• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭೆಯ 55 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟ

|

ನವದೆಹಲಿ, ಫೆಬ್ರವರಿ 25: ರಾಜ್ಯಸಭೆಯಲ್ಲಿ ತೆರವಾಗಲಿರುವ 55 ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಗ ನಿಗದಿಪಡಿಸಿದೆ.

ರಾಜ್ಯಸಭೆಯ ವಿವಿಧ ರಾಜ್ಯಗಳ ಸದಸ್ಯರ ಸ್ಥಾನಗಳು 2020ರ ಏಪ್ರಿಲ್‌ನಲ್ಲಿ ತೆರವಾಗಲಿವೆ. ಈ ಸದಸ್ಯರ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ದಿನಾಂಕ ನಿಗದಿಗೊಳಿಸಲಾಗಿದೆ.

ರಾಜ್ಯಸಭೆಯಿಂದ 51 ಸಂಸದರು ನಿವೃತ್ತಿ, ಯಾರಿಗೆ ಲಾಭ?

ಮಾರ್ಚ್ 26ರಂದು ಚುನಾವಣೆ ನಡೆಯಲಿದ್ದು, 17 ರಾಜ್ಯಗಳ ಒಟ್ಟು 55 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಕರ್ನಾಟಕದ ಯಾವುದೇ ಸದಸ್ಯರ ಸ್ಥಾನ ತೆರವಾಗುವುದಿಲ್ಲ. ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯವಾಗಲಿದೆ.

ಮಾರ್ಚ್ 6ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮಾರ್ಚ್ 13 ಚುನಾವಣಾ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾರ್ಚ್ 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಮಾರ್ಚ್ 18 ಕೊನೆಯ ದಿನವಾಗಿದೆ.

ಅಂದೇ ಮತ ಎಣಿಕೆ ಕಾರ್ಯ

ಅಂದೇ ಮತ ಎಣಿಕೆ ಕಾರ್ಯ

ಮಾರ್ಚ್ 26ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ. ಮಾರ್ಚ್ 30ರ ಒಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬ್ಯಾಲೆಟ್ ಪೇಪರ್ ಬಳಕೆ

ಬ್ಯಾಲೆಟ್ ಪೇಪರ್ ಬಳಕೆ

ರಾಜ್ಯಸಭೆ ಚುನಾವಣೆಗೆ ಬ್ಯಾಲೆಟ್ ಕಾಗದವನ್ನು ಬಳಸಲಾಗುತ್ತಿದ್ದು, ಅದಕ್ಕೆ ರಿಟರ್ನಿಂಗ್ ಆಫೀಸರ್ ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಯಾವುದೇ ಸಂದರ್ಭದಲ್ಲಿಯೂ ಬೇರೆ ಯಾವುದೇ ಬಣ್ಣದ ಸ್ಕೆಚ್ ಪೆನ್ ಬಳಸುವುದನ್ನು ನಿರ್ಬಂಧಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ಸ್ಥಾನ?

ಎಲ್ಲೆಲ್ಲಿ ಎಷ್ಟು ಸ್ಥಾನ?

ಮಹಾರಾಷ್ಟ್ರ 7, ಒಡಿಶಾ 4, ತಮಿಳುನಾಡು 6 ಮತ್ತು ಪಶ್ಚಿಮ ಬಂಗಾಳದ 5 ರಾಜ್ಯಸಭೆ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಸದಸ್ಯರ ಸದಸ್ಯತ್ವದ ಅವಧಿ ಏಪ್ರಿಲ್ 2ರಂದು ಮುಕ್ತಾಯವಾಗಲಿದೆ.

ಆಂಧ್ರಪ್ರದೇಶ 4, ತೆಲಂಗಾಣ 2, ಅಸ್ಸಾಂ 3, ಬಿಹಾರ 5, ಛತ್ತೀಸಗಡ 2, ಗುಜರಾತ್ 4, ಹರಿಯಾಣ 2, ಹಿಮಾಚಲ ಪ್ರದೇಶ 1, ಜಾರ್ಖಂಡ್ 2, ಮಧ್ಯಪ್ರದೇಶ 3, ಮಣಿಪುರ 1, ರಾಜಸ್ಥಾನ 3 ಸ್ಥಾನಗಳಲ್ಲಿ ಸದಸ್ಯತ್ವದ ಅವಧಿ ಏಪ್ರಿಲ್ 9ರಂದು ಅಂತ್ಯಗೊಳ್ಳಿದೆ.

ಅವಧಿ ಅಂತ್ಯಗೊಂಡ ಬಳಿ ಅಧಿಕಾರ

ಅವಧಿ ಅಂತ್ಯಗೊಂಡ ಬಳಿ ಅಧಿಕಾರ

ಮೇಘಾಲಯದ 1 ರಾಜ್ಯಸಭೆ ಸದಸ್ಯರ ಅವಧಿ ಏಪ್ರಿಲ್ 12ರಂದು ಮುಗಿಯಲಿದೆ. ಈ ಎಲ್ಲ ಸ್ಥಾನಗಳಿಗೆ ಮಾರ್ಚ್ 26ರಂದೇ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳು, ಈ ಸ್ಥಾನಗಳು ತೆರವಾಗುವ ದಿನಾಂಕದಿಂದ ಅಧಿಕೃತವಾಗಿ ರಾಜ್ಯಸಭೆಯ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ.

English summary
Election Commission of India on Tuesday has announced election date for 55 seats of Rajya Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more