ಇಲ್ಲಿದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಭರ್ಜರಿ ಗುಡ್ ನ್ಯೂಸ್
ಬೆಂಗಳೂರು, ಆಗಸ್ಟ್ 12: ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಶಿಕ್ಷಣ ಇಲಾಖೆ ಆಗಾಗ ಮಹತ್ವದ ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಹಾಗಾದ್ರೆ ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುವುದಕ್ಕೂ ಒಂದು ದಿನ ಮುಂಚಿತವಾಗಿ ಎಲ್ಲಾ ಕಂಠಪಾಠದ ಮೂಲಕ ಅಭ್ಯಾಸ ಮಾಡಿ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಈ ವಿಧಾವನ್ನು ಸುಲಭಗೊಳಿಸಲು ಶಿಕ್ಷಣ ಇಲಾಖೆ ಮಹತ್ವದ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಹಾಗಾದ್ರೆ ಇದು ಹಾಗಾದ್ರೆ ಯಾವ ಯೋಜನೆ ಹಾಗೂ ಇದು ಯಾರಿಗೆಲ್ಲ ಅನ್ವಯ ಆಗಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಇಷ್ಟು ದಿನ ಮನೆಯಲ್ಲಿ ಓದಿಕೊಂಡು ಬಳಿಕ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಆದರೆ, ಇನ್ಮುಂದೆ ಇದನ್ನು ಸರಳಿಕರಣ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಪರೀಕ್ಷೆಯಲ್ಲಿ ಉತ್ತರ ಬರೆಯಲು ವಿದ್ಯಾರ್ಥಿಗಳ ಕೈಗೆ ಪುಸ್ತಕವನ್ನೇ ಕೊಡುತ್ತಾರೆ ಎಂದು ವರದಿಯಾಗಿದೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)ಯು 9ನೇ ತರಗತಿಯ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿ ಮಾಡಲಿ ನಿರ್ಧರಿಸಿದೆ. ಅಂದರೆ ಇನ್ಮುಂದೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲಿ ಅವಕಾಶ ಮಾಡಿಕೊಡಲಾಗುತ್ತಿದೆ. 2026-27ರಿಂದ ಇದು ಜಾರಿಗೆ ಬರಲಿದೆ. ಈ ಮೂಲಕ ಮನೆಯಲ್ಲಿ ಕುಳಿತು ಕಂಠಪಾಠ ಮಾಡುವ ಕೆಲಸ ತಪ್ಪಿದಂತಾಗಲಿದೆ. ಇದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಕೌಶಲಕ್ಕೆ ಇಲ್ಲಿ ಹೆಚ್ಚಿನ ಸಮಯ ಕೊಡಲಾಗುತ್ತದೆ.
ಸಿಬಿಎಸ್‌ಇಯ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿಗೊಳಿಸಲಾಗುತ್ತದೆ. ಆದ್ದರಿಂದ ಇನ್ಮುಂದೆ ವಿದ್ಯಾರ್ಥಿಗಳು ಪಠ್ಯ ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ ಇರಲಿದೆ. ಹಳೇ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಹೆಚ್ಚು ಸಮಯ ನೀಡುತ್ತದೆ ಎಂಬ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ ಎಂದು ತಿಳಿದುಬಂದಿದೆ.
ನ್ಯಾಷನಲ್ ಕರಿಕುಲಮ್ ಫ್ರೇಮ್ವರ್ಕ್ ಫಾರ್ ಸ್ಕೂಲ್ ಎಜುಕೇಶನ್ ಚೌಕಟ್ಟು 2023 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಇದು ಅನುಗುಣವಾಗಿ ಈ ಪ್ರಸ್ತಾವನೆ ಇದೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿನ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಈ ವಿಷಯಗಳನ್ನು ಪುಸ್ತಕ ಮೌಲ್ಯಮಾಪನ ಒಳಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದದ್ರೆ, ಈ ಯೋಜನೆ ಜಾರಿಯಾದ್ರೆ ವಿದ್ಯಾರ್ಥಿಗಳ ಸಮಯವೂ ಉಳಿತಾಯ ಆದಂತಾಗಲಿದೆ. ಅಲ್ಲದೆ, ಅವರ ಕೌಶಲ್ಯಕ್ಕೆ ಹೆಚ್ಚಿನ ಸಮಯ ನೀಡಿದಂತಾಗಲಿದೆ ಎನ್ನುವ ಉದ್ದೇವಾಗಿದೆ.
ಮತ್ತೊಂದೆಡೆ ಹೇಳೋದಾದ್ರೆ, ಇದರಿಂದ ವಿದ್ಯಾರ್ಥಿಗಳು ಹೇಗೋ ನಾವು ಪುಸ್ತಕ ನೋಡಿಕೊಂಡು ಉತ್ತೀರ್ಣರಾಗಿಬಿಡಬಹುದು. ಆದರೆ, ಅವರ ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆ ಪೋಷಕರದಲ್ಲಿ ಕಾಡುತ್ತಿದೆ. ಅಲ್ಲದೆ, ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣ ನೀಡುವಂತೆಯೂ ವಿದ್ಯಾರ್ಥಿಗಳ ಪೋಷಕರು ಮೊದಲಿನಿಂದಲೂ ಆಗ್ರಹಿಸುತ್ತಲಿದ್ದಾರೆ. ಇದು ಆದ್ರೆ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಆಗಲಿದೆ ಎಂದು ಹೇಳಬಹುದು.












Click it and Unblock the Notifications