"ನಾನು ಸರ್ಕಾರದ ಅಧಿಕಾರಿಯಲ್ಲ, ಭಾರತದ ಅಧಿಕಾರಿ": ಆಯೋಗದ ಭಿನ್ನಮತದ ಬೆನ್ನಲ್ಲೇ ಟಿ.ಎನ್. ಶೇಷನ್ ವಿಡಿಯೋ ವೈರಲ್

ಭಾರತೀಯ ಚುನಾವಣಾ ಆಯೋಗದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳು ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ 1990ರಲ್ಲಿ ಸಿಇಸಿ ಆಗಿ ಅಧಿಕಾರ ವಹಿಸಿಕೊಂಡದ್ದ ಟಿ.ಎನ್. ಶೇಷನ್ ಅವರ ಒಂದು ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ನವೆಂಬರ್ 2025 ರಿಂದ ಆಗಸ್ಟ್ 2026 ರ ನಡುವಿನ ಕೇವಲ 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಷಿ ಅವರು ಕನಿಷ್ಠ 14 ಬಾರಿ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ತಮ್ಮ ಗಮನಕ್ಕೆ ತಾರದೆ ಹಾಗೂ ಅಧಿಕೃತ ಅನುಮೋದನೆ ಇಲ್ಲದೆ ಹಲವು ಮಹತ್ವದ ನಿರ್ಧಾರಗಳನ್ನ ಮತ್ತು ಕೆಲವು ಆದೇಶಗಳನ್ನ ಹೊರಡಿಸಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.

ECI Internal Rift 14 Objections Raised Over Voter Rolls amp amp Why India Misses T N Seshan s Legacy

ಮತದಾರರ ಪಟ್ಟಿ ಪರಿಷ್ಕರಣೆಗೆ ಆಯುಕ್ತರ ಆಕ್ಷೇಪಗಳು

ಮೊದಲ ಬಾರಿಗೆ ಮತದಾನ ಮಾಡುವ ಹೊಸ ಮತದಾರರಿಗೆ ನೀಡಲಾಗುವ ಫಾರ್ಮ್ 6ರಲ್ಲಿ ಮಾಡಲಾದ ಬದಲಾವಣೆಗಳು, ಇಸಿಐನೆಟ್ ಮೂಲಕ ಮತದಾರರ ಪಟ್ಟಿ ದತ್ತಾಂಶವನ್ನ ಕೇಂದ್ರೀಕರಿಸುವುದು, ಹಾಗೂ ಮತದಾರರ ಹೆಸರುಗಳನ್ನ ಅಳಿಸುವುದು ಮತ್ತು ಮರುಸೇರ್ಪಡೆ ಮಾಡುವ ವಿಚಾರಗಳಲ್ಲಿ ಈ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಸುಮಾರು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 13 ಕೋಟಿಗೂ ಹೆಚ್ಚು ಹೆಸರುಗಳನ್ನ ಕೈಬಿಡಲಾಗಿದೆ ಎಂಬ ಅಂಶ ವರದಿಯಲ್ಲಿದೆ.

ಫಾರ್ಮ್ 6ರಲ್ಲಿ ಹೊಸದಾಗಿ ಸೇರಿಸಲಾದ ಘೋಷಣೆಯೊಂದರಲ್ಲಿ, ಹೊಸ ಮತದಾರರ ಪೋಷಕರು ಅಥವಾ ಅಜ್ಜ-ಅಜ್ಜಿ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಇದ್ದರೇ ಎಂದು ಕೇಳಲಾಗಿದೆ. ಈ ಬದಲಾವಣೆಯನ್ನ ಚುನಾವಣಾ ಆಯುಕ್ತ ಸುಖ್ಬೀರ್ ಸಿಂಗ್ ಸಂಧು ಅವರು ಅನಧಿಕೃತ ಮತ್ತು ಕಾನೂನುಬಾಹಿರ ಎಂದು ಕರೆದಿದ್ದಾರೆ.

ಇಂತಹ ಬದಲಾವಣೆ ತರಲು ನಿಯಮಾವಳಿಗಳಿಗೆ ತಿದ್ದುಪಡಿ ತರುವುದು ಕಡ್ಡಾಯ ಎಂದು ಇಬ್ಬರೂ ಆಯುಕ್ತರು ವಾದಿಸಿದ್ದಾರೆ. ಆದರೆ, ಈ ಭಿನ್ನಾಭಿಪ್ರಾಯಗಳು ಕೇವಲ ಆಂತರಿಕ ನಿರ್ಧಾರ-ತೆಗೆದುಕೊಳ್ಳುವ ಪ್ರಕ್ರಿಯೆಯ ಒಂದು ಭಾಗವಷ್ಟೇ ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಅಂತಿಮ ನಿರ್ಧಾರಗಳನ್ನ ಸರ್ವಾನುಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ವೈರಲ್ ಆಗುತ್ತಿರುವ ಟಿ.ಎನ್. ಶೇಷನ್ ಅವರ ಮಾತುಗಳು

