ಅಂಡಮಾನ್ ದ್ವೀಪದಲ್ಲಿ ಭೂಕಂಪ: 5.6 ತೀವ್ರತೆ ದಾಖಲು
ಪೋರ್ಟ್ ಬ್ಲೇರ್, ಫೆಬ್ರವರಿ 13: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಇಂದು(ಫೆ.13) ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.6 ತೀವ್ರತೆ ದಾಖಲಾಗಿದೆ.
ಬೆಳಿಗ್ಗೆ 8.09 ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದುವರೆಗೆ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜನವರಿ 14 ರಂದು ಅಂಡಮಾನ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ದಾಖಲಾಗಿತ್ತು. ಇದಕ್ಕೂ ಮುನ್ನ ಡಿ.29 ರಂದು ಸಹ ಈ ಭಾಗದಲ್ಲಿ ಭೂಕಂಪ ಸಂಭವಿಸಿ, ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲಾಗಿತ್ತು.












Click it and Unblock the Notifications