Education Fair: ಆಗಸ್ಟ್ 9-17ವರೆಗೆ ಭಾರತಾದ್ಯಂತ 'ಯುಎಸ್ ಉನ್ನತ ಶಿಕ್ಷಣ' ಮೇಳಗಳು, ವೇಳಾಪಟ್ಟಿ
ನವದೆಹಲಿ, ಆಗಸ್ಟ್ 05: ಅಮೆರಿಕದಲ್ಲಿ ಉನ್ನತ ಶಿಕ್ಷಣ ಕುರಿತ ಮಾಹಿತಿ ನೀಡುವ ಅಧಿಕೃತ ಮೂಲವಾದ ಎಜುಕೇಶನ್‌ಯುಎಸ್‌ಎ ಭಾರತಾದ್ಯಂತ ಎಂಟು ಕಡೆಗಳಲ್ಲಿ 'ಯುಎಸ್‌ನಲ್ಲಿ ಅಧ್ಯಯನ' ಶಿಕ್ಷಣ ಮೇಳವನ್ನು ಇದೇ ತಿಂಗಳು ಆಯೋಜಿಸಿದೆ. ಯಾವೆಲ್ಲ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳುತ್ತವೆ. ಪ್ರಮುಖ ದಿನಾಂಕಗಳು, ಸ್ಥಳ ಸೇರಿದಂತೆ ಅಗತ್ಯ ಮಾಹಿತಿ ಇಲ್ಲಿದೆ.
'ಯುಎಸ್‌ನಲ್ಲಿ ಅಧ್ಯಯನ' ಶಿಕ್ಷಣ ಮೇಳಗಳು ಇದೇ ಆಗಸ್ಟ್ 9 ರಂದು ಚೆನ್ನೈಯಲ್ಲಿ ಆರಂಭವಾಗಿ ಆಗಸ್ಟ್ 17ರಂದು ಪುಣೆಯಲ್ಲಿ ಕೊನೆಗೊಳ್ಳಲಿವೆ. ದೇಶಾದ್ಯಂತ ನಡೆಯುವ ಈ ಮೇಳದಲ್ಲಿ ಮಾನ್ಯತೆ ಪಡೆದ 50 ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಮೆರಿಕನ್ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳನ್ನು ಭೇಟಿಯಾಗುವ ಅಪೂರ್ವ ಅವಕಾಶ ದೊರೆಯಲಿದೆ. ಮೇಳಗಳಿಗೆ ಪ್ರವೇಶ ಉಚಿತ. ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಅದಕ್ಕಾಗಿ ನೀವು ಈ ಲಿಂಕ್ https://bit.ly/EdUSAFair25EMB ಬಳಸಿ ನೋಂದಾಯಿಸಿಕೊಳ್ಳಬಹುದು.

ಈ ಮೇಳಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವ ಪದವಿ, ಸ್ನಾತಕೋತ್ತರ ಅಥವಾ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ತಮ್ಮದೇ ಶಿಕ್ಷಣ ಮಾರ್ಗವನ್ನು ರೂಪಿಸಿಕೊಳ್ಳಲು ನೇರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಅಮೂಲ್ಯ ಅವಕಾಶವನ್ನು ಒದಗಿಸುತ್ತವೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಎಜುಕೇಶನ್‌ಯುಎಸ್‌ಎ ಸಲಹೆಗಾರರು ಮತ್ತು ಅಮೇರಿಕ ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ, ವಿಶ್ವಾಸಾರ್ಹ ಮತ್ತು ಪಾರದರ್ಶಕ ಮಾಹಿತಿ ಪಡೆಯುತ್ತಾರೆ. ಇದು ಅವರಿಗೆ, ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಕಾನೂನುಬದ್ಧ ಮತ್ತು ಸುಗಮವಾದ ಅಕಾಡೆಮಿಕ್ ಯಶಸ್ಸಿನ ಮಾರ್ಗವನ್ನು ಅನುಸರಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಈ ಮೇಳಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು, ಅರ್ಜಿ ಪ್ರಕ್ರಿಯೆಗಳು, ವಿದ್ಯಾರ್ಥಿವೇತನಗಳು, ಅರ್ಹತೆ ಹಾಗೂ ಅಮೆರಿಕದ ಕ್ಯಾಂಪಸ್ ಜೀವನ ಕುರಿತು ತಜ್ಞರ ನೇತೃತ್ವದಲ್ಲಿ ವಿಶೇಷ ಅಧಿವೇಶನಗಳೂ ನಡೆಯಲಿವೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ, ವ್ಯವಹಾರ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮಗಳು, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ನೀಡುವ ಉದ್ದೇಶ ಹೊಂದಿವೆ.
