ಎಐಎಡಿಎಂಕೆ ಕಚೇರಿಯಿಂದ ಶಶಿಕಲಾ ಫೋಟೋ ತೆಗೆಯಲು ಪನ್ನೀರ್ ಬಣ ಆಗ್ರಹ
ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ನಿಧನದ ನಂತರ, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣ ಹಾಗೂ ಶಶಿಕಲಾ ನಟರಾಜನ್ ಬಣ ಎಂಬ ಎರಡು ಭಾಗಗಳಾಗಿ ಒಡೆದು ಹೋಗಿದ್ದ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಗ್ಗೂಡಿಸಲು ಪ್ರಯತ್ನ ಸಾಗಿದೆ.
ಚೆನ್ನೈ, ಏಪ್ರಿಲ್ 25: ಎಐಎಡಿಎಂಕೆಯ ಇಬ್ಬಣಗಳ ನಡುವೆ ಶೀಘ್ರದಲ್ಲೇ ನಡೆಯಲಿರುವ ಸಂಧಾನ ಮಾತಕತೆಗೂ ಮುನ್ನ ನಗರದ ರಾಯಪೇಟ್ಟಾದಲ್ಲಿನ ಕಚೇರಿಯಲ್ಲಿರುವ ಶಶಿಕಲಾ ನಟರಾಜನ್ ಅವರ ಭಾವಚಿತ್ರವನ್ನು ತೆಗೆದುಹಾಕಬೇಕೆಂದು ಪನ್ನೀರ್ ಸೆಲ್ವಂ ಬಣ ತಾಕೀತು ಮಾಡಿದೆ.
ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ನಿಧನದ ನಂತರ, ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣ ಹಾಗೂ ಶಶಿಕಲಾ ನಟರಾಜನ್ ಬಣ ಎಂಬ ಎರಡು ಭಾಗಗಳಾಗಿ ಒಡೆದು ಹೋಗಿದ್ದ ಎಐಎಡಿಎಂಕೆ ಪಕ್ಷವನ್ನು ಮತ್ತೆ ಒಗ್ಗೂಡಿಸಲು ಪ್ರಯತ್ನ ಸಾಗಿದೆ.

ಅತ್ತ, ಶಶಿಕಲಾ ಅವರೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದೀ ರೀತಿ ಮುಂದುವರಿದರೆ ಪಕ್ಷದ ಅಸ್ತಿತ್ವಕ್ಕೆ ಸಂಚಕಾರ ಬರುವ ಅಪಾಯವನ್ನು ತಪ್ಪಿಸಲು ಪಕ್ಷದ ಮುಖಂಡರು ಒಡೆದು ಹೋಗಿರುವ ಎರಡು ಬಣಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಹಾಗಾಗಿ, ಸಂಧಾನ ಮಾತುಕತೆಗೆ ಕೆಲ ದಿನಗಳ ಹಿಂದೆಯೇ ಒಪ್ಪಿದ್ದ ಸೆಲ್ವಂ, ಶಶಿಕಲಾ ಅವರ ಸಂಬಂಧಿಗಳನ್ನು ಪಕ್ಷದಿಂದ ಹೊರಗಿಡಬೇಕೆಂದು ಆಜ್ಞಾಪಿಸಿದ್ದರು. ಅದರಂತೆ, ಶಶಿಕಲಾ ಅವರಿಂದ ಪಕ್ಷದ ಸಹಾಯಕ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.
ಇದೀಗ, ಸಂಧಾನ ಮಾತುಕತೆ ನಡೆಯಲಿರುವ ಪಕ್ಷದ ಕಚೇರಿಯಲ್ಲಿ ಶಶಿಕಲಾ ಅವರ ಭಾವಚಿತ್ರವನ್ನು ತೆಗೆಸುವಂತೆ ಸೆಲ್ವಂ ಬಣ ತಾಕೀತು ಮಾಡಿದೆ.

Click it and Unblock the Notifications