ಅಧಿವೇಶನ ವೇಳೆ ಮಲ್ಲಿಕಾರ್ಜುನ ಖರ್ಗೆಗೆ ಇಡಿ ನೋಟಿಸ್‌: ಸಂಸತ್ತಿನಲ್ಲಿ ಕೋಲಾಹಲ

ನವದೆಹಲಿ,ಆಗಸ್ಟ್‌.4: ಸಂಸತ್ತಿನ ಅಧಿವೇಶನದಲ್ಲಿ ಪಾಲ್ಗೊಳ್ಳುವ ವೇಳೆ ಜಾರಿ ನಿರ್ದೇಶನಾಲಯ (ಇಡಿ)ಯಿಂದ ಸಮನ್ಸ್ ಸ್ವೀಕರಿಸಿರುವುದಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಗುರುವಾರ ತಿಳಿಸಿದರು.

ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಅವರು (ಇಡಿ) ನನ್ನನ್ನು ಹೇಗೆ ಕರೆಯುತ್ತಾರೆ? ಜಾರಿ ನಿರ್ದೇಶನಾಲಯದ ಸಮನ್ಸ್ ಕುರಿತು ಮಾತನಾಡಿದ ಖರ್ಗೆ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನನನಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಮಾತನಾಡಿದ ಖರ್ಗೆ, ನನಗೆ ಇಡಿ ಸಮನ್ಸ್ ಬಂದಿದೆ. ಅವರು ನನಗೆ ಮಧ್ಯಾಹ್ನ 12.30 ಕ್ಕೆ ಕರೆ ಮಾಡಿದರು. ನಾನು ಕಾನೂನು ಪಾಲಿಸಲು ಬಯಸುತ್ತೇನೆ. ಆದರೆ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಅವರು ಕರೆಸುವುದು ಸರಿಯೇ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿವಾಸಗಳಿಗೆ ಪೊಲೀಸರು ಘೇರಾವ್ ಮಾಡುವುದು ಸರಿಯೇ? ಇದಕ್ಕೆಲ್ಲಾ ನಾವು ಹೆದರುವುದಿಲ್ಲ, ಹೋರಾಟ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.

ರಾಜಕೀಯ ದುರುದ್ದೇಶದಿಂದ ಸರ್ಕಾರವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದರು. ಆಗ ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಕೋಲಾಹಲ ಸೃಷ್ಟಿಸಿದ್ದರಿಂದ ಗುರುವಾರ ರಾಜ್ಯಸಭೆ ಕಲಾಪವನ್ನು ಸುಮಾರು ಒಂದು ಗಂಟೆಗಳ ಕಾಲ ಮುಂದೂಡಲಾಯಿತು.

ಇಡಿ ಈಗಾಗಲೇ ಬುಧವಾರ ದೆಹಲಿಯ ಹೆರಾಲ್ಡ್ ಹೌಸ್‌ನಲ್ಲಿರುವ ಅಸೋಸಿಯೇಟೆಡ್ ಜರ್ನಲ್ಸ್ ಮಾಲೀಕತ್ವದ ಸಂಸ್ಥೆಯಾದ ಯಂಗ್ ಇಂಡಿಯನ್ ಲಿಮಿಟೆಡ್‌ನ ಕಚೇರಿಗಳನ್ನು ಮುಚ್ಚಿದೆ. ಖರ್ಗೆ ಅವರು ಕಂಪನಿಯ ಅಧಿಕೃತ ಪ್ರತಿನಿಧಿಯಾಗಿದ್ದು, ಇಡಿ ಅಧಿಕಾರಿಗಳ ಪ್ರಕಾರ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಲ್ಲಿಲ್ಲದ ಕಾರಣ ಅವರು ಕಚೇರಿ ಆವರಣವನ್ನು ಸೀಲ್ ಮಾಡಿದ್ದಾರೆ.