ಯಾವೆಲ್ಲ ಸ್ಥಳದಲ್ಲಿ ಈ ಮೇಳ ನಡೆಯಲಿವೆ?
* ಮೊದಲು ಮೇಳ ಆಗಸ್ಟ್ 9ರಂದು ಶನಿವಾರದಂದು ತಮಿಳುನಾಡಿನ ಚೆನ್ನೈನಲ್ಲಿರುವ ಹೋಟೆಲ್ ಹಿಲ್ಟನ್ ನಲ್ಲಿ ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ನಡೆಯಲಿದೆ.
* ಭಾನುವಾರ, ಆಗಸ್ಟ್ 10ರಂದು ಕರ್ನಾಟಕದ ಬೆಂಗಳೂರಿನ ಹೋಟೆಲ್ ಹಯಾತ್ ಸೆಂಟ್ರಿಕ್ ಹೆಬ್ಬಾಳದಲ್ಲಿ ಮಧ್ಯಾಹ್ನ 1:00 ರಿಂದ ಸಂಜೆ 5:00 ರವರೆಗೆ ಜರುಗಲಿದೆ.
* ಸೋಮವಾರ, ಆಗಸ್ಟ್ 11ರಂದು ಹೈದರಾಬಾದ್ ಹೋಟೆಲ್ ಐಟಿಸಿ ಕೊಹೆನೂರ್ ನಲ್ಲಿ ಸಂಜೆ 4:30 ರಿಂದ ಸಂಜೆ 7:30 ರವರೆಗೆ ಆಯೋಜಿಸಲಾಗಿದೆ.
* ಇನ್ನೂ ಆಗಸ್ಟ್ 12 ಮಂಗಳವಾರದಂದು ನವದೆಹಲಿಯ ಹೋಟೆಲ್ ದಿ ಲಲಿತ್ ನಲ್ಲಿ ಸಂಜೆ 6:00 ರಿಂದ ರಾತ್ರಿ 9:00 ರವರೆಗೆ ಮೇಳ ನಡೆಸಲಾಗುತ್ತದೆ.
* ಬುಧವಾರ, ಆಗಸ್ಟ್ 13ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹೋಟೆಲ್ ದಿ ಪಾರ್ಕ್ ನಲ್ಲಿ ಸಂಜೆ 6:00 ರಿಂದ ರಾತ್ರಿ 9:00 ರವರೆಗೆ ಶಿಕ್ಷಣ ಮೇಳ ಆಯೋಜನೆಗೊಂಡಿದೆ.
* ಶುಕ್ರವಾರ, ಆಗಸ್ಟ್ 15ರಂದು ಅಹಮದಾಬಾದ್ ಪ್ರಮುಖ ಹೋಟೆಲ್ ಹಯಾತ್ ವಸ್ತ್ರಾಪುರನಲ್ಲಿ ಮಧ್ಯಾಹ್ನ 2:00 ರಿಂದ ಸಂಜೆ 5:00 ಗಂಟೆಗೆ ಜರುಗಲಿದೆ.
* ಶನಿವಾರ, ಆಗಸ್ಟ್ 16ರಂದು ಮಹಾರಾಷ್ಟ್ರ ರಾಜ್ಯದ ಮುಂಬೈ ಹೋಟೆಲ್ ಸೇಂಟ್ ರೆಜಿಸ್ ನಲ್ಲಿ ಮಧ್ಯಾಹ್ನ 2:00 ರಿಂದ ಸಂಜೆ 5:00 ಗಂಟೆಗೆ ಮೇಳ ನಡೆಯಲಿದೆ.
* ಇನ್ನೂ ಕೊನೆ ಮೇಳ ಭಾನುವಾರ, ಆಗಸ್ಟ್ 17ರಂದು ಮಹಾರಾಷ್ಟ್ರ ರಾಜ್ಯದ ಪುಣೆಯ ಹೋಟೆಲ್ ಶೆರಾಟನ್ ಗ್ರ್ಯಾಂಡ್ ಪುಣೆ ಬಂಡ್ ಗಾರ್ಡನ್ ನಲ್ಲಿ 2:00 ಗಂಟೆಯಿಂದ ಸಂಜೆ 5:00 ವರೆಗೆ ನಡೆಯಲಿದ್ದು, ಅಂದು ಈ ಮೇಳ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.
ಎಜುಕೇಶನ್‌ಯುಎಸ್‌ಎ ಕುರಿತು...
