ಭಾರತ-ಪಾಕ್ ಗಡಿಯಲ್ಲಿ ಮತ್ತೆ ಭೂಕಂಪ: 4.8 ತೀವ್ರತೆ ದಾಖಲು
ಶ್ರೀನಗರ, ಸೆಪ್ಟೆಂಬರ್ 26: ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಇಂದು(ಸೆ.26) ಮಧ್ಯಾಹ್ನ ಮತ್ತೆ ಭೂಕಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 4.8 ತೀವ್ರತೆ ದಾಖಲಾಗಿದೆ.
ಸೆಪ್ಟೆಂಬರ್ 24 ರಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನದ ಗಡಿಯ ಪ್ರದೇಶದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 19 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಮುನ್ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಹೆದ್ದಾರಿಗಳು ಕುಸಿದು, ಸಾಕಷ್ಟು ಹಾನಿ ಸಂಭವಿಸಿತ್ತು. ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲಾಗಿತ್ತು. ಅದಾಗಿ ಎರಡೇ ದಿನದಲ್ಲಿ ಮತ್ತೊಮ್ಮೆ ಭೂಕಂಪ ಸಂಭವಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬಳಿ ಉಭಯ ದದೇಶಗಳ ಗಡಿ ಪ್ರದೇಶದಲ್ಲಿ ಇಂದು ಮಧ್ಯಾಹ್ನ 12.31 ಕ್ಕೆ ಭೂಕಂಪ ಸಂಭವಿಸಿತ್ತು ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಮಂಗಳವಾರ ಸಂಭವಿಸಿದ ಭೂಕಂಪದಲ್ಲಿ 10 ಕಿಮೀ ಆಳದಲ್ಲಿಭೀಮಿ ಕಂಪಿಸಿದ ಪರಿಣಾಮ ಭಾರತದಲ್ಲಿ ಪಂಜಾಬ್, ದೆಹಲಿ, ಹರ್ಯಾಣ, ಹಿಮಾಚಲಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿತ್ತು.












Click it and Unblock the Notifications