ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದೆಲ್ಲೆಡೆ ರಂಜಾನ್ ಹಬ್ಬದ ಸಡಗರ: ನೋಡಬನ್ನಿ ಹೇಗಿದೆ

By Nayana
|
Google Oneindia Kannada News

ಬೆಂಗಳೂರು, ಜೂನ್ 16 : ಮುಸ್ಲಿಮ್ ಬಾಂಧವರ ಪವಿತ್ರ ರಮಜಾನ್ ಹಬ್ಬದ ಆಚರಣೆಯು ಶನಿವಾರ ದೇಶಾದ್ಯಂತ ಭಕ್ತಿ ಸಡಗರದ ಮಧ್ಯೆ ನಡೆಯಿತು. ದೇಶದೆಲ್ಲೆಡೆ ಸಾಮೂಹಿಕ ವಿಶೇಷ ಪ್ರಾರ್ಥನೆ ಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಪಾಲ್ಗೊಂಡು ಬಳಿಕ‌ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ತಿಂಗಳ ಪರ್ಯಂತ ನಡೆದ ಉಪವಾಸ ವ್ರತ ಆಚರಣೆ ರೋಜಾ ಇಂದಿಗೆ ಕೊನೆಗೊಂಡಿತು. ಹೀಗಾಗಿ ಬಗೆಬಗೆಯ ಸಿಹಿ ಖಾದ್ಯ, ಮಾಂಸಾಹಾರದ ಭೋಜನ‌ ಸವಿದರು. ಪ್ರತಿಯೊಬ್ಬನೂ ಶ್ರದ್ಧೆ ಮತ್ತು ನಿಷ್ಠೆಯಿಂದ ಕೈಗೊಳ್ಳುವ ಈ ತಿಂಗಳಲ್ಲಿ ನಮ್ಮಿಂದ ಆದ ತಪ್ಪುಗಳನ್ನು ತಿದ್ದಿ ಕೊಳ್ಳುವ ಅವಕಾಶವಿರುತ್ತದೆ. ಉಪವಾಸ ಅಥವಾ ರೋಜಾ ಎಂಬುದು ಇಸ್ಲಾಂ ಧರ್ಮದ ಕಡ್ಡಾಯ ನಿಯಮಗಳಲ್ಲಿ ಒಂದು.

ವಿಶ್ವಾದ್ಯಂತ ಪವಿತ್ರ ರಂಜಾನ್‌ ಆಚರಣೆ: ಚಿತ್ರಗಳಲ್ಲಿ ನೋಡಿ ವಿಶ್ವಾದ್ಯಂತ ಪವಿತ್ರ ರಂಜಾನ್‌ ಆಚರಣೆ: ಚಿತ್ರಗಳಲ್ಲಿ ನೋಡಿ

ಪ್ರೌಢಾವಸ್ಥೆಗೆ ಬಂದಂತಹ ಮಾನಸಿಕ ಹಾಗೂ ಆರೋಗ್ಯವಂತರಾದ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಅತಿ ದೂರದ ಪ್ರಯಾಣದಲ್ಲಿರುವವರು ರಂಜಾನ್‌ ಮಾಸದ ನಂತರದ ಉಪವಾಸವನ್ನು ಪೂರ್ಣಗೊಳಿಸಬಹುದು. ಚಿಕ್ಕ ಮಕ್ಕಳಿಗೆ ಉಪವಾಸ ಕಡ್ಡಾಯವಲ್ಲ.

ರಂಜಾನ್‌ ಮಾಸದಲ್ಲಿ ಕೊನೆಯ ಐದು ರಾತ್ರಿಗಳಲ್ಲಿ ದಿನಬಿಟ್ಟು ದಿನದಂತೆ ಜಾಗರಣೆ ಮಾಡಲಾಗುತ್ತದೆ. ಆ ರಾತ್ರಿಯಲ್ಲಿ ಒಂದು ರಾತ್ರಿಯನ್ನು 'ಷಬ್‌-ಎ-ಖದರ' ಎನ್ನುತ್ತಾರೆ. ರಂಜಾನ್‌ ಮಾಸದ 30 ಅಥವಾ 31ನೇ ದಿನದಂದು ಈದ್‌-ಉಲ್‌-ಫಿತರ್‌ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಆಚರಣೆಯ ಮುಂಚೆ ಬಡವರಿಗೆ ಹಣವನ್ನು ದಾನ ಮಾಡಲಾಗುತ್ತದೆ.

ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿದ ಮೋದಿ, ಎಚ್ಡಿಕೆರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿದ ಮೋದಿ, ಎಚ್ಡಿಕೆ

ಆದರೆ ಜಕಾತ್‌ ಹಣಕ್ಕೂ ಸಂಬಂಧವಿಲ್ಲ. ಏಕೆಂದರೆ ಹಬ್ಬದ ಹಣದಾನವನ್ನು 'ಫಿತರ್‌' ಎಂದು ಕರೆಯಲಾಗುತ್ತದೆ. ಈದ್‌-ಉಲ್‌-ಫಿತರ್‌ ಎಂದರೆ ಬಡವರಿಗೆ ಅನಾಥರಿಗೆ ಎಲ್ಲಾ ರೀತಿಯ ಸಹಾಯದೊಂದಿಗೆ ಸಂತೋಷದಲ್ಲಿ ತೊಡಗಿಸಿಕೊಳ್ಳುವುದು ಎಂದರ್ಥ. ವಿಶ್ವದಾದ್ಯಂತ ಕೆಲವೆಡೆ ಶುಕ್ರವಾರ ರಂಜಾನ್ ಆಚರಣೆ ಮಾಡಿದರೆ ಇನ್ನು ಕೆಲವು ಭಾಗಗಳಲ್ಲಿ ಶನಿವಾರ ಆಚರಿಸಿದರು.