ಭಾರತದಲ್ಲಿನ ಎಜುಕೇಶನ್‌ಯುಎಸ್‌ಎ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಾದರೆ, ' ಈ ಎಜುಕೇಶನ್‌ಯುಎಸ್‌ಎ ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್‌ನ ಜಾಲವಾಗಿದೆ. 175 ಕ್ಕೂ ಹೆಚ್ಚು ದೇಶಗಳು ಮತ್ತು 430 ಕ್ಕೂ ಹೆಚ್ಚುಕಡೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳು ಹೊಂದಿದೆ. ಭಾರತದಲ್ಲಿ, ಎಜುಕೇಶನ್‌ಯುಎಸ್‌ಎ ಸೇವೆಗಳು ದೆಹಲಿ, ಚೆನ್ನೈ, ಕೊಲ್ಕತ್ತಾ, ಮುಂಬೈ ಮತ್ತು ಹೈದರಾಬಾದ್‌ನ ಐದು ಕೇಂದ್ರಗಳು ದೊರೆಯುತ್ತವೆ. ಅಮೆರಿಕದ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ, ಎಜುಕೇಶನ್‌ಯುಎಸ್‌ಎ ಅತ್ಯಾಧುನಿಕ, ನಿಖರ ಮತ್ತು ಸಮಗ್ರ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ www.educationusa.in ಗೆ ಭೇಟಿ ನೀಡಿ ಅಥವಾ [email protected] ಮೂಲಕ ಸಂಪರ್ಕಿಸುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
-
2026ರ ದ್ವಿತೀಯ PUC ಫಲಿತಾಂಶ: ನಗರದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ದಾಖಲೆ ಬರೆದ ಗ್ರಾಮೀಣ ಪ್ರತಿಭೆಗಳು -
ಉಡುಪಿ ಜಿಲ್ಲೆಯ ವಂಡ್ಸೆ ಸರ್ಕಾರಿ ಶಾಲೆಗೆ ರಾಜ್ಯದ ಮೊದಲ ಎಐ ಟೀಚರ್ 'ಐರಿಸ್' ಎಂಟ್ರಿ -
CBSE 10th Results 2026: ಹತ್ತನೇ ತರಗತಿ ನಂತರ ನಿಮ್ಮ ಆಯ್ಕೆ ಏನಾಗಿರಬೇಕು? ಮುಂದಿನ ಹಾದಿ ಹೀಗಿರಲಿ -
CBSE ಹೊಸ ನಿಯಮ: ಮುಖ್ಯ ವಿಷಯದಲ್ಲಿ ಫೇಲ್ ಆದರೂ ಪಾಸ್ ಅವಕಾಶ, CBSE ರಿಸಲ್ಟ್ ನೋಡುವುದು ಹೇಗೆ -
CBSE Results 2026: ಸಿಬಿಎಸ್ಇ 10 ಮತ್ತು 12ನೇ ತರಗತಿಯ ಉತ್ತರ ಪತ್ರಿಕೆಯ ಪ್ರತಿ ಪಡೆಯುವುದು ಹೇಗೆ? -
Central Board of Secondary Education: 10ನೇ ತರಗತಿ ಎರಡು ಪರೀಕ್ಷೆ ವ್ಯವಸ್ಥೆ: ಅವಕಾಶವೇ ಅಥವಾ ಹೆಚ್ಚುವರಿ ಒತ್ತಡವೇ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
CBSE 10 Results 2025: ಸಿಬಿಎಸ್ಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಟಾಪರ್ಸ್ ಪಟ್ಟಿ ಇಲ್ಲಿದೆ -
ನಿಮ್ಮ ಮನೆಯ ಸಮೀಪ ಸರ್ಕಾರಿ ಪಿಯು ಕಾಲೇಜು ಎಲ್ಲಿದೆ ಗೊತ್ತೇ? ಅವರಿವರನ್ನು ಕೇಳಿ ದಿಕ್ಕುತಪ್ಪಬೇಡಿ, ಇಲ್ಲಿದೆ ಮಾಹಿತಿ -
ರಾಜ್ಯದಲ್ಲಿ ಮೇ 29ರಿಂದಲೇ 2026-27ನೇ ಹೊಸ ಶೈಕ್ಷಣಿಕ ವರ್ಷ ಆರಂಭ, ಈ ಬಾರಿ ದಸರಾಗೆ ಬರೋಬ್ಬರಿ 19 ದಿನ ರಜೆ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ










Click it and Unblock the Notifications