Get Updates
Get notified of breaking news, exclusive insights, and must-see stories!

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿರುವ ಪ್ರಮುಖ ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ.. ಮಾರ್ಗಗಳು, ಪ್ರಯೋಜನೆಗಳ ವಿವರ

Major Expressway Inauguration: ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಇದೀಗ ನಾಳೆ (ಆಗಸ್ಟ್‌ 17) ವಿಮಾನ ನಿಲ್ದಾಣ ಸಂಪರ್ಕಿಸಲಿರುವ ಬಹುನಿರೀಕ್ಷಿತ ಎಕ್ಸ್‌ಪ್ರೆಸ್‌ ವೇ ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಹಾಗಾದ್ರೆ, ಇವುಗಳಿಂದ ಯಾರಿಗೆಲ್ಲಾ ಏನೆಲ್ಲಾ ಪ್ರಯೋಜನ ಆಗಲಿವೆ ಹಾಗೂ ಯಾವ್ಯಾವ ಮಾರ್ಗಗಳಲ್ಲಿ ಹಾದುಹೋಗಲಿವೆ ಎನ್ನುವ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ದೇಶದಲ್ಲಿ ಹಲವು ಎಕ್ಸ್‌ಪ್ರೆಸ್‌ ವೇಗಳು ನಿರ್ಮಾಣ ಹಂತದಲ್ಲಿದ್ದರೆ, ಇನ್ನೂ ಕೆಲವು ಉದ್ಘಾಟನೆ ಹಂತದಲ್ಲಿವೆ. ಈ ಪೈಕಿ ಕರ್ನಾಟಕದಲ್ಲಿರುವ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕೂಡ ಲೋಕಾರ್ಪಣೆ ಹಂತದಲ್ಲಿದೆ. ಈ ನಡುವೆಯೇ ಇದೀಗ ನಾಳೆ ಅಂದರೆ ಆಗಸ್ಟ್‌ 17ರಂದು ಎರಡು ಪ್ರಮುಖ ಎಕ್ಸ್‌ಪ್ರೆಸ್‌ ವೇಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಕಣ್ಣಾಡಿಸಿ.

Dwarka Expressway UER-II opening on August 17 by PM Modi

ವಿಮಾನ ನಿಲ್ದಾಣಕ್ಕೆ ಅತೀ ಕಡಿಮೆ ಸಮಯ ಅಂದ್ರೆ, ನಿಮಿಷಗಳಲ್ಲಿ ಎಕ್ಸ್‌ಪ್ರೆಸ್‌ ವೇ ಮೂಲಕ ತಲುಪಬಹುದು. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯ ಆಗಲಿದೆ. ಅಲ್ಲದೆ, ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕ್ರಾಂತಿ ಆಗಲಿದೆ. ಅಂತಹ ಎಕ್ಸ್‌ಪ್ರೆಸ್‌ ವೇಗಳು ಭಾನುವಾರ (ಆಗಸ್ಟ್‌ 17)ದಿಂದಲೇ ಸಂಚಾರ ಮುಕ್ತ ಆಗಲಿವೆ.

ಈ ಎಕ್ಸ್‌ಪ್ರೆಸ್‌ ವೇನಿಂದ ನೋಯ್ಡಾದಿಂದ ದೆಹಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣ ಸುಲಭ ಆದಂತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಹುನಿರೀಕ್ಷಿತ ಅರ್ಬನ್ ಎಕ್ಸ್‌ಟೆನ್ಶನ್ ರೋಡ್-II ಹಾಗೂ ದ್ವಾರಕಾ ಎಕ್ಸ್‌ಪ್ರೆಸ್‌ವೇ ಗಳನ್ನು ಭಾನುವಾರ ಉದ್ಘಾಟನೆ ಮಾಡಲಿದ್ದಾರೆ.

ರಸ್ತೆ ಮೂಲಕ ನೋಯ್ಡಾದಿಂದ ದೆಹಲಿಗೆ ತಲುಪಬೇಕೆಂದರೆ, ಒಂದು ಗಂಟೆಗಿಂತ ಹೆಚ್ಚು ಸಮಯ ಬೇಕಾಗುತ್ತಿತ್ತು. ಇದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿತ್ತು. ಇದನ್ನರಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಕ್ಸ್‌ಪ್ರೆಸ್‌ ಅನ್ನು ನಿರ್ಮಾಣ ಮಾಡಿದ್ದು, ಇದರಿಂದ ಪ್ರಯಾಣದ ಅವದೀ ಕೇವಲ 20 ನಿಮಿಷಕ್ಕೆ ಇಳಿಕೆಯಾಗಿದೆ. ಇದರಿಂದ ನೋಯ್ಡಾ ಹಾಗೂ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಪ್ರಯಾಣದ ಸಮಯ ಉಳಿತಾಯ ಆದಂತಾಗಲಿದೆ.