ರಂಜಾನ್ ಹಬ್ಬಕ್ಕೆ ಅಲಂಕಾರಿಕ ದೀಪಗಳಿಂದ ಅಲಂಕೃತಗೊಂಡ ಮಸೀದಿ

ರಂಜಾನ್ ಹಬ್ಬಕ್ಕೆ ಅಲಂಕಾರಿಕ ದೀಪಗಳಿಂದ ಅಲಂಕೃತಗೊಂಡ ಮಸೀದಿ

ರಂಜಾನ್‌ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ ಅದರ ಅಂಗವಾಗಿ ಅಹಮದಾಬಾದ್‌ಬಲ್ಲಿ ಸಿದಿ ಸೈಯದ್ ಮಸೀದಿ ವಿದ್ಯುತ್ ಅಲಂಕಾರಿಕರ ದೀಪಗಳೊಂದಿಗೆ ಕಂಗೊಳಿಸಿದ್ದು ಹೀಗೆ

 ಕೊಲ್ಕತ್ತದ ಮಾರುಕಟ್ಟೆಯಲ್ಲಿ ರಂಜಾದ್‌ ಹಬ್ಬದ ಖರೀದಿಯಲ್ಲಿ ತೊಡಗಿರುವ ಮಂದಿ

ಕೊಲ್ಕತ್ತದ ಮಾರುಕಟ್ಟೆಯಲ್ಲಿ ರಂಜಾದ್‌ ಹಬ್ಬದ ಖರೀದಿಯಲ್ಲಿ ತೊಡಗಿರುವ ಮಂದಿ

ರಂಜಾನ್ ಹಬ್ಬದ ತಯಾರಿ ಭರ್ಜರಿಯಾಗಿಯೇ ನಡೆದಿತ್ತು, ರಂಜಾನ್‌ ಆಚರಣೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಕೊಲ್ಕತ್ತದ ಮಾರುಕಟ್ಟೆಯೊಂದರಲ್ಲಿ ಮುಸಲ್ಮಾನರು ಸೇರಿದ್ದು ಹೀಗೆ

ಈದ್‌-ಉಲ್‌-ಫಿತರ್ ದಿನ ಕಾಣಿಸಿಕೊಂಡ ಚಂದ್ರ

ಈದ್‌-ಉಲ್‌-ಫಿತರ್ ದಿನ ಕಾಣಿಸಿಕೊಂಡ ಚಂದ್ರ

ರಂಜಾನ್‌ ಆಚರಣೆ ಮಾಡಬೇಕಿದ್ದರೆ ರಂಜಾನ್‌ ಹಿಂದಿನ ದಿನ ಚಂದ್ರನನ್ನು ನೋಡಿಯೇ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು, ಒಂದೊಮ್ಮೆ ಚಂದ್ರ ಕಾಣದಿದ್ದರೆ ಹಬ್ಬವನ್ನೇ ಮುಂದೂಡಲಾಗುತ್ತದೆ. ರಂಜಾನ್ ಆಚರಣೆ ಹಿಂದಿನ ದಿನ ಚಂದ್ರ ಕಾಣಿಸಿಕೊಂಡ ಬಗೆ

ಅಲಹಬಾದ್‌ ಮಖ್ಖಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ

ಅಲಹಬಾದ್‌ ಮಖ್ಖಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ

ರಂಜಾನ್ ಹಬ್ಬದ ಅಂಗವಾಗಿ ಶನಿವಾರ ಅಲಹಬಾದ್‌ನ ಮಖ್ಖಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್‌ ಹಬ್ಬಕ್ಕೆ ವಸ್ತುಗಳ ಖರೀದಿ ಭರಾಟೆ

ರಂಜಾನ್‌ ಹಬ್ಬಕ್ಕೆ ವಸ್ತುಗಳ ಖರೀದಿ ಭರಾಟೆ

ರಂಜಾನ್‌ ಹಬ್ಬಕ್ಕೆ ವಿಶೇಷವಾಗಿ ಸಿದ್ಧಗೊಳ್ಳಲು ನವದೆಹಲಿಯ ಜಾಮಾ ಮಸೀದಿ ಎದುರಿರುವ ಮಾರುಕಟ್ಟೆಗೆ ತೆರಳಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.

ಕೊಲ್ಕತ್ತದ ಮಸೀದಿ ಎದುರು ಸಾಮೂಹಿಕ ಪ್ರಾರ್ಥನೆ

ಕೊಲ್ಕತ್ತದ ಮಸೀದಿ ಎದುರು ಸಾಮೂಹಿಕ ಪ್ರಾರ್ಥನೆ

ಕೊಲ್ಕತ್ತದ ಮಸೀದಿ ಎದುರು ರಂಜಾನ್ ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಮ್ ಬಾಂಧವರ ಪವಿತ್ರ ರಮಜಾನ್ ಹಬ್ಬದ ಆಚರಣೆಯು ಶನಿವಾರ ದೇಶಾದ್ಯಂತ ಭಕ್ತಿ ಸಡಗರದ ಮಧ್ಯೆ ನಡೆಯಿತು. ದೇಶದೆಲ್ಲೆಡೆ ಸಾಮೂಹಿಕ ವಿಶೇಷ ಪ್ರಾರ್ಥನೆ ಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಪಾಲ್ಗೊಂಡು ಬಳಿಕ‌ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

English summary
Lakhs of Muslims celebrated Eid Ramzan on Saturday with fervor across the country. After a special mass prayed exchanged wishes each other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X