 ಕಾಂಗ್ರೆಸ್ ಆಡಳಿತದಲ್ಲಿ ಅದು ಆಗಿರಬಹುದು

ಕಾಂಗ್ರೆಸ್ ಆಡಳಿತದಲ್ಲಿ ಅದು ಆಗಿರಬಹುದು

ಆಡಳಿತಾರೂಢ ಬಿಜೆಪಿಯಿಂದ, ಸಭಾನಾಯಕ ಪಿಯೂಷ್ ಗೋಯಲ್ ಉತ್ತರಿಸಿ ಯಾವುದೇ ಕಾನೂನು ಜಾರಿ ಸಂಸ್ಥೆಯ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಪಾದಿಸಿದರು. ಬಹುಶಃ ಅವರ (ಕಾಂಗ್ರೆಸ್) ಆಡಳಿತದಲ್ಲಿ ಅದು ಆಗಿರಬಹುದು ಎಂದು ವ್ಯಂಗ್ಯವಾಡಿದರು. ಈಗ, ಯಾರಾದರೂ ಏನಾದರೂ ತಪ್ಪು ಮಾಡಿದರೆ, ಏಜೆನ್ಸಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತವೆ ಎಂದು ಹೇಳಿದರು.

 ಕಲಾಪವನ್ನು ಮುಂದೂಡಿದ ವೆಂಕಯ್ಯ ನಾಯ್ಡು

ಕಲಾಪವನ್ನು ಮುಂದೂಡಿದ ವೆಂಕಯ್ಯ ನಾಯ್ಡು

ಇದು ಉಭಯ ಪಕ್ಷಗಳ ಸಂಸದರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಖರ್ಗೆ ಅವರು ಕೋರಿರುವ ವಿಷಯದ ಕುರಿತು ಚರ್ಚೆಗೆ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮುಂದೂಡಿದರು. ದಿನದ ಪ್ರಕ್ರಿಯೆಯ ಪ್ರಾರಂಭದಲ್ಲಿ ಪಟ್ಟಿ ಮಾಡಲಾದ ಪೇಪರ್‌ಗಳನ್ನು ಮೇಜಿನ ಮೇಲೆ ಹಾಕಿದ ನಂತರ, ನಾಯ್ಡು ಅವರು ನಿಯಮ 267 ರ ಅಡಿಯಲ್ಲಿ ಐದು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ. ಬೇರೆ ಯಾವುದನ್ನೂ ಸ್ವೀಕರಿಸಲಾಗಿಲ್ಲ ಎಂದು ಹೇಳಿದರು.

 ಡ್ರಗ್ ಸಾಗಣೆಯ ವಿಷಯವೂ ಪ್ರಸ್ತಾವವಾಗಬೇಕಿತ್ತು

ಡ್ರಗ್ ಸಾಗಣೆಯ ವಿಷಯವೂ ಪ್ರಸ್ತಾವವಾಗಬೇಕಿತ್ತು

ಎಎಪಿಯ ಸಂಜಯ್ ಸಿಂಗ್ ಮತ್ತು ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಾ ಅವರು ತಮ್ಮ ಸೂಚನೆಗಳ ಮೂಲಕ ಸೇನೆಯ ನೇಮಕಾತಿ ಯೋಜನೆ ಅಗ್ನಿಪಥ್ ಕುರಿತು ಚರ್ಚೆಯನ್ನು ಬಯಸಿದ್ದರು. ಆದರೆ ರಾಘವ್ ಚಡ್ಡಾ ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳಲ್ಲಿ ಡ್ರಗ್ ಸಾಗಣೆಯ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು.

 ನಿಯಮ 267 ರ ಅಡಿಯಲ್ಲಿ ನೋಟಿಸ್

ನಿಯಮ 267 ರ ಅಡಿಯಲ್ಲಿ ನೋಟಿಸ್

ಖರ್ಗೆ ಮತ್ತು ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಅವರು ರಾಜಕೀಯ ಸೇಡಿಗಾಗಿ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರುಪಯೋಗಪಡಿಸಿಕೊಂಡ ಆರೋಪವನ್ನು ಪ್ರಸ್ತಾಪಿಸಲು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದರು. ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಕಾಂಗ್ರೆಸ್ ಒಡೆತನದ ಪತ್ರಿಕೆ ನ್ಯಾಷನಲ್ ಹೆರಾಲ್ಡ್ ಆವರಣದಲ್ಲಿದ್ದ ಯಂಗ್ ಇಂಡಿಯನ್ ಕಂಪನಿಯ ಕಚೇರಿಗೆ ಜಾರಿ ನಿರ್ದೇಶನಾಲಯವು ತಾತ್ಕಾಲಿಕವಾಗಿ ಸೀಲ್ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+