ಪ್ರಸ್ತುತ ಚುನಾವಣಾ ಆಯೋಗದ ನಿರ್ಧಾರಗಳನ್ನ ಯಾರು ಮತ್ತು ಹೇಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಪ್ರಶ್ನೆಗಳೆದ್ದಿರುವ ಈ ಹೊತ್ತಿನಲ್ಲಿ, ದೇಶದ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಶೇಷನ್ ಅವರು ಆಯೋಗದ ಸ್ವಾಯತ್ತತೆಯ ಬಗ್ಗೆ ಮಾತನಾಡಿದ್ದು, "ನಾನು ಭಾರತ ಸರ್ಕಾರದ ಮುಖ್ಯ ಚುನಾವಣಾ ಆಯುಕ್ತನಲ್ಲ, ಬದಲಾಗಿ ನಾನು ಭಾರತದ ಮುಖ್ಯ ಚುನಾವಣಾ ಆಯುಕ್ತ" ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಾಕ್ಯ ಸಣ್ಣ ಬದಲಾವಣೆಯಂತೆ ಕಂಡರೂ, ಇದರ ನಡುವೆ ಬಹುದೊಡ್ಡ ವ್ಯತ್ಯಾಸವಿದೆ, ಏಕೆಂದರೆ ತಾನು ಸರ್ಕಾರದ ಭಾಗವಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ತಮ್ಮ ಹೊಣೆಗಾರಿಕೆಯ ಬಗ್ಗೆ ಮಾತನಾಡಿದ ಶೇಷನ್, "ನಾನು ಖಂಡಿತವಾಗಿಯೂ ರಾಷ್ಟ್ರಪತಿಗಳಿಗೆ, ಜನತೆಗೆ ಮತ್ತು ಸಂಸತ್ತಿಗೆ ಉತ್ತರದಾಯಿಯಾಗಿದ್ದೇನೆ; ಹಾಗೆಯೇ ನಾನು ಮಾಡುವ ತಪ್ಪುಗಳಿಗೆ ನ್ಯಾಯಾಲಯಕ್ಕೆ ಮಾತ್ರ ಉತ್ತರದಾಯಿಯಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ, ನೆರೆಯ ರಾಷ್ಟ್ರಗಳಲ್ಲಿ ನಡೆಯುವ ಚುನಾವಣೆಗಳಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲದಿರುವುದನ್ನ ಉಲ್ಲೇಖಿಸಿದ ಅವರು, ಭಾರತದಲ್ಲಿ ಮಾತ್ರ ಚುನಾವಣೆಗಳು ಅತ್ಯಂತ ಹೆಚ್ಚಿನ ವಿಶ್ವಾಸಾರ್ಹತೆಯನ್ನ ಹೊಂದಿವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದ ಶೇಷನ್ ಆಡಳಿತ

1990ರಲ್ಲಿ ಸಿಇಸಿ ಆಗಿ ಅಧಿಕಾರ ವಹಿಸಿಕೊಂಡ ಟಿ.ಎನ್. ಶೇಷನ್, ಭಾರತದ ಚುನಾವಣಾ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದರು. ಅಲ್ಲಿಯವರೆಗೆ ಕೇವಲ ನಾಮಕವಸ್ಥೆಯಾಗಿದ್ದ ಚುನಾವಣಾ ನೀತಿ ಸಂಹಿತೆಯನ್ನ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದರು.

ಮತದಾರರ ಗುರುತಿನ ಚೀಟಿ ಪರಿಚಯಿಸಿದ್ದು, ಪ್ರಚಾರದ ವೆಚ್ಚಗಳಿಗೆ ಕಡಿವಾಣ ಹಾಕಿದ್ದು ಮತ್ತು ಬೂತ್ ಕ್ಯಾಪ್ಚರಿಂಗ್ ತಡೆಗಟ್ಟಿದ್ದು ಅವರ ಪ್ರಮುಖ ಸಾಧನೆಗಳು. ಅಧಿಕಾರದಲ್ಲಿದ್ದ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಂತಹ ಪ್ರಭಾವಿ ನಾಯಕರ ನಿರ್ಧಾರಗಳನ್ನ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಚುನಾವಣಾ ಆಯೋಗದ ಪರಮಾಧಿಕಾರವನ್ನು ಎತ್ತಿಹಿಡಿದ ಕೀರ್ತಿ ಶೇಷನ್ ಅವರಿಗೆ ಸಲ್ಲುತ್ತದೆ.

ಪ್ರಸ್ತುತ ಆಯೋಗದ ಕಾರ್ಯವೈಖರಿ ಹಾಗೂ ಸ್ವಾಯತ್ತತೆ ಚರ್ಚೆಗೆ ಗ್ರಾಸವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ರಕ್ಷಕನಂತಿದ್ದ ಟಿ.ಎನ್. ಶೇಷನ್ ಅವರಂತಹ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಅಧಿಕಾರಿಯ ಮೌಲ್ಯಗಳನ್ನ ದೇಶ ಮತ್ತೊಮ್ಮೆ ಸ್ಮರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+