Earthquake: ಜಾರ್ಖಂಡ್‌ನ ರಾಂಚಿ, ಜೆಮ್‌ಶೆಡ್‌ಪುರದಲ್ಲಿ ಪ್ರಬಲ ಭೂಕಂಪ!
ಗೋವರ್ಧನ ಪೂಜೆಯಂದು ಶನಿವಾರ ಜಾರ್ಖಂಡ್‌ನ ಹಲವು ಭಾಗಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.3 ಎಂದು ಅಳೆಯಲಾಗಿದೆ. ರಾಂಚಿ ಮತ್ತು ಜೆಮ್‌ಶೆಡ್‌ಪುರದಲ್ಲಿ ಭೂಕಂಪನದ ಅನುಭವವಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಕಂಪನದಿಂದ ಭಯಭೀತರಾದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಶನಿವಾರ ಬೆಳಗ್ಗೆ ಜೆಮ್‌ಶೆಡ್‌ಪುರದ ಕೆಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಇದಲ್ಲದೇ ರಾಂಚಿಯ ತಮರ್ ನಲ್ಲೂ ಕಂಪನದ ಅನುಭವವಾಗಿದೆ. ಸುಮಾರು 5 ನಿಮಿಷಗಳ ಕಾಲ ಭೂಮಿ ಕಂಪಿಸಿತು ಎಂದು ಜನರು ಹೇಳಿದ್ದಾರೆ. ಇದಲ್ಲದೆ, ಜಾರ್ಖಂಡ್‌ನ ಚೈಬಾಸಾದಲ್ಲಿಯೂ ಜನರು ಭೂಕಂಪದ ಭಯದಿಂದ ಮನೆಗಳಿಂದ ಹೊರಬಂದಿರುವ ವರದಿಗಳಾಗಿವೆ.

ಜಾರ್ಖಂಡ್‌ನ ಖಾರ್ಸಾವಾನ್ ಜಿಲ್ಲೆಯಿಂದ 13 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಕಂಡುಬಂದಿದೆ. ಶನಿವಾರ ಬೆಳಗ್ಗೆ 9.20ಕ್ಕೆ ಭೂಕಂಪ ಸಂಭವಿಸಿದೆ. ಇದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.3 ಎಂದು ಅಳೆಯಲಾಯಿತು. ಆದರೆ ಇದುವರೆಗೆ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ ಅಳೆಯಲಾಗುತ್ತದೆ. ರಿಕ್ಟರ್ ಮಾಪಕ ಭೂಕಂಪದ ಅಲೆಗಳನ್ನು ಅಳೆಯಲು ಇರುವ ಗಣಿತದ ಮಾಪಕವಾಗಿದೆ. ರಿಕ್ಟರ್ ಮಾಪಕದಲ್ಲಿ, ಭೂಕಂಪಗಳನ್ನು 1 ರಿಂದ 9 ರವರೆಗೆ ಅಳೆಯಲಾಗುತ್ತದೆ. ಈ ಪ್ರಮಾಣವು ಭೂಮಿಯಿಂದ ಹೊರಸೂಸುವ ಶಕ್ತಿಯ ಆಧಾರದ ಮೇಲೆ ತೀವ್ರತೆಯನ್ನು ಅಳೆಯುತ್ತದೆ.












Click it and Unblock the Notifications