೆ: ಚುನಾವಣಾ ಆಯೋಗದ ಮತ್ತೊಂದು ಖಡಕ್ ನಿರ್ಧಾರ

|
Google Oneindia Kannada News

ನವದೆಹಲಿ, ಮೇ 16 (ಪಿಟಿಐ) : ಕೊನೆಯ ಹಂತದ ಚುನಾವಣೆಯಲ್ಲಿನ ಬಿಗುವಿನ ವಾತಾವರಣ ಕಮ್ಮಿ ಮಾಡುವ ನಿಟ್ಟಿನಲ್ಲಿ ಒಂದು ದಿನ ಮುಂಚಿತವಾಗಿ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಲು ಆದೇಶ ನೀಡಿದ್ದ ಕೇಂದ್ರ ಚುನಾವಣಾ ಆಯೋಗ, ಈಗ ಮತ್ತೊಂದು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಟ್ವಿಟ್ಟರ್ ಇಂಡಿಯಾಗೆ ನೀಡಿರುವ ನಿರ್ದೇಶನದಲ್ಲಿ ಚುನಾವಣಾ ಆಯೋಗ, ಎಲ್ಲಾ ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ) ಗೆ ಸಂಬಂಧಿಸಿದ ಟ್ವೀಟ್ ಗಳನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲು ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ

ಕೊನೆಯ ಹಂತದ ಚುನಾವಣೆಯ ದಿನವಾದ ಮೇ 19ರ ಸಾಯಂಕಾಲ 6.30ರ ನಂತರ ಮತಗಟ್ಟೆ ಸಮೀಕ್ಷಾ ವರದಿಯನ್ನು ಪ್ರಕಟಿಸಬಹುದಾಗಿದೆ. ಸಮೀಕ್ಷೆಯ ಬಗ್ಗೆ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಆಯೋಗ ತೆಗೆದುಕೊಂಡಿದೆ.

Election Commission Asks Twitter India to Remove All Tweets Related to Exit Polls

ಸಮೀಕ್ಷೆಯನ್ನು ಪ್ರಕಟಿಸಬಾರದು ಎಂದು ಮಾಧ್ಯಮ ಸಂಸ್ಥೆಗಳಿಗೆ ಆಯೋಗ ಸ್ಪಷ್ಟ ಆದೇಶವನ್ನು ನೀಡಿದ್ದರ ಹೊರತಾಗಿಯೂ, ಮೂರು ಸಂಸ್ಥೆಗಳು ತಮ್ಮ ಸಮೀಕ್ಷಾ ವರದಿಯನ್ನು ಪ್ರಕಟಿಸಿದ್ದವು. ಆಯೋಗ, ಆ ಸಂಸ್ಥೆಗಳಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.

ಪ್ರಚಾರ ಅವಧಿ ಮೊಟಕುಮಾಡಿದ ಆಯೋಗದ ಮೇಲೆ ದೀದಿ ಕೆಂಡಾಮಂಡಲ ಪ್ರಚಾರ ಅವಧಿ ಮೊಟಕುಮಾಡಿದ ಆಯೋಗದ ಮೇಲೆ ದೀದಿ ಕೆಂಡಾಮಂಡಲ

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್ ಶೋ ನಂತರ ಹಿಂಸಾಚಾರ ನಡೆದ ಕಾರಣ ಚುನಾವಣಾ ಆಯೋಗವು ಒಂದು ದಿನ ಮುಂಚಿತವಾಗಿಯೇ ಬಹಿರಂಗ ಪ್ರಚಾರವನ್ನು ಮೊಟಕುಗೊಳಿಸುವಂತೆ ಆದೇಶ ಹೊರಡಿಸಿತ್ತು.

ನಿಯಮದ ಪ್ರಕಾರ ಮೇ 17 ಕ್ಕೆ ಚುನಾವಣಾ ಪ್ರಚಾರ ಅಂತ್ಯವಾಗಬೇಕಿತ್ತು, ಆದರೆ ಮೇ 16 ರಂದೇ ರಾಜ್ಯದಲ್ಲಿ ಚುನಾವಣಾ ಬಹಿರಂಗ ಪ್ರಚಾರವನ್ನು ಅಂತ್ಯ ಮಾಡುವಂತೆ ಆದೇಶ ಹೊರಡಿಸಲಾಗಿದೆ.

English summary
With the seven-phase Lok Sabha elections coming to an end, the Election Commission of India has reportedly ordered Twitter India to remove all tweets related to exit polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X