• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೆಹಲಿಯಲ್ಲಿ ಭೂಕಂಪನ; ಮನೆಯಿಂದ ಓಡಿಬಂದ ಜನ!

|
Google Oneindia Kannada News

ನವದೆಹಲಿ, ನವೆಂಬರ್ 12: ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲಿನ ಕೆಲವು ನಗರಗಳಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸಿದಂತೆ ಭಾಸವಾಗುತ್ತಿದ್ದಂತೆ ಜನರು ಮನೆಗಳು ಹಾಗೂ ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ ಎಂದು ವರದಿಯಾಗಿದೆ.

ಕಳೆದೊಂದು ವಾರದಲ್ಲಿ ನವದೆಹಲಿಯಲ್ಲಿ ಈ ರೀತಿಯ ಭೂಕಂಪನದ ಅನುಭವ ಎರಡನೇ ಬಾರಿ ಆಗುತ್ತಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ತೀವ್ರತೆ ದಾಖಲಾಗಿದ್ದು, ನೇಪಾಳದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ ಎಂದು ದೂರದರ್ಶನ ಸಾರ್ವಜನಿಕ ಪ್ರಸಾರಕ ವರದಿ ಮಾಡಿದೆ.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: ಮನೆ ಕುಸಿದು 6 ಸಾವು- ದೆಹಲಿಯಲ್ಲಿ ಕಂಪನದ ಅನುಭವನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: ಮನೆ ಕುಸಿದು 6 ಸಾವು- ದೆಹಲಿಯಲ್ಲಿ ಕಂಪನದ ಅನುಭವ

ಇದೇ ವಾರದ ಆರಂಭದಲ್ಲಿ ದೆಹಲಿ ಪ್ರದೇಶದಲ್ಲಿ ಅನುಭವಿಸಿದ ಭೂಕಂಪದ ತೀವ್ರತೆಗಿಂತ ಕಡಿಮೆಯಾಗಿದೆ. ಈ ಭೂಕಂಪನದ ಆಳ ಮತ್ತೆ ಭೂಮಿಯ ಮೇಲ್ಮೈಯಿಂದ 10 ಕಿಲೋ ಮೀಟರ್ ಕೆಳಗಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ. ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿವೆ.

ಬುಧವಾರವೂ ದೆಹಲಿಯಲ್ಲಿ ನಡುಗಿದ ಭೂಮಿ:

ಬುಧವಾರ ನಸುಕಿನ ವೇಳೆ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತು. ಇದರ ಬೆನ್ನಲ್ಲೇ ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿಯೂ ಕಂಪನದ ಅನುಭವವಾಯಿತು. ಬುಧವಾರ ನಸುಕಿನ 1.57ರ ಸುಮಾರಿಗೆ ಭೂಕಂಪ ಸಂಭವಿಸಿತು, ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಪ್ರಕಾರ ನೇಪಾಳ ಭೂಕಂಪದ ಕೇಂದ್ರಬಿಂದುವಾಗಿತ್ತು.

ನೇಪಾಳದಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದ್ದು, ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಮಾಹಿತಿಯ ಪ್ರಕಾರ, ನೇಪಾಳದಲ್ಲಿ ಮಂಗಳವಾರ ರಾತ್ರಿ 8.52 ಕ್ಕೆ 4.9 ತೀವ್ರತೆಯ ಮೊದಲ ಭೂಕಂಪವಾಗಿತ್ತು. ನಂತರ 9.41 ಕ್ಕೆ 3.5 ತೀವ್ರತೆಯ ಭೂಕಂಪ ದಾಖಲಾಯಿತು. ಬುಧವಾರ ಮುಂಜಾನೆ 1.57ಕ್ಕೆ 6.3 ತೀವ್ರತೆಯ ಮೂರನೇ ಭೂಕಂಪನ ಸಂಭವಿಸಿದ್ದು, ಇದರ ಕಂಪನವು ದೆಹಲಿಯಲ್ಲಿ ಅನುಭವವಾಯಿತು.

English summary
Earthquake in Delhi's Neighbouring Areas; Second Time This Week. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X