ಯುಇಆರ್-II ರಸ್ತೆ: ದೆಹಲಿಯ ಹೊಸ ಹೊರ ವರ್ತುಲ ರಸ್ತೆ ಎಂದು ಕರೆಯಲ್ಪಡುವ ಯುಇಆರ್-II ರಸ್ತೆಯು 76 ಕಿಲೋ ಮೀಟರ್ ಉದ್ದ ಇದ್ದು, ಅಲಿಪುರದಿಂದ ವಿಮಾನ ನಿಲ್ದಾಣದ ಬಳಿಯ ಮಹಿಪಾಲ್ಪುರ ವರೆಗೆ ವ್ಯಾಪಿಸಿದೆ. ಸುಮಾರು 7,716 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಹೆದ್ದಾರಿ ಮುಂಡ್ಕಾ, ಬಕ್ಕರ್ವಾಲಾ, ನಜಾಫ್‌ಗಢ ಮತ್ತು ದ್ವಾರಕಕ್ಕೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ದೆಹಲಿ-ಚಂಡೀಗಢ, ದೆಹಲಿ-ರೋಹ್ಟಕ್ ಮತ್ತು ಸೋನಿಪತ್‌ನಂತಹ ಪ್ರಮುಖ ಮಾರ್ಗಗಳಲ್ಲಿಯೂ ಹಾದುಹೋಗಲಿದೆ.

ದ್ವಾರಕ ಎಕ್ಸ್‌ಪ್ರೆಸ್‌ ವೇ ಉದ್ದ 29 ಕಿಲೋ ಮೀಟರ್ ಆಗಿದ್ದು, ಇದು ಖೇರ್ಕಿ ದೌಲಾ ಟೋಲ್ ಪ್ಲಾಜಾದಿಂದ ಮಹಿಪಾಲ್ಪುರದ ಶಿವ ಮೂರ್ತಿಯವರೆಗೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಪ್ರಧಾನಿ ಮೋದಿನ ಅವರು 17 ಆಗಸ್ಟ್‌ 2025ರಂದು ಉದ್ಘಾಟನೆ ಮಾಡಲಿದ್ದಾರೆ. ಈಗಾಗಲೇ ಗುರುಗ್ರಾಮ ಭಾಗದಲ್ಲಿ ಮಾರ್ಚ್ 2024ರಲ್ಲಿಯೇ ಉದ್ಘಾಟನೆ ಮಾಡಲಾಯಿತು. ಈ ಎರಡು ರಸ್ತೆಗಳು ವಿಮಾನ ನಿಲ್ದಾಣ, ಗುರುಗ್ರಾಮ ಮತ್ತು ಜೈಪುರದ ಕಡೆಗೆ ಹೋಗುವ ಮಾರ್ಗದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತವೆ.

ಯುಇಆರ್‌-II ಹೆದ್ದಾರಿಯನ್ನು ದೆಹಲಿ ಮಾಸ್ಟರ್ ಪ್ಲಾನ್ 2021ರ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು ದೆಹಲಿಯಲ್ಲಿ 54 ಕಿಲೋ ಮೀಟರ್ ಮತ್ತು ಹರಿಯಾಣದಲ್ಲಿ 21 ಕಿಲೋ ಮೀಟರ್ ವ್ಯಾಪಿಸಿದೆ. ಇದು 8 ಲೇನ್‌ಗಳಿಂದ ಕೂಡಿದ್ದು, ಸರ್ವಿಸ್ ರಸ್ತೆಗಳು, ನಾಲ್ಕು ಇಂಟರ್‌ಚೇಂಜ್‌ಗಳು ಮತ್ತು ಹಲವು ಅಂಡರ್‌ಪಾಸ್‌ಗನ್ನು ಒಳಗೊಂಡಿದೆ.

9,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ದ್ವಾರಕಾ ಎಕ್ಸ್‌ಪ್ರೆಸ್‌ವೇ ಅನ್ನು ನಾಲ್ಕು ಭಾಗಗಳಲ್ಲಿ ಮತ್ತು ಯುಇಆರ್‌-II ಅನ್ನು 5 ಹಂತಗಳಲ್ಲಿ ಪೂರ್ಣ ಮಾಡಲಾಗಿದೆ. ಈ ಎರಡು ಎಕ್ಸ್‌ಪ್ರೆಸ್‌ ವೇಗಳು ದೆಹಲಿ-ಎನ್‌ಸಿಆರ್‌ ರಸ್ತೆ ಜಾಲದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿಗೆ ಸಾಕ್ಷಿಯಾಗಲಿವೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಇನ್ನು ಇವೆರಡು ಪ್ರಮುಖ ಎಕ್ಸ್‌ಪ್ರೆಸ್‌ ವೇಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾನೆ ಮಾಡಲಿದ್ದಾರೆ, ಈ ವೇಳೆ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೆಹಲಿ ಸಿಎಂ ರೇಖಾ ಗುಪ್ತಾ ಸಾಥ್‌ ನೀಡಲಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿರಲಿದ್ದಾರೆ ಎನ್ನುವ ಮಾಹಿತಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+