ಯುವ ಭಾರತದ ನೆರವಿನಿಂದ ಜಲ ಸಂರಕ್ಷಣೆ: ಮೋದಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 20: ದೇಶದ ಹಲವೆಡೆ ಭೀಕರ ಬರಗಾಲ, ಜಲಕ್ಷಾಮ ಎದುರಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಜರುಗಿಸಲು ಮುಂದಾಗಿದೆ. ಎಂನರೇಗಾ ಅಡಿಯಲ್ಲಿ ಜಲ ಸಂರಕ್ಷಣೆ ಮಾಡಲು ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎನ್ ಸಿಸಿಬಿಎಸ್ ಇ ಯಂಥ ಯುವ ಸಂಘಟನೆಯ ನೆರವು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್ ಸಿಸಿ, ಎನ್ ಎಸ್ಎಸ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಎನ್ ವೈ ಕೆಎಸ್ ಸೇರಿದಂತೆ ಪ್ರಮುಖ ಯುವ ಸಂಘಟನೆಗಳ ಕಾರ್ಯಕ್ಷಮತೆ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಿದರು.[ಬರಪರಿಹಾರ ನಿಧಿಗೆ ಬಿಜೆಪಿ ಸದಸ್ಯರ ತಿಂಗಳ ಸಂಬಳ]

Efforts launched for water conservation, says Narendra Modi

ಮುಂದಿನ ಕೆಲವು ತಿಂಗಳುಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಎಂನರೇಗಾ ಅಡಿಯಲ್ಲಿ ಜಲ ಸಂರಕ್ಷಣೆ ಹಾಗೂ ಶೇಖರಣೆ ವಿಧಾನಗಳನ್ನು ಸುಧಾರಿಸಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರಧಾನಿ ಸಚಿವಾಲಯ ಹೇಳಿಕೆ ನೀಡಿದೆ.[ಬರಗಾಲ ಪ್ರದೇಶದಲ್ಲಿ ಸೆಲ್ಫಿ, ತೊಂದ್ರೆ ಇಲ್ಲ ಎಂದ ಪಂಕಜ!]

ಸ್ವಚ್ಛಭಾರತ್ ಅಭಿಯಾನವನ್ನು ಯಶಸ್ವಿಗೊಳಿಸಿದ ಯುವ ಭಾರತ ಇಂದು ಜಲ ಸಂರಕ್ಷಣೆ, ಶೇಖರಣೆ, ಪೂರೈಕೆ ಕ್ರಾಂತಿಗೆ ಮುನ್ನುಡಿ ಬರೆಯಬೇಕಿದೆ. ಇಂಥ ಕಾರ್ಯಗಳಿಂದ ರಾಷ್ಟ್ರೀಯ ಶಕ್ತಿ ಜಾಗೃತವಾಗಲಿದೆ. ಕೇಂದ್ರ ಸರ್ಕಾರದಿಂದ 'ಮಿಷನ್ ಇಂದ್ರಧನುಷ್' ಯೋಜನೆ ಸದ್ಯಕ್ಕೆ ಜಾರಿಯಲ್ಲಿದೆ ಎಂದರು.[ಮಳೆಗಾಲದಲ್ಲಿ ದ್ವೀಪವಾಗುವ ಗ್ರಾಮದಲ್ಲಿ ಈಗ ಒಂದು ಹನಿ ನೀರಿಲ್ಲ]

ಸಾಮಾಜಿಕ ಜಾಲ ತಾಣಗಳನ್ನು ಸೂಕ್ತವಾಗಿ ಬಳಸಿಕೊಂಡು ಜನರಿಗೆ ಹೆಚ್ಚೆಚ್ಚು ಹತ್ತಿರವಾಗಿ ಅವರ ಸಮಸ್ಯೆಗಳತ್ತ ಗಮನ ಹರಿಸಲು ಮುಂದಾಗಿ ಎಂದು ಯುವ ಸಂಘಟನೆಗಳಿಗೆ ಮೋದಿ ಕರೆ ನೀಡಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With various parts of the country witnessing drought, Prime Minister Narendra Modi today said a "massive effort" will be launched for water conservation and storage under MNREGA in the next couple of months and urged official youth organisations like NCCBSE to contribute in this.
Please Wait while comments are loading...